ಕಲಬುರಗಿ[ಜ.24]  ಸ್ವಕ್ಚೇತ್ರಕ್ಕೆ ಮರಳಿದ ಕಾಂಗ್ರೆಸ್ ಅತೃಪ್ತ ಶಾಸಕ ಡಾ. ಉಮೇಶ್  ಜಾಧವ್ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಬೆಡಸೂರು ತಾಂಡಾದಲ್ಲಿ ಮಾತನಾಡಿ,  ನಮ್ಮ ಕ್ಷೇತ್ರ ಸರಿಯಾಗಿ ಅಭಿವೃದ್ದಿಯಾಗ್ತಿಲ್ಲ, ಇದೀಗ ಜನ ಅಭಿವೃದ್ಧಿ ಬಯಸ್ತಿದಾರೆ ಎಂದು ಜನರ ಹಿತಚಿಂತನೆ ಮಾತನ್ನಾಡಿದರು.

ಬಿಜೆಪಿಗೆ ಹೋಗುವುದಾದರೆ ಹೋಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಕೊಟ್ಟಿದ್ದಾರೆ. ಇಂಥ ಹೇಳಿಕೆಗಳನ್ನ ನೀಡುತ್ತಿರುವುದರಿಂದಲೇ ದೇಶದಲ್ಲಿ ಕಾಂಗ್ರೆಸ್ ಪಕ್ಷ ನೆಲ ಕಚ್ಚುತ್ತಿದೆ. ಪ್ರಿಯಾಂಕ್ ಖರ್ಗೆಗೆ ಜನರ ಕುಂದುಕೊರತೆಗಳನ್ನ ಆಲಿಸಲು ಸಮಯವಿಲ್ಲ. ಪಾಪ ಒಬ್ಬನೇ ಇದಾನೆ, ಖಾತೇ ಬೇರೆ ದೊಡ್ಡದು ಎಂದು ಜಾಧವ್ ವ್ಯಂಗ್ಯವಾಡಿದರು.

ಎಲ್ಲ ಮುಗಿದ ಮೇಲೆ  'ಐ ಆಮ್ ನಾಟ್ ಫಾರ್ ಸೇಲ್' ಎಂದ ಶಾಸಕ

ನೆರೆಯ ತೆಲಂಗಾಣದವರು ಚಿಂಚೋಳಿಯ ಜಮೀನು ಅತಿಕ್ರಮಿಸಿಕೊಂಡಿದ್ದಾರೆ. ಇದರ ಬಗ್ಗೆ ಉಸ್ತುವಾರಿ ಸಚಿವರು ಚಕಾರವೆತ್ತುತ್ತಿಲ್ಲ. ಐವತ್ತು ಕೋಟಿಗೆ ಜಾಧವ್ ಮಾರಾಟವಾಗಿದ್ದಾರೆ ಎಂದು ನಮ್ಮ ಮನೆ ಮುಂದೆ ಕಾಂಗ್ರೆಸ್‌ನವರು ಪ್ರತಿಭಟನೆ ಮಾಡಿದ್ದರು. ಒಂದು ಮಾತು ನೆನಪಿಟ್ಟುಕೊಳ್ಳಿ, ಜಾಧವ್ ಮಾರಾಟವಾಗೋ ವ್ಯಕ್ತಿಯಲ್ಲ ಎಂದು ಎಚ್ಚರಿಸಿದರು.

ಕಾಣದ ‘ಕೈ‘ಗಳಿಂದ ಶಾಸಕ ಕಂಪ್ಲಿ ಗಣೇಶ್‌ ಬಚಾವ್ ಮಾಡಲು ಯತ್ನ?

ಮುಂಬೈನ ಹೋಟೆಲ್‌ವೊಂದರಲ್ಲಿ ಅಶ್ವಥ್ ನಾರಾಯಣ್ ಜೊತೆ ಇರೋ ಫೋಟೊ ನನ್ನದಲ್ಲ. ಇದು ಹಳೆ ಫೋಟೊ ಇದೀಗ ವೈರಲ್ ಆಗಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದ ಫೋಟೋಕ್ಕೂ ಉತ್ತರ ನೀಡುವ ಮಾತನ್ನಾಡಿದರು.