Asianet Suvarna News

ಸೋತು ಬೀಗಿದ ಅನರ್ಹರು: ಚುನಾವಣೇಲಿ ಗೆದ್ದರೆ ಸಚಿವ ಪದವಿ ಖಚಿತ!

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಬಂಡಾಯವೆದ್ದು, ರಾಜೀನಾಮೆ ನೀಡಿದ್ದಲ್ಲದೇ, ಅನರ್ಹಗೊಂಡ ಶಾಸಕರಿಗೆ ತುಸು ನಿರಾಳವಾಗುವಂಥ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಕರ್ನಾಟಕ ವಿಧಾನಸಭಾ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿದ್ದರೂ, ಡಿ.5ರಂದು ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕೋರ್ಟ್ ಈ ಅನರ್ಹರಿಗೆ ಅವಕಾಶ ನೀಡಿದೆ. ಆ ಮೂಲಕ ರಾಜೀನಾಮೆ ಸಲ್ಲಿಸಿರುವ ಶಾಸಕರು ಖುಷ್ ಆಗುವಂತೆ  

Disqualified MLAscontest bypoll but cannot hold profitable post says SC
Author
Bengaluru, First Published Nov 13, 2019, 11:41 AM IST
  • Facebook
  • Twitter
  • Whatsapp

ಬೆಂಗಳೂರು (ನ.13): 17 ಶಾಸಕರನ್ನು ಅನರ್ಹತೆ ಮಾಡಿದ್ದು ಸರಿ ಇದೆ ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ ಸುಪ್ರೀಂ ಕೋರ್ಟ್. ಆ ಮೂಲಕ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಆದರೆ, ಜೊತೆಗೆ ಸಿಹಿ ಸುದ್ದಿಯೂ ನೀಡಿದ್ದು,  ಈ ಶಾಕಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಕರ್ನಾಟಕದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಶಾಸಕರು ರಾಜೀನಾಮೆ ನೀಡಿದ ಕಾರಣದಿಂದಲೇ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರಕಾರವೂ ಉಪ ಚುನಾವಣೆ ತನಕ ಸೇಫ್ ಆಗಲಿದೆ.

ಅನರ್ಹತೆ ಅವಧಿಯನ್ನು ನಿಗದಿಗೊಳಿಸದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡುವ ಮೂಲಕ, ಅನರ್ಹರಿಗೂ ಸಿಹಿ ಸುದ್ದಿ ನೀಡಿದೆ. ಅನರ್ಹತೆ ಅವಧಿ ನಿಗದಿಗೊಳಿಸುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.  ಆದರೆ, ಮಂತ್ರಿ, ಮಂಡಳಿ ಅಧ್ಯಕ್ಷರಾಗಬಾರದು ಹಾಗೂ ಲಾಭದಾಯಕ ಹುದ್ದೆಯನ್ನು ಅಲಂಕರಿಸಬಾರದು ಎಂದು ಉಲ್ಲೇಖಿಸುವ ಮೂಲಕ ತಮ್ಮ ತಪ್ಪಿಗೆ ಶಾಸಕರು ಶಿಕ್ಷೆ ಅನುಭವಿಸುವಂತೆ ಮಾಡಿದೆ.  ಆ ಮೂಲಕ ತಮಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ, ಮಂತ್ರಿ ಮಾಡಲಿಲ್ಲವೆಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ವಿರುದ್ಧ ಬಂಡಾಯವೆದ್ದು, ರಾಜೀನಾಮೆ ಸಲ್ಲಿಸಿದ ಜನ ಪ್ರತಿನಿಧಿಗಳು ತಪ್ಪೆನ್ನುವುದನ್ನು ಸ್ಪಷ್ಟಪಡಿಸಿದೆ ಸುಪ್ರೀಂ ಕೋರ್ಟ್.

17 ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ : ಕೊಂಚ ರಿಲೀಫ್...

ಸಾಂವಿಧಾನಿಕ ಆಶಯಗಳ ವಿರುದ್ಧದ ನಡೆ
ಇತ್ತೀಚೆಗೆ ಕೆಲವು ರಾಜ್ಯಗಳ ಸ್ಪೀಕರ್‌ಗಳ ನಡೆಯನ್ನು ಅನರ್ಹ ಶಾಸಕರ ತೀರ್ಪಲ್ಲಿಯೂ ಉಲ್ಲೇಖಿಸಲಾಗಿದೆ. ಕುದುರೆ ವ್ಯಾಪಾರ ಹೆಚ್ಚುತ್ತಿರುವ ಬಗ್ಗೆ ಕಳವಳವನ್ನೂ ವ್ಯಕ್ತಪಡಿಸಿದೆ ಸುಪ್ರೀಂ ಕೋರ್ಟ್. ರಾಜೀನಾಮೆಯಂಥ ಪ್ರಹಸನಗಳ ಮೂಲಕ ರಾಜಕೀಯ ಸಿದ್ಧಾಂತಗಳನ್ನು ಗಾಳಿಗೆ ತೂರಲಾಗುತ್ತಿದೆ, ಎಂಬುದನ್ನು ಒಪ್ಪಿಕೊಂಡ ಸುಪ್ರೀಂ, ಚುನಾವಣಾ ಆಯೋಗದ ವಾದಕ್ಕೂ ಮನ್ನಣೆ ನೀಡಿದೆ. ಅನರ್ಹಗೊಂಡ ಶಾಸಕರು ಡಿ.5ರಂದು ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ಡಿಯಿಲ್ಲವೆಂದು ಚುನಾವಣಾ ಆಯೋಗ ತನ್ನ ಅಭಿಪ್ರಾಯವನ್ನು ವಿಚಾರವಣೆ ವೇಳೆಯೇ ವ್ಯಕ್ತಪಡಿಸಿತ್ತು.

ಗೆದ್ದ ಮೇಲೆ ಸಿಗುತ್ತೆ ಸಚಿವ ಪದವಿ!
ಸದ್ಯಕ್ಕೆ ಅನರ್ಹರಿಗೆ ಸಚಿವ ಸ್ಥಾನ ನೀಡುವಂತಿಲ್ಲವೆಂದು ಕೋರ್ಟ್ ಹೇಳಿದರೂ, ಉಪ ಚುನಾವಣೆಯಲ್ಲಿ ಗೆದ್ದ ನಂತರ ಮಂತ್ರಿ ಪದವಿ ಪಡೆಯಲು ಅಡ್ಡಿಯಿಲ್ಲವೆಂಬುದನ್ನು ಸ್ಪಷ್ಟಪಡಿಸಿದೆ. ಆ ಮೂಲಕ ಕಾಂಗ್ರೆಸ್‌ಗೆ ಈ ತೀರ್ಪು ನುಂಗಲಾರದ ಬಿಸಿ ತುಪ್ಪವಾದಂತೆ ಆಗಿದೆ. ಚುನಾವಣೆಯಲ್ಲಿ ಗೆದ್ದರೆ ಸಹಜವಾಗಿ ಈ ಶಾಸಕರಿಗೆ ಬಿಜೆಪಿ ಸರಕಾರದಲ್ಲಿ ಮಂತ್ರಿ ಪದವಿ ಸಿಗುವುದು ಖಚಿತ.

ಮೇಲ್ನೋಟಕ್ಕೆ ಸ್ಪೀಕರ್ ಆದೇಶಕ್ಕೆ ಕಿಮ್ಮತ್ತು ನೀಡಿದ ಸುಪ್ರೀಂ ಕೋರ್ಟ್, ಅನರ್ಹರಿಗೆ ಕಹಿಯಾಗುವಂತೆ ಮಾಡಿದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ರಾಜೀನಾಮೆ ನೀಡಿ, ಅನರ್ಹಗೊಂಡ ಶಾಸಕರು ನಿರಾಳವಾಗುವಂತೆ ಮಾಡಿದೆ ಸುಪ್ರೀಂ ಕೋರ್ಟ್.

ಸೋತರು ಗೆದ್ದ ಅನರ್ಹ ಶಾಸಕರು : ಚುನಾವಣೆಗೆ ಸ್ಪರ್ಧೆಗೆ ಸಿಕ್ತು ಅವಕಾಶ...

ಚುನಾವಣಾ ಸ್ಪರ್ಧೆಗೆ ನಿರ್ಬಂಧವಿಲ್ಲ. ಈಗಲೇ ಸಚಿವ ಸ್ಥಾನ ಅಥವಾ ಇತರೆ ಲಾಭದಾಯಿಕ ಹುದ್ದೆ ಅಲಂಕರಿಸಲು ಸಾಧ್ಯವಿಲ್ಲದಿದ್ದರೂ, ಚುನಾವಣೆಯಲ್ಲಿ ಗೆದ್ದರೆ ಸಹಜವಾಗಿ ಈ ನಿರ್ಬಂಧ ತೆರವಾಗುತ್ತದೆ. ಅನರ್ಹರು ಗೆದ್ದ ಬಳಿಕ ಮಂತ್ರಿ ಆಗಬಹದು. ಮತ್ತೆ ಆಯ್ಕೆಯಾಗುವವರಗೆ ಹುದ್ದೆ ಸಿಗಲ್ಲ!

- ಸಂದೀಪ ಹೇಳಿಕೆ್ ಪಾಟೀಲ್, ಅನರ್ಹರ ಪರ ವಕೀಲ

ಅನರ್ಹಗೊಂಡ ಶಾಸಕರು ಇವರು...
ರಮೇಶ್ ಜಾರಕಿಹೊಳಿ, ಗೋಕಾಕ್ - ಕಾಂಗ್ರೆಸ್
ಮಹೇಶ್ ಕುಮಟಳ್ಳಿ, ಅಥಣಿ - ಕಾಂಗ್ರೆಸ್
ಶಂಕರ್, ರಾಣೆಬೆನ್ನೂರು - ಕೆಪಿಜೆಪಿ
ಆನಂದ್ ಸಿಂಗ್, ಹೊಸಪೇಟೆ - ಕಾಂಗ್ರೆಸ್
ವಿಶ್ವನಾಥ್, ಹುಣಸೂರು- ಜೆಡಿಎಸ್
ಪ್ರತಾಪ್ ಗೌಡ ಪಾಟೀಲ್, ಮಸ್ಕಿ - ಕಾಂಗ್ರೆಸ್
ಬಿ.ಸಿ. ಪಾಟೀಲ್, ಹಿರೆಕೇರೂರು - ಕಾಮಗ್ರೆಸ್
ಶಿವರಾಂ ಹೆಬ್ಬಾರ್, ಯಲ್ಲಾಪುರ - ಕಾಂಗ್ರೆಸ್
ನಾರಾಯಣಗೌಡ, ಕೆಆರ್.ಪೇಟೆ - ಜೆಡಿಎಸ್
ಎಸ್.ಟಿ. ಸೋಮಶೇಖರ್, ಯಶವಂತಪುರ - ಕಾಂಗ್ರೆಸ್
ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್ - ಜೆಡಿಎಸ್
ಭೈರತಿ ಬಸವರಾಜ್, ಕೆ.ಆರ್.ಪುರಂ - ಕಾಂಗ್ರೆಸ್
ಮುನಿರತ್ನ, ಆರ್.ಆರ್.ನಗರ - ಕಾಂಗ್ರೆಸ್
ರೋಷನ್ ಬೇಗ್, ಶಿವಾಜಿನಗರ - ಕಾಂಗ್ರೆಸ್
ಎಂಟಿಬಿ ನಾಗರಾಜ್, ಹೊಸಕೋಟೆ - ಕಾಂಗ್ರೆಸ್ 
ಸುಧಾಕರ್, ಚಿಕ್ಕಬಳ್ಳಾಪುರ - ಕಾಂಗ್ರೆಸ್ 
ಶ್ರೀಮಂತ್ ಪಾಟೀಲ್, ಕಾಗವಾಡ - ಜೆಡಿಎಸ್

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

Follow Us:
Download App:
  • android
  • ios