Asianet Suvarna News Asianet Suvarna News

ಮುಂದಿನ ಚುನಾವಣೆಗಾಗಿ ಶಾಸಕ ಶಿವನಗೌಡ ‌ನಾಯಕ ಭರ್ಜರಿ ತಯಾರಿ!

* 2023ರ ಕರ್ನಾಟಕ ವಿಧಾನಸಭೆ ಚುನಾವಣೆ
* ಈಗಿನಿಂದಲೇ ಎಲೆಕ್ಷನ್ ತಯಾರಿ ನಡೆಸಿದ ಶಿವನಗೌಡ ನಾಯಕ
* ಮತ್ತೊಮ್ಮೆ ದೇವದರ್ಗದಲ್ಲಿ ಗೆಲ್ಲುಲು ಶಿವನಗೌಡ ನಾಯಕ ಕಸರತ್ತು

Devadurga BJP MLA K Shivanagowda Nayak To Preparing For Assembly Election 2023
Author
Bengaluru, First Published May 29, 2022, 9:49 PM IST

ರಾಯಚೂರು, (ಮೇ.29): ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆಗೆ ಎಂಟೊಂಬತ್ತು ತಿಂಗಳು ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕ ಈಗಿನಿಂದಲ್ಲೇ ಮುಂದಿನ ವಿಧಾನಸಭಾ ಚುನಾವಣೆಗಾಗಿ ತಯಾರಿ ನಡೆಸಿದ್ದಾರೆ.

 ಕ್ಷೇತ್ರದ ತುಂಬಾ ಸುತ್ತಾಟ ನಡೆಸುತ್ತಾ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ‌ಜನರಿಗೆ ತಿಳಿಸಲು ಶಾಸಕ ಕೆ.ಶಿವನಗೌಡ ‌ನಾಯಕ ಮುಂದಾಗಿದ್ದಾರೆ. 

ಇಂದು(ಭಾನುಆರ) ದೇವದುರ್ಗ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಶಿವನಗೌಡ ‌ನಾಯಕ, 
ಕ್ಷೇತ್ರದಲ್ಲಿ ಹತ್ತಾರು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ಚಿಕ್ಕಬುದೂರು ಹಾಗೂ ಕೋಣಚಪ್ಪಳಿ ಭಾಗದಲ್ಲಿ ಲಿಫ್ಟ್ ನೀರಾವರಿ ಯೋಜನೆ ಜಾರಿಗೊಳಿಸುವ ಕುರಿತು ಪ್ರಯತ್ನ ನಡೆದಿದೆ. ಇದರಿಂದ ಆ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ, ಕೈ ಕೆಂಡ- ಅಗ್ನಿಕುಂಡ

ಗ್ರಾಮಗಳ ಅಭಿವೃದ್ಧಿಗೆ ನಾವು ಶ್ರಮಿಸುತ್ತಿದ್ದು, ನೂತನವಾಗಿ ಪಕ್ಷ ಸೇರ್ಪಡೆಯಾದ ತಾವೆಲ್ಲರೂ ಪಕ್ಷ ಸಂಘಟನೆಯತ್ತ ಗಮನ ಹರಿಸಬೇಕು. ಬಿಜೆಪಿಯನ್ನು ಗಟ್ಟಿಗೊಳಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಕೆಲಸ ಮಾಡಬೇಕು. ಬಿಜೆಪಿ ನೇತೃತ್ವದ ಸರ್ಕಾರದಿಂದ ಮಾತ್ರ ರಾಜ್ಯದ ಸಾಧ್ಯ ಎಂದು ತಿಳಿಸಿದರು.

 ಸಾಮೂಹಿಕ ಮದುವೆ ಸಮಾರಂಭದಲ್ಲಿ ಭಾಗಿ
ದೇವದುರ್ಗ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಹೀಗಾಗಿ ದೇವದುರ್ಗ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸಲು ಶಾಸಕ ಕೆ. ಶಿವನಗೌಡ ‌ನಾಯಕ. ಕಳೆದ 6-7 ತಿಂಗಳಿಂದ ಕ್ಷೇತ್ರದ ತುಂ‌ಬಾ ಸುತ್ತಾಟ ನಡೆಸಿದ್ದಾರೆ. ಕ್ಷೇತ್ರದಲ್ಲಿ ನಡೆಯುವ ಕಾರ್ಯಕರ್ತರ ಮದುವೆಗಳು, ಸಾಮೂಹಿಕ ವಿವಾಹಗಳು ಹಾಗೂ ಇನ್ನಿತರ ಸಭೆ ಸಮಾರಂಭಗಳಿಗೆ ಖುದ್ದು   ಶಿವನಗೌಡ ಹಾಜರಾಗುತ್ತಿದ್ದಾರೆ.

 29 ಕೆರೆ ತುಂಬುವ ಯೋಜನೆಗೆ ಟೆಂಡರ್ 
ದೇವದುರ್ಗ ತಾಲೂಕಿನ ನೀರಾವರಿ ಸೌಲಭ್ಯ ವಂಚಿತ ಗ್ರಾಮಗಳಲ್ಲಿನ 29 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಂಬಂಧ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳನ್ನು ಬೆಂಗಳೂರಿನಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಭೇಟಿ ಮಾಡಿ ಚರ್ಚೆ ನಡೆಸಿದರು.

ಕೃಷ್ಣ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರೆ ಅಧಿಕಾರಿಗಳ ಜೊತೆಗೆ ಕೆರೆ ತುಂಬಿಸುವ ಕುರಿತು ಸುದೀರ್ಘವಾಗಿ ಚರ್ಚಿಸಿದ ಅವರು, ಶೀಘ್ರದಲ್ಲೇ ಕೆರೆ ತುಂಬಿಸುವ ಯೋಜನೆ ಪ್ರಾರಂಭಿಸಬೇಕಿದ್ದು ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸಲು ಸೂಚಿಸಿದರು.

ಕೆರೆ ತುಂಬಿಸುವ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದ್ದು ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಇದರಿಂದ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ದೇವದುರ್ಗ ತಾಲೂಕಿನ ನೀರಾವರಿ ವಂಚಿತ ಹಾಗೂ ಗುಡ್ಡಗಾಡು ಪ್ರದೇಶದ ರೈತರಿಗೆ ಈ ಯೋಜನೆ ಬಹಳ ಸಹಕಾರಿಯಾಗಲಿದೆ.

ಈಗಾಗಲೇ ದೇವದುರ್ಗ ತಾಲೂಕಿನ 29 ಕೆರೆಗಳಿಗೆ ನೀರು ತುಂಬಿಸಲು 330 ಕೋ. ರೂ. ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಮೊದಲ ಹಂತದಲ್ಲಿ 180 ಕೋ. ರೂ.‌ ವೆಚ್ಚದಲ್ಲಿ ಅರಕೇರಾ, ಆಲ್ಕೋಡ್, ಕ್ಯಾದಿಗೇರಾ, ಪಿಲಿಗುಂಡ, ಬುಂಕಲದೊಡ್ಡಿ, ಬಂಡೇಗುಡ್ಡ, ಮಲ್ಲೇನಾಯಕದೊಡ್ಡಿ ಸೇರಿದಂತೆ 9 ಕೆರೆಗಳಿಗೆ ನೀರು ತುಂಬಿಸಲಾಗುವುದು.

ಎರಡನೇ ಹಂತದಲ್ಲಿ ಇನ್ನುಳಿದ 20 ಕೆರೆಗಳ ಅಭಿವೃದ್ಧಿ ‌ಮತ್ತು ನೀರು ತುಂಬಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ 29 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೃಷ್ಣ ಭಾಗ್ಯ ಜಲ ನಿಗಮ ನಿರ್ವಹಣೆ ಮಾಡುತ್ತಿದ್ದು, ಕೆರೆಗಳಿಗೆ ನೀರು ತುಂಬಿರುವುದರಿಂದ ಭವಿಷ್ಯ ದಿನಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. 

 ಹಳ್ಳಿ-ಹಳ್ಳಿಯಲ್ಲಿ ಪಕ್ಷ ಸಂಘಟನೆ
ಕಳೆದ 6-7 ತಿಂಗಳಿಂದ ಕ್ಷೇತ್ರದಲ್ಲಿ ಶಾಸಕ ಭರ್ಜರಿಯಾಗಿ ಓಡಾಟ ನಡೆಸಿದ್ದಾರೆ. ಜೊತೆಗೆ ಪ್ರತಿ ಗ್ರಾಮದಲ್ಲಿಯೂ ಬೇರೆ ಪಕ್ಷಗಳ ಮುಖಂಡರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಾ ಚುನಾವಣೆ ತಯಾರಿ ನಡೆಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ದೇವದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸತೀಶ್ ಬಂಡೇಗುಡ್ಡ, ಚಿಕ್ಕಬುದೂರು ಗ್ರಾಮದ 75ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಕೆ.ಇರಬಗೇರಾ ಗ್ರಾ.ಪಂ. ವ್ಯಾಪ್ತಿಯ ಮತ್ತು ಕೋಣಚಪ್ಪಳಿ ಗ್ರಾಮದವರು ಸೇರಿದಂತೆ 120ಕ್ಕೂ ಹೆಚ್ಚು ಜನ ವಿವಿಧ ಪಕ್ಷ ತೊರೆದು ಬಿಜೆಪಿ ಸೇರಿದರು. ಪಕ್ಷದ ತತ್ವ, ಸಿದ್ಧಾಂತ ಹಾಗೂ ಶಾಸಕರ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಬಿಜೆಪಿ ಸೇರ್ಪಡೆಯಾದರು..ಪಕ್ಷಕ್ಕೆ ಬಂದ ಮುಖಂಡರಿಗೆ  ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕಿ ಶಾಸಕರು ಸ್ವಾಗತ ಕೋರುತ್ತಿದ್ದಾರೆ. 

ಒಟ್ಟಿನಲ್ಲಿ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ‌ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಕೆ. ಶಿವನಗೌಡ ನಾಯಕ ತಯಾರಿ ನಡೆಸಿದ್ದಾರೆ.

Follow Us:
Download App:
  • android
  • ios