ಕಲಬುರಗಿ, [ಜ.24]: ಕಳೆದ 10 ದಿನಗಳಿಂದ ಮುಂಬೈನಲ್ಲೇ ಬೀಡುಬಿಟ್ಟಿದ್ದ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಅತೃಪ್ತ ಶಾಸಕ ಡಾ. ಉಮೇಶ್ ಜಾಧವ್ ಸ್ವಕ್ಷೇತ್ರಕ್ಕೆ ಆಗಮಿಸಿ ಚಿಂಚೋಳಿ ತಾಲೂಕಿನ ಬೇಡ ಸೂರಿನಲ್ಲಿ ಮಾತನಾಡಿದ್ದಾರೆ

ಆಪರೇಶನ್ ಕಮಲಕ್ಕೆ ಒಳಗಾಗುತ್ತಾರೆ ಎಂದು ಹಬ್ಬಿದ್ದ ವಿಚಾರವನ್ನೇ ಇಟ್ಟುಕೊಂಡು ಬಿಜೆಪಿಗೆ ಶಾಕ್ ನೀಡಿದ್ದಾರೆ. ಜತೆಗೆ ಕಾಂಗ್ರೆಸ್ ನಾಯಕರ ವಿರುದ್ಧವೂ ವಾಗ್ದಾಳಿ ಮಾಡಿದ್ದಾರೆ. ಕಾರ್ಯಕರ್ತರು ಈ ರೀತಿ ವದಂತಿ ಹಬ್ಬಿಸಿ ನನ್ನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಮೇಶ ಜಾಧವನನ್ನು ಖರೀದಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ವದಂತಿ ಹಬ್ಬಿಸಿ ನನ್ನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು ಸರಿಯಲ್ಲ.  ನಾನು ಕಾಂಗ್ರೆಸ್ ನಲ್ಲಿಯೇ ಇದ್ದೇನೆ.‌ ಆದರೆ ನಾಯಕರ ನಡೆಯಿಂದ ನಾನು ಸಿಟ್ಟಾಗಿದ್ದು ಸತ್ಯ. ನನ್ನ ವಿರುದ್ದ  ಮಾಡುತ್ತಿರುವ ಸುಳ್ಳು ಆರೋಪಕ್ಕೆ ಅಂಜುವ ಜಾಯಮಾನ ನನ್ನದಲ್ಲ ಎಂದಿದ್ದಾರೆ.

ಕಾಣದ ‘ಕೈ‘ಗಳಿಂದ ಶಾಸಕ ಕಂಪ್ಲಿ ಗಣೇಶ್‌ ಬಚಾವ್ ಮಾಡಲು ಯತ್ನ?

ನನ್ನ ಮನೆ ಮುಂದೆ ಪ್ರತಿಭಟನೆ ಮಾಡ್ತಿರಲ್ವಾ ? ಜಾರಕಿಹೊಳಿ ಸೇರಿ ಯಾವುದೇ ಕಾಂಗ್ರೆಸ್ ಶಾಸಕರ ಮನೆ ಮುಂದೆ ತಾಕತ್ ಇದ್ರೆ ಪ್ರತಿಭಟನೆ ಮಾಡಿ ಎಂದು ಸವಾಲು ಹಾಕಿದ್ದಾರೆ. ನನ್ನೊಬ್ಬನ ಮನೆ ಮುಂದೆ ಪ್ರತಿಭಟನೆ ನಡೆಸುವ ಅಗತ್ಯ ಏನಿತ್ತು ಇವರಿಗೆ ಎಂದು ಪ್ರಶ್ನೆ ಮಾಡಿರುವ ಜಾಧವ್ ದೋಸ್ತಿ ಸರಕಾರದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಆಡಳಿತ ವೈಖರಿ ನನಗೆ ತೃಪ್ತಿ ತಂದಿಲ್ಲ ಎಂದು ನೆಪವೊಂದನ್ನು ಹೇಳಿದ್ದಾರ

ಶಾಸಕಾಂಗ ಸಭೆಗೆ ಅನಾರೋಗ್ಯದ ಹಾಜರಾಗಿರಲಿಲ್ಲ. ಅಷ್ಟೊಂದು ತುರ್ತು ಶಾಸಕಾಂಗ ಸಭೆ ಕರೆಯುವ ಅಗತ್ಯವಾದರೂ ಏನಿತ್ತು?  ಶಾಸಕಾಂಗ ಸಭೆಯ ಬಗ್ಗೆ ಒಂದು ವಾರ ಮುಂಚಿತವಾಗಿಯಾದರೂ ಮಾಹಿತಿ ನೀಡಬಾರದಾ? ಎಂದು ಕಾಂಗ್ರೆಸ್ ನಾಯಕರನ್ನೇ ಪ್ರಶ್ನೆ ಮಾಡಿದ್ದಾರೆ.