ಕೇವಲ 9 ವರ್ಷದಲ್ಲಿ ಪ್ರಧಾನಿ ಮೋದಿ ಅವರು ಜಗತ್ತೇ ಮೆಚ್ಚುವಂತಹ ಅಭಿವೃದ್ಧಿ ಕಾರ್ಯಗಳನ್ನುಮಾಡಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. 

ಇಂಡಿ (ಸೆ.30): ಕೇವಲ 9 ವರ್ಷದಲ್ಲಿ ಪ್ರಧಾನಿ ಮೋದಿ ಅವರು ಜಗತ್ತೇ ಮೆಚ್ಚುವಂತಹ ಅಭಿವೃದ್ಧಿ ಕಾರ್ಯಗಳನ್ನುಮಾಡಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಅವರು ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಭಾರತೀಯ ಅಂಚೆ ಇಲಾಖೆ ವಿಜಯಪುರ ಅಂಚೆ ವಿಭಾಗ ಹಮ್ಮಿಕೊಂಡ ಲಚ್ಯಾಣ ಉಪ ಅಂಚೆ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮೋದಿ ಅವರು ಪ್ರಧಾನಿ ಆದ ಮೇಲೆ 9 ವರ್ಷದಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಗಾಗಿ ₹1 ಲಕ್ಷ ಕೋಟಿ ಹಣ ಖರ್ಚು ಮಾಡಿದ್ದಾರೆ. ಹಿಂದೆ ವಿಜಯಪುರ ಜಿಲ್ಲೆಯ ಎಂಪಿ ಆಗಿ ಸಾಕಷ್ಟು ಜನರು ಆಗಿಹೋಗಿದ್ದಾರೆ. 

ಅವರ ಕಾಲದಲ್ಲಿ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಒಂದು ರುಪಾಯಿನೂ ಮಂಜೂರು ಮಾಡಿಸಿರುವುದಿಲ್ಲ ಎಂದು ಆರೋಪಿಸಿದ ಅವರು, ರೈಲ್ವೆ ಡಬಲ್‌ ಹಳಿ, ವಿದ್ಯುತ್‌ ಚಾಲಿತ ರೈಲು, ಒವರ್‌ ಬ್ರಿಡ್ಜ್‌, ಎನ್‌ಟಿಪಿಸಿಆರ್‌ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿದ್ದು, ಬಿಜೆಪಿ ಸರ್ಕಾರ ಎಂದು ಹೇಳಿದರು. ಹಿಂದೆ ವಿಜಯಪುರ ರೈಲು ಹಳಿಯ ಮೇಲೆ ಕೇಲವ 3 ರಿಂದ 4 ರೈಲುಗಳು ಓಡಾಟ ಮಾಡುತ್ತಿದ್ದವು. ಇಂದು ಇದೇ ಹಳಿಯ ಮೇಲೆ 22 ರೈಲುಗಳು ಓಡಾಟ ಮಾಡುತ್ತಿದ್ದು, ಇದು ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಅವರು ತೋರಿದ ಕಾಳಜಿ ಎಂದು ಹೇಳಿದರು.

ಮೋಡ ಬಿತ್ತನೆ ಕನಸು ಈಡೇರಿಕೆ: ಸಚಿವ ಸತೀಶ ಜಾರಕಿಹೊಳಿ ಹರ್ಷ

50 ವರ್ಷದ ಆಡಳಿತದಲ್ಲಿ ಜಿಲ್ಲೆಯಲ್ಲಿ ಕೇವಲ ಒಂದು ಮಾತ್ರ ರಾಷ್ಟ್ರೀಯ ಹೆದ್ದಾರಿ ಇತ್ತು. ಇಂದು 5 ರಾಷ್ಟ್ರೀಯ ಹೆದ್ದಾರಿಗಳು ಆಗಿವೆ. ಇದು 9 ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿಯ ಸಾಧನೆಯಾಗಿದೆ. ಜನರು ಅರ್ಥ ಮಾಡಿಕೊಳ್ಳಬೇಕು. ಯಾವ ಪಕ್ಷ, ಯಾರ ಕಾಲದಲ್ಲಿ ಅಭಿವೃದ್ಧಿ ಆಗಿದೆ ಎಂಬುವುದು ತಿಳಿಯಬೇಕು. ಅಥರ್ಗಾ, ಹಂಜಗಿ, ತಡವಲಗಾ ಕೆರೆಗಳಿಗೆ ನೀರು ತುಂಬಿಸಲು ಪೈಪ್‌ಲೈನ್‌ ಕಾಮಗಾರಿಗೆ ₹110 ಕೋಟಿ ಅನುದಾನ ಮಂಜೂರಿಗೆ ಪ್ರಯತ್ನಿಸಿದ್ದೇನೆ. ಬಿಜೆಪಿ ಸರ್ಕಾರದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. 

ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗಲೂ ನನಗೆ ಗೆಲ್ಲಿಸಿದ್ದೀರಿ. ಇಂದು ಮೋದಿ ಅವರು ಪ್ರಧಾನಿ ಆಗಿದ್ದಾರೆ. ಇಂದು ಸಹ ನನ್ನನ್ನು ಗೆಲ್ಲಿಸಿದ್ದೀರಿ. 12 ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸಿದ ಜಿಲ್ಲೆಯ ಸಮಸ್ತ ಜನತೆಗೆ ಅಭಿನಂದಿಸುತ್ತೇನೆ ಎಂದರು. ಬಂಥನಾಳ ಮಠದ ಪೀಠಾಧಿಪತಿ ವೃಷಭಲಿಂಗ ಮಹಾಶಿವಯೋಗಿಳು ಸಾನ್ನಿಧ್ಯ ವಹಿಸಿದ್ದರು. ಧಾರವಾಡ ಹಾಗೂ ಬೆಂಗಳೂರು ವಿಭಾಗದ ಅಂಚೆ ಇಲಾಖೆ ಹಿರಿಯ ಅಧಿಕಾರಿಗಳಾದ ಸತೀಶಕುಮಾರ,ಎಸ್‌.ರಾಜೇಂದ್ರ ಕುಮಾರ, ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಇತರರ ವೇದಿಕೆ ಮೇಲೆ ಇದ್ದರು.

ಇಂಡಿಯಾ ಒಕ್ಕೂಟಕ್ಕಾಗಿ ತಮಿಳುನಾಡಿಗೆ ಕಾವೇರಿ ನೀರು: ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ

ಜಿಲ್ಲೆಯಲ್ಲಿ ನಿಯತ್ತಾಗಿ ಕೆಲಸ ಮಾಡಿದ್ದೇನೆ. ನನ್ನ ಸಮುದಾಯದವರನ್ನೇ ದೂರ ಇಟ್ಟು ರಾಜಕಾರಣ ಮಾಡಿದ್ದೇನೆ. ಎಲ್ಲ ಸಮುದಾಯದ ಜನರ ಸಮಸ್ಯೆಗಳನ್ನು ಪರಿಹರಿಸಿದ್ದೇನೆ. ಎಲ್ಲರೊಂದಿಗೆ ಗೌರವದಿಂದ ನಡೆದುಕೊಂಡಿದ್ದೇನೆ. ಜಾತಿ, ಜಾತಿಗಳ ಮಧ್ಯೆ ಜಗಳ ಹಚ್ಚಿರುವುದಿಲ್ಲ. ಹಿಂದೆ ಇದೇ ಭಾಗದಲ್ಲಿ ಶಾಸಕರಿದ್ದವರು ಹಳ್ಳಿ,ಹಳ್ಳಿಗಳಲ್ಲಿ ಜಗಳ ಹಚ್ಚಿದ್ದಾರೆ.
-ರಮೇಶ ಜಿಗಜಿಣಗಿ, ಸಂಸದ