ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿರುವುದು ಬಿಜೆಪಿಗೆ ದೊಡ್ಡ ಶಾಪವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಬೆಂಗಳೂರು (ಸೆ.01): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿರುವುದು ಬಿಜೆಪಿಗೆ ದೊಡ್ಡ ಶಾಪವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದು ಬಿಜೆಪಿಗೆ ದೊಡ್ಡ ಶಾಪ ಆಗಿದೆ. ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ಮೂಲೆಗುಂಪು ಮಾಡಲಾಗಿದೆ. ನಾನೇನು ಪಕ್ಷದ ವಿರುದ್ಧವಾಗಲಿ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯಾಗಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆಯಾಗಲಿ ಮಾತನಾಡಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಏನು ಹೇಳಬೇಕೋ? ಅದನ್ನು ಹೇಳಿದ್ದೇನೆ ಎಂದು ತಿಳಿಸಿದರು.
ರಾಜ್ಯದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ಈವರೆಗೆ ಪ್ರತಿಪಕ್ಷದ ನಾಯಕ, ಪಕ್ಷದ ರಾಜ್ಯಾಧ್ಯಕ್ಷ ಆಯ್ಕೆಯಾಗಿಲ್ಲ. ಕೆಲ ವ್ಯಕ್ತಿಗಳ ಸರ್ವಾಧಿಕಾರಿ ಧೋರಣೆ ಕುರಿತು ಮಾತನಾಡಿದ್ದೇನೆ. ಇವರ ದುರಹಂಕಾರದಿಂದ ಬಿಜೆಪಿಗೆ ಸೋಲಾಗಿದೆ. ಇದು ಲೋಕಸಭೆಯಲ್ಲಿ ಆಗಬಾರದು. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ರಾಜ್ಯದ ಜನರ ಪರವಾಗಿ ಧ್ವನಿ ಎತ್ತಿದ್ದೇನೆ. ನಾನು ಬಿಜೆಪಿ ವಿರೋಧಿಯಲ್ಲ, ಜವಾಬ್ದಾರಿ ನಾಯಕನಾಗಿ ಮಾತನಾಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸಂಘಟನೆ ಕೊರತೆ ಕಾಣುತ್ತಿದೆ ಎಂದರು. ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಗೈರಾದ ವಿಚಾರವಾಗಿ ಮಾತನಾಡಿದ ಅವರು, ಸಭೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಪಕ್ಷ ನನಗೆ ನೊಟೀಸ್ ಕೊಟ್ಟಿದೆ. ಅದಕ್ಕೆ ನಾನು ಉತ್ತರ ನೀಡಿಲ್ಲ. ಬೇಷರತ್ ನೊಟೀಸ್ ವಾಪಸ್ ಪಡೆಯಬೇಕು. ಏನು ಹೇಳಬೇಕೋ, ಅದನ್ನು ಹೇಳಿದ್ದೇನೆ. ನನಗೆ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಹೇಳಿದರು.
ಶಿವಮೊಗ್ಗಕ್ಕೆ ಮೊದಲ ಇಂಡಿಗೋ ಪ್ರಯಾಣ: ವಿಮಾನ ಹತ್ತಿ ಸಂತಸಪಟ್ಟ ಬಿಎಸ್ವೈ, ಪಾಟೀಲ್, ಈಶ್ವರಪ್ಪ
ಭ್ರಮೆಯಲ್ಲಿರೋ ದುರಂಹಕಾರಿ ಬಳಿ ನಾನು ಮಾತಾಡಲ್ಲ: ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಮಾಜಿ ಸಚಿವ ಸಿ.ಟಿ.ರವಿ ಮತ್ತಿತರ ಸ್ವಪಕ್ಷದ ಮುಖಂಡರ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ಅವರೆಲ್ಲ ಭ್ರಮಾಲೋಕದಲ್ಲಿದ್ದು, ಸರ್ವಾಧಿಕಾರ, ದುರಹಂಕಾರದಲ್ಲಿದ್ದಾರೆ ಎಂದು ಹರಿಹಾಯ್ದಿದ್ದಾರೆ. ನಗರದಲ್ಲಿಸುದ್ದಿಗಾರರೊಂದಿಗೆ ಮಾತನಾಡಿ ಕೇವಲ ಬಿಜೆಪಿ ಕಚೇರಿಯಲಿಲ ಕೂತು ಆಡಳಿತ ಮಾಡುವುದಲ್ಲ ಎಂದ ರೇಣುಕಾಚಾರ್ಯ, ಭ್ರಮಾಲೋಕದಲ್ಲಿರುವವರು, ಸರ್ವಾಧಿಕಾರ, ದುರಂಹಕಾರದಲ್ಲಿರುವವರ ಬಳಿ ನಾನು ಮಾತನಾಡುವುದಿಲ್ಲ ಎಂದರು. ಜತೆಗೆ, ವಿಧಾನಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು.
ಸುಪ್ರೀಂಕೋರ್ಟ್ನಲ್ಲಿ ನಾಳೆ ಕಾವೇರಿ ನೀರು ವಿಚಾರಣೆ ಅನುಮಾನ?: ಯಾಕೆ ಗೊತ್ತಾ!
ಆದರೆ, ಅಂಥ ಕೆಲಸವೂ ಆಗಿಲ್ಲ. ನಮ್ಮದೇ ಸರ್ಕಾರವಿದ್ದಾಗ 6 ಸಚಿವ ಸ್ಥಾನಗಳನ್ನು ಯಾರಿಗೂ ನೀಡದೆ, ಹಾಗೆಯೇ ಉಳಿಸಿಕೊಂಡರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನೂ ಪಕ್ಷದ ಕಾರ್ಯಕರ್ತರಿಗೆ ಸರಿಯಾಗಿ ಹಂಚಿಕೆ ಮಾಡಲಿಲ್ಲ ಎಂದು ಕಿಡಿಕಾರಿದರು. ಕಾರ್ಯಕರ್ತರು ಇರುವುದು ಬಾವುಟ ಹಿಡಿಯಲು, ಜಯಕಾರ ಹಾಕುವುದಕ್ಕೆ ಮಾತ್ರನಾ? ರಾಜ್ಯದಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿಬೆಳೆಸಿ, ಅಧಿಕಾರಕ್ಕೂ ತಂದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರನ್ನೇ ಮೂಲೆಗುಂಪು ಮಾಡಿದರು. ಆದ್ದರಿಂದಲೇ ನಾನು ಮಾತನಾಡುತ್ತಿದ್ದೇನೆ. ಇನ್ನಾದರೂ ಭ್ರಮಾಲೋಕದಿಂದ ಕೆಲವರು ಹೊರ ಬರಲಿ. ಸರ್ವಾಧಿಕಾರ, ದುರಂಹಕಾರ ಬಿಡಲಿ ಎಂದು ಸೂಚ್ಯವಾಗಿ ಹೇಳಿದರು.
