35 ವರ್ಷದಿಂದ ಕನಕಪುರದ ಅಭಿವೃದ್ಧಿ ಕುಂಠಿತ: ನಟಿ ತಾರಾ
ಕಳೆದ 35 ವರ್ಷಗಳಿಂದ ಕನಕಪುರ ತಾಲೂಕನ್ನು ಆಳ್ವಿಕೆ ಮಾಡಿರುವ ಶಾಸಕರು ಕ್ಷೇತ್ರಕ್ಕೆ ಒಂದು ಉತ್ತಮ ಆಸ್ಪತ್ರೆ, ಇಂಜಿನಿಯರ್ ಕಾಲೇಜು, ಕೈಗಾರಿಕೆ ತರುವಲ್ಲಿ ವಿಫಲರಾಗಿದ್ದಾರೆಂದು ವಿಧಾನ ಪರಿಷತ್ ಮಾಜಿ ಸದಸ್ಯೆ, ಚಿತ್ರನಟಿ ತಾರಾ ಟೀಕಿಸಿದರು.
ಕನಕಪುರ (ಮೇ.01): ಕಳೆದ 35 ವರ್ಷಗಳಿಂದ ಕನಕಪುರ ತಾಲೂಕನ್ನು ಆಳ್ವಿಕೆ ಮಾಡಿರುವ ಶಾಸಕರು ಕ್ಷೇತ್ರಕ್ಕೆ ಒಂದು ಉತ್ತಮ ಆಸ್ಪತ್ರೆ, ಇಂಜಿನಿಯರ್ ಕಾಲೇಜು, ಕೈಗಾರಿಕೆ ತರುವಲ್ಲಿ ವಿಫಲರಾಗಿದ್ದಾರೆಂದು ವಿಧಾನ ಪರಿಷತ್ ಮಾಜಿ ಸದಸ್ಯೆ, ಚಿತ್ರನಟಿ ತಾರಾ ಟೀಕಿಸಿದರು. ತಾಲೂಕಿನ ತೊಪ್ಪಗಾನಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಜತೆ ಪೂಜೆ ಸಲ್ಲಿಸಿದ ಬಳಿಕ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಸಮೀಪದಲ್ಲೇ ಇರುವ ಬಿಡದಿ, ಹಾರೋಹಳ್ಳಿಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ನಂತರ ಆ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿದೆ. ಕನಕಪುರ ಕ್ಷೇತ್ರ 35 ವರ್ಷಗಳಿಂದ ಇದ್ದಂತೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಕ್ಷೇತ್ರ ಏನಾದರೂ ಅಭಿವೃದ್ಧಿ ಕಾಣಬೇಕೆಂದರೆ ಅದು ಡಬ್ಬಲ್ ಎಂಜಿನ್ ಸರಕಾರದಿಂದ ಮಾತ್ರ ಸಾಧ್ಯ. ಆದ್ದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಅವರಿಗೆ ಮತ ನೀಡಿದಾಗ ಮಾತ್ರ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಶುರುವಾಗಲಿದೆ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರು-ಕನಕಪುರ ರಸ್ತೆಯ ಕಾಮಗಾರಿ ಆರಂಭವಾಗಿದ್ದು, ಅದು ಪೂರ್ಣಗೊಳ್ಳಲೇ ಇಲ್ಲ. ಬೆಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ ರಸ್ತೆಗಳು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೂಂಡು ವಾಹನಗಳು ಓಡಾಟ ನಡೆಸಿದೆ. ಆದರೆ, ನಿಮ್ಮ ರಸ್ತೆ ಕಾಮಗಾರಿ ಯಾವಾಗ ಪೂರ್ಣಗೂಳಿಸುತ್ತೀರೆಂದು ಶಾಸಕರನ್ನು ಪ್ರಶ್ನಿಸಿ ಎಂದ ಅವರು, ಇಲ್ಲಿನ ಕಲ್ಲು ಬಂಡೆ ಹೊಡೆದು-ಹೊಡೆದು ಅವಸಾನಕ್ಕೆ ಬಂದಿದೆ. ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಆಸ್ಪತ್ರೆ, ಆರೋಗ್ಯ ಕೇಂದ್ರ, ಮಲ್ಟಿಸ್ಪೆಷಲ್ ಆಸ್ಪತ್ರೆ ಬಂದಿದೆ.
ಭ್ರಷ್ಟಾಚಾರ ಕಾಂಗ್ರೆಸ್‌ನವರ ಮನೆ ಮಾತು: ಸಚಿವ ಅಶೋಕ್
ಇಂಜಿನಿಯರ್ ಕಾಲೇಜುಗಳಾಗಿವೆ. ಇಂತಹ ಕೆಲಸ ಇಲ್ಲಿ ಯಾಕೆ ಆಗಿಲ್ಲ ಪ್ರಶ್ನಿಸಿದ ಅವರು ಮತದಾರರು ಕೂಟ್ಟಅವಕಾಶ ಸದುಪಯೋಗಪಡಿಸಿಕೊಂಡು ಶಾಸಕರು ಇಲ್ಲಿ ಅಭಿವೃದ್ಧಿಯೇ ಮಾಡಿಲ್ಲ ಎಂದರು. ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಮಾತನಾಡಿ, ಈ ಕ್ಷೇತ್ರದಲ್ಲಿ ಭಯ ಮುಕ್ತ ಹಾಗೂ ಉತ್ತಮ ವಾತಾವರಣ ನಿರ್ಮಾಣ ಮಾಡಲು ಪಕ್ಷ ನನ್ನನ್ನು ಇಲ್ಲಿಂದ ಚುನಾವಣೆಗೆ ನಿಲ್ಲಿಸಿದೆ. ಈ ಬಾರಿ ನನಗೆ ಒಂದು ಅವಕಾಶ ಕೊಟ್ಟರೆ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಇಲ್ಲಿ ಮುಕ್ತ ವಾತಾವರಣ ತರಲು ಸಹಕಾರಿಯಾಗಲಿದೆ. ಇಲ್ಲಿನ ಜೆಡಿಎಸ್ ಅಭ್ಯರ್ಥಿ ನಾಮಕಾವಸ್ತೆಯಾಗಿ ಸ್ಪರ್ಧೆ ಮಾಡಿದ್ದು, ಜೆಡಿಎಸ್ ಪಕ್ಷದ ಅಗ್ರಗಣ್ಯ ನಾಯರಾದ ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿಯಾದಿಯಾಗಿ ಯಾರು ಅಭ್ಯರ್ಥಿ ಬೆಂಬಲಿಸಿ ಪ್ರಚಾರಕ್ಕೇ ಬಂದಿಲ್ಲ ಎಂದು ಟೀಕಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲಮನ್ನಾ: ನಿಖಿಲ್ ಕುಮಾರಸ್ವಾಮಿ
ಈ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಚುನಾವಣೆ ನಡೆಯುತ್ತಿದೆ. ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಹೋಗಲಿದ್ದು, ಈ ಕ್ಷೇತ್ರ ದಲ್ಲಿ ಡಿ.ಕೆ.ಶಿ ಸಹೋದರರನ್ನು ಎದುರಿಸುವ ಶಕ್ತಿ ಹಾಗೂ ಸಾಮರ್ಥ್ಯ ಇರುವುದು ಬಿಜೆಪಿಗೆ ಮಾತ್ರ ಎಂಬುದನ್ನು ಜನತೆ ಅರಿಯಬೇಕು. ಕೇಂದ್ರ, ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದ್ದರೆ ಮಾತ್ರ ಜನರ ಸಮಸ್ಯೆ ಹಾಗೂ ಕಷ್ಟಗಳನ್ನು ಪರಿಹರಿಸಲು ಸಾಧ್ಯವಾಗಲಿದ್ದು, ಅದಕ್ಕಾಗಿ ನೀವುಗಳು ಕಮಲದ ಗುರುತಿಗೆ ಮತವನ್ನು ನೀಡುವ ಮೂಲಕ ನನಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು. ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ರವಿಕುಮಾರ್, ವೆಂಕಟೇಶ್, ಕೆ.ಆರ್.ಚಂದ್ರಶೇಖರ್ ಬೊಮ್ಮನಹಳ್ಳಿ ಕುಮಾರ್, ಭರತ್, ಮದನ್ ಸೇರಿದಂತೆ ಭಾಗಿಯಾಗಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.