ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ. 2011 ಮತ್ತು 2021ರಲ್ಲಿ ಎರಡು ಬಾರಿಯೂ ಯಡಿಯೂರಪ್ಪ ಅವರನ್ನು ಹೈಕಮಾಂಡ್ ನಾಯಕರು ಸರಿಯಾಗಿ ನಡೆಸಿಕೊಳ್ಳಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲಲು ಯಡಿಯೂರಪ್ಪರ ನಾಯಕತ್ವ ಇಲ್ಲದಿರುವುದೇ ಕಾರಣ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು(ಸೆ.02): ಬಿಜೆಪಿಯಲ್ಲಿ ಸರ್ವಾಧಿಕಾರಿ ಧೋರಣೆ ಆರಂಭವಾಗಿದೆ. ಪಕ್ಷ ಹೀನಾಯವಾಗಿ ಸೋಲಲು ಈ ಸರ್ವಾಧಿಕಾರಿ ಧೋರಣೆಯೇ ಕಾರಣ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಪರೋಕ್ಷವಾಗಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006-07ರಲ್ಲಿ ಬಿಜೆಪಿ ಸಂಘಟನೆಗಾಗಿ ಸಂಘ ಪರಿವಾರದಿಂದ ಒಬ್ಬರು ಬಂದರು. ಅವರಿಂದಲೇ ಇಷ್ಟೆಲ್ಲ ಆಗುತ್ತಿದೆ. ಅವರು ಬರುವ ಮೊದಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷವನ್ನು ಕಟ್ಟಿದ್ದರು ಎಂದು ತೀಕ್ಷ್ಣವಾಗಿ ಹೇಳಿದರು.
ಯಡಿಯೂರಪ್ಪ ಕಡೆಗಣನೆ ಬಿಜೆಪಿಗೆ ದೊಡ್ಡ ಶಾಪ: ಎಂ.ಪಿ.ರೇಣುಕಾಚಾರ್ಯ
ನಿಮ್ಮದೇ ಆದ ಒಂದು ಗುಂಪಿದೆ. ಅಲ್ಲಿ ಜಿ ಎಂದವರಿಗೆ ಮಾತ್ರ ಅವಕಾಶ. ಅದರಲ್ಲಿ ಏಳೆಂಟು ಮಂದಿಯಿದ್ದಾರೆ. ಸಮಯ ಬಂದಾಗ ಆ ಗುಂಪಿನಲ್ಲಿರುವವರ ಹೆಸರುಗಳನ್ನು ಬಹಿರಂಗವಾಗಿ ಹೇಳುತ್ತೇನೆ. ವೇದಿಕೆ ಮೇಲೆ ನೀತಿ ಪಾಠ ಮಾಡುವುದು ಬಹಳ ಚಂದ ಎಂದು ವ್ಯಂಗ್ಯವಾಗಿ ಹೇಳಿದರು.
ಅವರು (ಸಂತೋಷ್) ಸುಮ್ಮನೆ ಬಂದು ಇಲ್ಲಿ ಬಿಜೆಪಿ ಕಚೇರಿಯಲ್ಲಿ ಕೂರುತ್ತಾರೆ. ಬಿಜೆಪಿ ಕಚೇರಿಯಲ್ಲಿ ಕುಳಿತಿದ್ದರೆ ಮತ ಬರುತ್ತಾ? ಹೊರಗೆ ಓಡಾಡಬೇಕು. ಫೀಲ್ಡ್‌ನಲ್ಲಿ ಇರಬೇಕು. ನಾನು ನನ್ನ ಮತ ಕ್ಷೇತ್ರದ 245 ಬೂತ್‌ಗಳಲ್ಲೂ ಕರಪತ್ರ ಹಂಚಿದ್ದೇನೆ. ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದೇನೆ. ಆದರೆ, ನಮ್ಮಲ್ಲೇ ಕೆಲವರು ಚಿತಾವಣೆ ನಡೆಸುತ್ತಿದ್ದಾರೆ. ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರನ್ನು ಭೇಟಿ ಮಾಡಿರುವುದು ಕಾಂಗ್ರೆಸ್ ಸೇರುವುದಕ್ಕಲ್ಲ. ಹೊನ್ನಾಳಿ-ನ್ಯಾಮತಿ ತಾಲೂಕನ್ನು ಬರ ಪೀಡಿತ ಪಟ್ಟಿಯಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ ಅಲ್ಲ: ಜಿಲ್ಲಾ ಕಾಂಗ್ರೆಸ್ ವಿರೋಧ
ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ. 2011 ಮತ್ತು 2021ರಲ್ಲಿ ಎರಡು ಬಾರಿಯೂ ಯಡಿಯೂರಪ್ಪ ಅವರನ್ನು ಹೈಕಮಾಂಡ್ ನಾಯಕರು ಸರಿಯಾಗಿ ನಡೆಸಿಕೊಳ್ಳಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲಲು ಯಡಿಯೂರಪ್ಪರ ನಾಯಕತ್ವ ಇಲ್ಲದಿರುವುದೇ ಕಾರಣ. ಯಡಿಯೂರಪ್ಪ ಅವರ ಶಾಪ ತಟ್ಟಿದೆ. ರಾಜ್ಯದಲ್ಲಿ ಯಡಿಯೂರಪ್ಪ ಸುತ್ತದ ಹಳ್ಳಿಯೇ ಇಲ್ಲ. ಇಂತಹ ವ್ಯಕ್ತಿಯನ್ನು ಕೆಳಗೆ ಇಳಿಸಿದ್ದೇಕೆ? ಈಗ ಯಡಿಯೂರಪ್ಪರನ್ನು ಸೈಡ್‌ಲೈನ್ ಮಾಡಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಮ್ಮ ನಾಯಕರು. ಅವರಿಗೆ ಟಿಕೆಟ್ ತಪ್ಪಿಸಿದ್ದೇಕೆ? ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರೂ ನಮ್ಮ ನಾಯಕರು. ಇಬ್ಬರು ಕೂಡ ಪ್ರಬಲ ಸಮುದಾಯಕ್ಕೆ ಸೇರಿದವರು. ಅವರಿಬ್ಬರಿಗೂ ಟಿಕೆಟ್ ತಪ್ಪಿಸಿದ್ದಕ್ಕೆ ಪಕ್ಷ ಕಿತ್ತೂರು ಕರ್ನಾಟಕ ಭಾಗದಲ್ಲಿ ನೆಲಕಚ್ಚಿತು. ಈಗ ಲೋಕಸಭಾ ಚುನಾವಣೆಗೆ ಅದನ್ನು ಮೇಲೆತ್ತಬೇಕಿದೆ ಎಂದರು.
