ನಾಲ್ಕು ವರ್ಷಗಳ ಬಳಿಕ ಮತದಾನ ಮಾಡಲು ಕೋರ್ಟ್ ಅವಕಾಶ; ಇವತ್ತು ನನಗೆ ಖುಷಿಯಾಗಿದೆ ಎಂದ ವಿನಯ ಕುಲಕರ್ಣಿ

ನಾಲ್ಕು ವರ್ಷಗಳ ಬಳಿಕ ಕೋರ್ಟ್ ನನಗೆ ಮತದಾನ ಮಾಡಲು ಅನುಮತಿ ಕೊಟ್ಟಿದೆ. ಇವತ್ತು ನನಗೆ ಒಂದು ಕಡೆ ಖುಷಿ, ಇನ್ನೊಂದೆಡೆ ದುಃಖವಾಗಿದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ತಿಳಿಸಿದರು.

Dharwad Lok sabha election 2024 Karnataka former minister vinaya kulkarni voted after 4 years rav

ಧಾರವಾಡ (ಮೇ.7): ನಾಲ್ಕು ವರ್ಷಗಳ ಬಳಿಕ ಕೋರ್ಟ್ ನನಗೆ ಮತದಾನ ಮಾಡಲು ಅನುಮತಿ ಕೊಟ್ಟಿದೆ. ಇವತ್ತು ನನಗೆ ಒಂದು ಕಡೆ ಖುಷಿ, ಇನ್ನೊಂದೆಡೆ ದುಃಖವಾಗಿದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ತಿಳಿಸಿದರು.

ಇಂದು ಲೋಕಸಭಾ ಚುನಾವಣೆ ಮತದಾನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಹಾಕಲು ನನಗೆ ಅವಕಾಶ ನೀಡಿದ್ದಕ್ಕೆ  ನ್ಯಾಯಾಲಯಕ್ಕೆ ಧನ್ಯವಾದ ತಿಳಿಸುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿಗೆ ಮತ ನೀಡಲು ನನಗೆ ಕೊಟ್ಟ ಅವಕಾಶದಿಂದ ತುಂಬಾ ಖುಷಿ ಸಿಕ್ಕಿದೆ ಎಂದರು.

 

ಮೋದಿಯವರ ಮನ್ ಕೀ ಬಾತ್ ಕೇಳಿ ಕಿವೀಲಿ ರಕ್ತ ಬಂದಿದೆ: ಬಿಜೆಪಿ ವಿರುದ್ಧ ಲಾಡ್ ವಾಗ್ದಾಳಿ

ಸಹಜವಾಗಿ ನಾನು 25 ವರ್ಷದ ಹಿಂದೆ ಆಯ್ಕೆ ಆಗಿದ್ದೇನೆ. ಸಾರ್ವಜನಿಕರಿಗಾಗಿ ನಾನು ಕೆಲಸ ಮಾಡಿದ್ದೇನೆ. ನಾನು ಕ್ಷೇತ್ರಕ್ಕೆ ಬರದೇ ಇದ್ರೂ ಸಹ ಜನರು ನನ್ನನ್ನ ಆಯ್ಕೆ ಮಾಡಿದ್ದಾರೆ. ಅದೇ ರೀತಿ ಈ ಬಾರಿ ಲೋಸಕಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ತಾರೆ ಎಂದು ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.

ಜಿಪಂ ಸದಸ್ಯ ಯೋಗಿಶಗೌಡ ಕೊಲೆ ಪ್ರಕರಣದ ಸಾಕ್ಷಿ ನಾಶ ಕೇಸ್ ನಲ್ಲಿ ಜಿಲ್ಲೆಯಿಂದ ಹೊರ ಇರುವ ವಿನಯ ಕುಲಕರ್ಣಿ. ಮತದಾನದಲ್ಲಿ ಭಾಗವಹಿಸಲು ಬೆಂಗಳೂರು ಹೈಕೋರ್ಟ್ ಏಕಸದಸ್ಯ ಪೀಠದಿಂದ ಅನುಮತಿ ಸಿಕ್ಕಿತ್ತು. ಮತದಾನ ಮಾಡಿ ತಕ್ಷಣ ಧಾರವಾಡ ತೊರೆಯುವಂತೆ ಕೋರ್ಟ್ ಸೂಚನೆ ನೀಡಿದ್ದ ಹಿನ್ನೆಲೆ ಧಾರವಾಡ ಜಿಲ್ಲೆಗೆ ಬಂದ ಮತದಾನ ಮಾಡಿ ತೆರಳಿದ ವಿನಯ ಕುಲಕರ್ಣಿ.

ಕ್ಷೇತ್ರದ ಅಭಿವೃದ್ಧಿಗೆ ಜೋಶಿ ಕೊಡುಗೆ ಶೂನ್ಯ: ವಿನಯ್ ಕುಲಕರ್ಣಿ ವಾಗ್ದಾಳಿ

ಶಾರದಾ ಹೈಸ್ಕೂಲಿನ ಮತಗಟ್ಟೆ ಸಂಖ್ಯೆ 75 ರಲ್ಲಿ ಪತ್ನಿ ಶಿವಲೀಲಾ ಕುಲಕರ್ಣಿ ಮತ್ತು ಮಕ್ಕಳು ಜೊತೆ ಬಂದು ಮತದಾನ ಮಾಡಿದರು. ಈ ವೇಳೆ ಶಾಸಕ ಎನ್ ಎಚ್ ಕೋನರೆಡ್ಡಿ, ಕೈ ಅಭ್ಯರ್ಥಿ ವಿನೋದ ಅಸೂಟಿ ಸಾಥ್ ನೀಡಿರು.

Latest Videos
Follow Us:
Download App:
  • android
  • ios