Asianet Suvarna News Asianet Suvarna News

ನನ್ನ ಬಜೆಟ್ ಜನಪರ ಬಜೆಟ್ ಆಗಿರುತ್ತದೆ: ಕೊಡುಗೆಗಳ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ರಾಜ್ಯದ ಬಜೆಟ್‌ ಜನಪರ ಬಜೆಟ್‌ ಆಗಿರಲಿದೆ ಎಂದು ಸುಳಿವು ನೀಡಿದ ಸಿಎಂ
ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಕೇಂದ್ರ ನೀಡಿರುವ ದೊಡ್ಡ ಮೊತ್ತದ ಅನುದಾನ
ಭದ್ರಾ ಮೇಲ್ದಂಡೆ ಏಪ್ರಿಲ್‌ನಿಂದ ಆರಂಭ ಆಗುತ್ತದೆ

Disappointment to Opposition for giving 5300 crores for Bhadra Upper Bank Project CM Bommai sat
Author
First Published Feb 2, 2023, 1:32 PM IST

ಬೆಂಗಳೂರು (ಫೆ.02): ಕೇಂದ್ರ ಸರ್ಕಾರವು ಮಂಡಿಸಿರುವ ಬಜೆಟ್‌ನಲ್ಲಿ ಕರ್ನಾಟಕದ ನೀರಾವರಿಗೆ ಅಂದರೆ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ಬಂದಿದೆ. ಇದನ್ನು ರಾಜ್ಯದ ಪ್ರತಿಯೊಬ್ಬರೂ ಸ್ವಾಗತ ಮಾಡಬೇಕು. ಆದರೆ, ದೊಡ್ಡ ಮಟ್ಟದ ಅನುದಾನ ಬಂದಿರುವುದಿಂದ ವಿಪಕ್ಷಗಳಿಗೆ ನಿರಾಸೆ ಉಂಟಾಗಿದೆ. ಇನ್ನು ನನ್ನ ಬಜೆಟ್‌ ಜನಪರ ಬಜೆಟ್‌ ಆಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ.

ಬಜೆಟ್‌ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಬಜೆಟ್ ಮೂಗಿಗೆ ತುಪ್ಪ ಸುರಿಯುವಂತಾಗಿದೆ ಎಂಬ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಆದರೆ, ವಿಪಕ್ಷಗಳು ರಾಜಕೀಯವಾಗಿ ಏನಾದ್ರೂ ಹೇಳಬಹುದು. ಇಂತಹ ಹೇಳಿಕೆಗಳನ್ನು ನಾನು 3 ದಶಕಗಳಿಂದ ಕೇಳುತ್ತಿದ್ದೇನೆ. ವಿಪಕ್ಷದಲ್ಲಿದ್ದಾಗ ಮೂಗಿಗೆ ತುಪ್ಪ ಸುರಿಯುವುದು ಅಂತ ಹೇಳಿಕೆ ಕೊಡುವುದು. ಏನಾದರೂ ಟೀಕೆ ಮಾಡುವುದಿದ್ದರೆ ವಾಸ್ತವಾಂಶದ ಮೇಲೆ ಮಾತನಾಡಬೇಕು. ಸಿದ್ದರಾಮಯ್ಯನವರು ತಮ್ಮ ಬಜೆಟ್‌ ನಲ್ಲಿ ಎಷ್ಟು ಜನಕ್ಕೆ ತುಪ್ಪ ಸವರಿದ್ದಾರೆ ಅಂತ ಜನಕ್ಕೆ ಗೊತ್ತಾಗಿಯೇ ಅವರನ್ನ ಮನೆಗೆ ಕಳಿಸಿದ್ದಾರೆ. ಇನ್ನು ಕುಮಾರಸ್ವಾಮಿ ಅವರು ಹಣೆಗೆ ತುಪ್ಪ ಸವರಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮಂಡನೆಯಾಗಲಿರುವ ನನ್ನ ಬಜೆಟ್ (ರಾಜ್ಯ ಬಜೆಟ್‌ 2023) ಜನಪರ ಬಜೆಟ್‌ ಆಗಿರುತ್ತದೆ ಎಂದು ಮಾಹಿತಿ ನೀಡಿದರು.

Budget 2023: ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ!

ಭದ್ರಾ ಯೋಜನೆಗೆ ಯಡಿಯೂರಪ್ಪ ಚಾಲನೆ: ರಾಜ್ಯದಲ್ಲಿ ಎಸ್. ನಿಜಲಿಂಗಪ್ಪ ಇದ್ದಾಗಿಂದಲೂ ಭದ್ರಾ ಮೇಲ್ದಂಡೆ ಯೋಜನೆಗೆ ಬೇಡಿಕೆ ಇತ್ತು. ಆದರೆ, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಚಾಲನೆ ಸಿಕ್ಕಿತ್ತು. ಆದರೆ, ಈಗ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು, ವಿಪಕ್ಷಗಳು ಈ ಯೋಜನೆ ಮಾಡಲು ಬರೋದಿಲ್ಲ ಅಂತಿದ್ದಾರೆ. ಬಜೆಟ್ ಜಾರಿಯಾಗೋದೆ ಮುಂದಿನ ವರ್ಷದಿಂದ. ಈ ಯೋಜನೆ ಆರಂಭವಾಗುವುದು ಏಪ್ರಿಲ್‌ ತಿಂಗಳಿಂದ ಆಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಆಗಿಲ್ಲಾ ಅಂತಿದ್ದಾರೆ. ಈಗಾಗಲೇ ಕ್ಯಾಬಿನೆಟ್ ನಲ್ಲಿ ಯೋಜನೆ ಬಗ್ಗೆ ಎಲ್ಲಾ ಒಪ್ಪಿಗೆ ತಗೆದುಕೊಂಡಿದ್ದಾರೆ. ಈಗ ಅದಕ್ಕೆ 5,300 ಕೋಟಿ ಅನುದಾನ ಬಂದಿದೆ ಎಂದರು. 
ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಇಷ್ಟು ದೊಡ್ಡ ಹಣ ಬಂದಿದೆ ಅಂದರೆ ಅದು ಭದ್ರಾ ಮೇಲ್ದಂಡೆ ಯೋಜನೆಗೆ ಆಗಿದೆ. ಇದರಿಂದ ನಮಗೆ ದೊಡ್ಡ ಶಕ್ತಿ ಲಭಿಸಿದಂತಾಗಿದೆ. ಆದಷ್ಟು ವೇಗವಾಗಿ ಯೋಜನೆ ಮಾಡುತ್ತೇವೆ. ಒಂದು ಯೋಜನೆ ಗೆ 5,300 ಕೋಟಿ ಬಂದಿರೋದಕ್ಕೆ ಸ್ವಾಗತ ಮಾಡಬೇಕು. ಆದರೆ, ವಿಪಕ್ಷದವರಿಗೆ ಇದು ನಿರಾಸೆ ಆಗಿದೆ. ಇದರಿಂದ ಕುಪಿತಗೊಂಡು ಏನೇನೋ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. ಇನ್ನು ಎಲ್ಲ ಯೋಜನೆಗಳಲ್ಲೂ ಕರ್ನಾಟಕದ ಪಾಲು ಬಂದೇ ಬರುತ್ತದೆ.

10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಹೆಚ್ಚಳ: ಭಾರತ ದೇಶದ ಆರ್ಥಿಕ ಸ್ಥಿತಿ ವಿಶ್ವದ ಪ್ರಗತಿ ಆಗಿರುವ ದೇಶಕ್ಕೆ ಹೊಲಿಸಿದರೆ ನಮ್ಮ ದೇಶ ಪ್ರಗತಿ ಆಗ್ತಿದೆ. ಆರ್ಥಿಕ ಸಂಕಷ್ಟವಿರುವ ದೇಶವನ್ನ ನೋಡಿದ್ದೇವೆ. ನಮ್ಮ ದೇಶದ ಎಕಾನಮಿ ಸ್ಟ್ರಾಂಗ್ ಇದೆ. ನಮ್ಮ ಜಿಡಿಪಿ ಆರೋಗ್ಯಕರವಾಗಿದೆ. 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಹೆಚ್ಚಾಗಿದೆ. ಇದು ನಮ್ಮ ಗ್ರೋತ್ ರೇಟ್ ಹೆಚ್ಚಳ ಮಾಡಿದೆ. ಸೋಷಿಯಲ್ ಸೆಕ್ಟರ್ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮವನ್ನ ಸಕಾರಾತ್ಮಕವಾಗಿ ನೋಡುತ್ತೇವೆ. ಪ್ರಧಾನಿ ಮಂತ್ರಿ ಅವಾಸ್‌ ಯೋಜನೆಗೆ ದೊಡ್ಡ ಅನುದಾನ ಸಿಕ್ಕಿದೆ. ಪ್ರತಿಯೊಂದು ಮನೆಗೆ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಎಲ್ಲಾ ಮನೆಗಳಿಗೆ ಕುಡಿಯುವ ನೀರು ಸಿಗಬೇಕು ಎಂದು ಅನುದಾನ ಹೆಚ್ಚಳ ಮಾಡಿದ್ದಾರೆ ಎಂದರು.

ಏನಿದು ಭದ್ರಾ ಮೇಲ್ದಂಡೆ ಯೋಜನೆ : ಯಾವೆಲ್ಲಾ ಜಿಲ್ಲೆಗಳಿಗೆ ನೀರೊದಗಿಸಲಿದೆ ಭದ್ರೆ...

ಸರ್ವ ಸ್ಪರ್ಷಿ, ಸರ್ವ ವ್ಯಾಪಿ ಆಗಿದೆ: ಸಣ್ಣ ಕೈಗಾರಿಕೆಗೆ ಒತ್ತು ಕೊಟ್ಟಿದ್ದಾರೆ. MSMEಗೆ ಲಿಮಿಟ್ಸ್ ಹೆಚ್ಚಳ ಮಾಡಿದ್ದಾರೆ. ಜೊತೆಗೆ ಬಜೆಟ್ ನಲ್ಲಿ ಬೂಸ್ಟ್ ಕೊಟ್ಟಿದ್ದಾರೆ. ಆರೋಗ್ಯ ಕ್ಷೇತ್ರಕ್ಕೂ ಅನುದಾನ ಹೆಚ್ಚಳ ಮಾಡಿದ್ದಾರೆ. ಮಹಿಳೆಯರ ಸಾಮರ್ಥ್ಯ ಬಳಸಿಕೊಳ್ಳುವ ಯೋಜನೆ ಹಮ್ಮಿಕೊಂಡಿದ್ದಾರೆ. ಕೃಷಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಕೆಲವು ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಮಾಡುವಂತವು ಇವೆ. ಪ್ರಧಾನಮಂತ್ರಿಗಳ ದೂರದೃಷ್ಟಿಯಿಂದ ಬಜೆಟ್ ಮಂಡನೆಯಾಗಿದೆ. ಆರ್ಥಿಕ ಸುಧಾರಣೆಗೊಸ್ಕರ ದಿಟ್ಟ ಕ್ರಮಗಳನ್ನ ತಗೆದುಕೊಂಡಿದ್ದಾರೆ. ಸಮಗ್ರ ಅಭಿವೃದ್ಧಿಯಾಗುವಂತ ಬಜೆಟ್ ಮಂಡನೆಯಾಗಿದೆ. ಈ ಬಜೆಟ್ ಎಲ್ಲರಿಗೂ ಸರ್ವ ಸ್ಪರ್ಷಿ, ಸರ್ವ ವ್ಯಾಪಿ ಆಗಿದೆ. ಇರಿಗೇಷನ್ ಸ್ಕೀಂ ಅರ್ಥಮಾಡಿಕೊಂಡವರು ಯಾರು ಈ ರೀತಿ ಮಾತನಾಡಲ್ಲ. ನಮ್ಮ ನೀರಿಕ್ಷೆ ಏನಿತ್ತು ಅವಶ್ಯಕತೆ ಏನಿತ್ತು ಬಜೆಟ್ ನಲ್ಲಿ ಸಿಕ್ಕಿದೆ ಎಂದರು.

Follow Us:
Download App:
  • android
  • ios