ಬಿಜೆಪಿ, ಕಾಂಗ್ರೆಸ್ ಜೊತೆ ಕೈಜೋಡಿಸಿದರೆ ಅಭಿವೃದ್ಧಿ ಅಸಾಧ್ಯ : ಕುಮಾರಸ್ವಾಮಿ

ರಾಜ್ಯದ ರೈತರನ್ನು ಸಾಲಮುಕ್ತ ಮಾಡುವುದು, ಹಳ್ಳಿಗಳ ಅಭಿವೃದ್ಧಿ, ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದು ಸೇರಿದಂತೆ ನನ್ನೆಲ್ಲ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವುದು ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಕೈಜೋಡಿಸಿ  ಮಾಡುವುದು ಅಸಾಧ್ಯ. 

Development is impossible if BJP and Congress join hands Kumaraswamy sat

ಕನ್ನಡಪ್ರಭ ವಾರ್ತೆ ಕೊಪ್ಪಳ 

ಕೊಪ್ಪಳ (ಜ.30): ರಾಜ್ಯದ ರೈತರನ್ನು ಸಾಲಮುಕ್ತ ಮಾಡುವುದು, ಹಳ್ಳಿಗಳ ಅಭಿವೃದ್ಧಿ, ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದು ಸೇರಿದಂತೆ ನನ್ನೆಲ್ಲ ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವುದು ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಕೈಜೋಡಿಸಿ  ಮಾಡುವುದು ಅಸಾಧ್ಯ. ಆದ್ದರಿಂದ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಆಧಿಕಾರವನ್ನು ನೀಡುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ. 

ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಾವರಗೇರಾ ಗ್ರಾಮದಲ್ಲಿ ಪಂಚರತ್ನ ಯಾತ್ರೆಗೆ ದೊರೆತ ಅಭೂತಪೂರ್ವ ಸ್ವಾಗತ ಹಾಗೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರನ್ನೂ ನೋಡಿ ಉಲ್ಲಾಸೀತರಾಗಿ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದರು. ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಕೆ. ಶರಣಪ್ಪ ಅವರು ಜೊತೆಗೊದ್ದಾಗ ಇಲ್ಲಿ ಜೆಡಿಎಸ್ ಪಕ್ಷ ಪ್ರಬಲವಾಗಿತ್ತು. ಅದಾದನಂತರ ನಾವು ಇಲ್ಲಿ ಅಷ್ಟಾಗಿ ಬಲ ಇರಲಿಲ್ಲ . ಆದರೆ ಈಗ ನೀವು ಸೇರಿರುವುದನ್ನು ನೋಡಿದ ಮೇಲೆ ಈಗಲೂ ಈ ಭಾಗದಲ್ಲಿ ನಮ್ಮ ಶಕ್ತಿ ಇದೆ ಎನ್ನುವ ಆಶಾಭಾವನೆ ಮೂಡಿದೆ ಎಂದರು.

ರಾಷ್ಟ್ರೀಯ ಪಕ್ಷಗಳ ಭರವಸೆಗಳಿಗೆ ಮರುಳಾಗಬೇಡಿ: ಎಚ್‌.ಡಿ.ಕುಮಾರಸ್ವಾಮಿ

2.5 ಲಕ್ಷ ಕೋಟಿ ರುಪಾಯಿ ಬಜೆಟ್ ಅಗತ್ಯ: ಪ್ರತಿ ವರ್ಷ ರೈತರಿಗೆ ಎಕರೆಗೆ ಹತ್ತು ಸಾವಿರ ರುಪಾಯಿ, ವೃದ್ದಾಪ್ಯ ವೇತನ ಐದು ಸಾವಿರ ರುಪಾಯಿ, ವಿಧವಾ ವೇತನ ಎರಡುವರೆ ಸಾವಿರ ರುಪಾಯಿ. ಯುವಕರಿಗೆ, ಯುವತಿಯರಿಗೆ ಸ್ವಯಂ ಉದ್ಯೋಗ, ಮಹಿಳಾ ಸ್ವಸಹಾಯ ಸಂಘಗಳು ಸಂಪೂರ್ಣ ಸಾಲಮನ್ನಾ ಯೋಜನೆಯಗಳನ್ನು ನಾನು ಜಾರಿ ಮಾಡಿಯೇ ಮಾಡುತ್ತೇನೆ. ಇದೆಲ್ಲ ಜಾರಿಗೆ ಸುಮಾರು 2.5 ಲಕ್ಷ ಕೋಟಿ ರುಪಾಯಿ ಬಜೆಟ್ ಅಗತ್ಯವಿದೆ. ಅದನ್ನೂ ಕ್ರೋಡೀಕರಿಸುವುದು ನನಗೆ ಗೊತ್ತಿದೆ‌. ಈ ಎಲ್ಲ ಯೋಜನೆಗಳನ್ನು ಜಾರಿ ಮಾಡಲು ಜೆಡಿಎಸ್ ಪಕ್ಷ ಸ್ವತಂತ್ರ ವಾಗಿವಾಗಿ ಅಧಿಕಾರಕ್ಕೆ ಬರಬೇಕಾಗುತ್ತದೆ. ಆದರೆ ಇದೆಲ್ಲವನ್ನು  ಬಿಜೆಪಿ, ಕಾಂಗ್ರೆಸ್ ಜೊತೆ ಸರ್ಕಾರ ಮಾಡುವಂತಾದರೆ ಅಸಾಧ್ಯವಾಗಿತ್ತದೆ. ನಾನು ಮಾಡುತ್ತೇನೆ ಎಂದರೂ ಅವರು ಬಿಡುವುದಿಲ್ಲ. ಇದಕ್ಕಾಗಿ ಇದೊಂದು ಬಾರಿ ನನಗೆ ಸಂಪೂರ್ಣ ಅಧಿಕಾರ  ನೀಡಿ ಎಂದು ಪದೇ ಪದೆ ಮನವಿ ಮಾಡಿದರು. 

ರೈತರ ಪಂಪಸೆಟ್‌ಗೆ ದಿನದ 24 ಗಂಟೆ ಉಚಿತ ವಿದ್ಯತ್: ನಾನು ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಈಗಾಗಲೇ ನನ್ನನ್ನು ಮಾಜಿ ಮುಖ್ಯಮಂತ್ರಿ ಎನ್ನುತ್ತಾರೆ. ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಮುಗಿದ ಮೇಲೆ ನನ್ನನ್ನು ಮಾಜಿ ಎಂದು ಕರೆಯುತ್ತಾರೆ. ಆದರೆ ಈ ಬಾರಿ ನಾನು ಮುಖ್ಯಮಂತ್ರಿಯಾದರೆ ನಿಮ್ಮ ಸೇವೆ ಮಾಡುವುದು, ರಾಜ್ಯದ ಅಭಿವೃದ್ಧಿ, ರೈತರ ಕಷ್ಟ ತೀರಿಸುವುದು, ಬಡವರಿಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ, ರೈತರ ಪಂಪಸೆಟ್‌ಗೆ ದಿನದ 24 ಗಂಟೆ ಉಚಿತ ವಿದ್ಯತ್ ನೀಡುವುದನ್ನೇ ಪ್ರಮುಖವಾಗಿಸುತ್ತೇನೆ. ಹಾಗೊಂದು ವೇಳೆ ಸಂಪೂರ್ಣ ಅಧಿಕಾರಕ್ಕೆ ಬಂದರೂ ಮಾಡಲು ಅಭಿವೃದ್ಧಿ ಮಾಡಲು ಆಗದಿದ್ದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ನೋವಿನಿಂದ ಹೇಳಿದರು.

ದೊಡ್ಡ ನಾಯಕರು ಕೈಕೊಟ್ಟು ಹೋಗಿದ್ದಾರೆ: ಸಂಸದ ಸಂಗಣ್ಣ ಕರಡಿ ಮತ್ತು ಮಾಜಿ ಶಾಸಕ ಕೆ. ಶರಣಪ್ಪ ಅವರು ನಮ್ಮ ಪಕ್ಷದಲ್ಲಿ ಇದ್ದರು. ಈಗ ಅವರು ಕೈ ಕೊಟ್ಟು ಬೇರೆ ಪಕ್ಷದಲ್ಲಿದ್ದಾರೆ. ಅವರಿದ್ದಾಗ ಇಲ್ಲಿ ಪಕ್ಷ ಬಲಯುತವಾಗಿತ್ತು. ಆದರೂ ಈಗಲೂ ನಮ್ಮ ಪಕ್ಷಕ್ಕೆ ನೀವೆಲ್ಲ ಶಕ್ತಿ ತುಂಬಾಬೇಕಾಗಿದೆ.  ದೊಡ್ಡ ದೊಡ್ಡವರು ಹೋದರೆ ಹೋಗಲಿ, ಆದರೆ ಬಡವರ ಸೇವೆ ಮಾಡುವರು ನಮ್ಮ ಜೊತೆಗಿದ್ದಾರೆ. ಹೀಗಾಗಿ ಇವರಿಗೆ ಸೇವೆ ಮಾಡಲು ಅವಕಾಶ ನೀಡಿ ಎಂದರು. ಇನ್ನು ಹೂ ಮಳೆ 
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ತಾವರಗೇರಾ ಗ್ರಾಮದಲ್ಲಿ ಅಭಿಮಾನಿಗಳು  ಜೆಸಿಬಿ ಮೇಲೆ ನಿಂತು ಹೂ ಮಳೆ ಸುರಿಸಿದರು.

ನಾನು ಬದುಕಿರುವವರೆಗೂ ಎಚ್‌ಡಿಕೆ ಜತೆ ಹೊಡೆದಾಡಲ್ಲ: ರೇವಣ್ಣ ಶಪಥ!

ನಿಮ್ಮಿಂದ ನಮ್ಮ ಸಾಲ ಮನ್ನಾ ಆಗಿದೆ:
ತಾವರಗೇರಾಕ್ಕೆ ಬರುವಾಗ ದಾರಿಯಲ್ಲಿ ಜನರು ಅಡ್ಡಗಟ್ಟಿ ಬಂದು ಕೈಮುಗಿದು ಹೇಳಿದ್ದಾರೆ. ನಿಮ್ಮಿಂದ ನನ್ನ ಎರಡು ಲಕ್ಷ ರುಪಾಯಿ ಸಾಲ ಮನ್ನಾ ಆಗಿದೆ. ನಾವು ನಿಮ್ಮ ಪಕ್ಷಕ್ಕೆ ಮತ ನೀಡುತ್ತೇವೆ ಎಂದು. ಹೀಗೆ ದಾರಿಯುದ್ದಕ್ಕೂ ಅನೇಕರು ಹೇಳುತ್ತಿದ್ದಾರೆ.
- ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ

Latest Videos
Follow Us:
Download App:
  • android
  • ios