Asianet Suvarna News Asianet Suvarna News

ಕಾಂಗ್ರೆಸ್ ಟಿಕೆಟ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು: ನಾಳೆ ಕೊನೆಯ ದಿನ

ರಾಜ್ಯದಲ್ಲಿ ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಟಿಕೆಟ್‌ ಪಡೆಯಲು ಪೂರ್ವಭಾವಿಯಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ ತಕ್ಷಣವೇ ಟಿಕೆಟ್‌ ಪಡೆಯಲು ಪೈಪೋಟಿ ಆರಂಭವಾಗಿದ್ದು, ಭಾರಿ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ.

Demand for Congress ticket: Tomorrow is the last day
Author
First Published Nov 20, 2022, 4:51 PM IST | Last Updated Nov 20, 2022, 5:00 PM IST

ಬೆಂಗಳೂರು (ನ.20) : ರಾಜ್ಯದಲ್ಲಿ ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಟಿಕೆಟ್‌ ಪಡೆಯಲು ಪೂರ್ವಭಾವಿಯಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ ತಕ್ಷಣವೇ ಟಿಕೆಟ್‌ ಪಡೆಯಲು ಪೈಪೋಟಿ ಆರಂಭವಾಗಿದೆ. ಒಂದು ಕ್ಷೇತ್ರದಲ್ಲಿ ಕನಿಷ್ಠ 4 ರಿಂದ 10 ಮಂದಿ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ಕೆಪಿಸಿಸಿ ಕಚೇರಿಗೆ ಆಗಮಿಸಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ ಟಿಕೆಟ್‌ಗೆ ಭಾರಿ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ.

ಈಗಾಗಲೇ ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ (KPCC President) ಡಿ.ಕೆ. ಶಿವಕುಮಾರ್‍‌ ಘೋಷಣೆ ಬೆನ್ನಲ್ಲೇ ಕೇವಲ ಒಂದು ವಾರದಲ್ಲಿ 1,200ಕ್ಕೂ ಹೆಚ್ಚಿನ ಅರ್ಜಿಗಳನ್ನು ಆಕಾಂಕ್ಷಿಗಳು ಪಡೆದುಕೊಂಡಿದ್ದರು. ಮೊದಲು ನ.15ಕ್ಕೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವೆಂದು ನಿಗದಿ ಮಾಡಿದ್ದರಿಂದ ಈ ವೇಳೆ ನೂಕು ನುಗ್ಗಲು (Rush) ಉಂಟಾಗಿತ್ತು. ಆದರೂ ಕೇವಲ 550ಕ್ಕೂ ಕಡಿಮೆ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಗಳನ್ನು ಪಡೆದವರು 1,200 ಇದ್ದರೂ ಸಲ್ಲಿಕೆ ಪ್ರಮಾಣ ಕಡಿಮೆ ಆಗಿದ್ದರಿಂದ ಅವಧಿಯನ್ನು ನ.21ರವರೆಗೆ ವಿಸ್ತರಣೆ ಮಾಡಲಾಗಿತ್ತು. ಈಗ ನಾಳೆಯೇ (Tomorrow) ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದರಿಂದ ಕೆಪಿಸಿಸಿ ಕಚೇರಿಗಳ ಮುಂದೆ ಟಿಕೆಟ್‌ ಆಕಾಂಕ್ಷಿಗಳು ಮತ್ತು ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಆಗುತ್ತಿದ್ದಾರೆ.

Congress Ticket: ಟಿಕೆಟ್‌ ಅರ್ಜಿಯಿಂದ ‘ಕಾಂಗ್ರೆಸ್‌’ಗೆ .18 ಕೋಟಿ ಕಲೆಕ್ಷನ್‌!

20 ಕೋಟಿ ರೂ. ದೇಣಿಗೆ ಸಂಗ್ರಹ: ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು (Aspirants) ತಲಾ 5 ಸಾವಿರ ರೂ. ಶುಲ್ಕ (Fees) ಪಾವತಿಸಿ ಅರ್ಜಿ ಪಡೆದುಕೊಳ್ಳಬೇಕು. ಇನ್ನು ಅರ್ಜಿ (Application) ಸಲ್ಲಿಕೆ ಮಾಡುವಾಗ ಕೆಪಿಸಿಸಿ ಕಚೇರಿ (Office) ನಿರ್ಮಾಣ ಉದ್ದೇಶಕ್ಕಾಗಿ 2 ಲಕ್ಷ ರೂ. ಬಿಲ್ಡಿಂಗ್‌ ಫಂಡ್‌ (Building fund) ನೀಡುವಂತೆ ಸೂಚಿಸಲಾಗಿದೆ. ಈವರೆಗೆ ಒಟ್ಟು 1 ಸಾವಿರಕ್ಕೂ ಅಧಿಕ ಟಿಕೆಟ್‌ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, ಇದರಿಂದ ಒಟ್ಟಾರೆ 20 ಕೋಟಿ ರೂ.ಗಿಂತ ಅಧಿಕ ಮೊತ್ತ ಸಂಗ್ರಹವಾಗಿದೆ. ಇನ್ನು ನಾಳೆಯೂ ಟಿಕೆಟ್‌ (Ticket) ಸಲ್ಲಿಕೆಗೆ ಅವಕಾಶ ಇರುವುದರಿಂದ ಹೆಚ್ಚಿನ ಆಕಾಂಕ್ಷಿಗಳು ಅರ್ಜಿ ಸಲ್ಲಿಕೆಗೆ ಬರಬಹುದು ಎಂಬ ನಿರೀಕ್ಷೆಯಿದೆ.

ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ: ಅಪ್ಪ ಮಕ್ಕಳ ಸಂಖ್ಯೆ 7ಕ್ಕೇರಿಕೆ

ಕೆಪಿಸಿಸಿ ಕಚೇರಿ ಮುಂದೆ ಟ್ರಾಫಿಕ್: ಬೆಂಗಳೂರಿನ ಸುತ್ತಮುತ್ತಲಿನ ಕೆಲವು ವಿಧಾನಸಭಾ ಕ್ಷೇತ್ರಗಳ (Assembly) ಟಿಕೆಟ್‌ ಆಕಾಂಕ್ಷಿಗಳು ತಾವು ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಕೆಗೆ ಬರುವ ಮುನ್ನ ತಮ್ಮೊಂದಿಗೆ ಬಸ್‌ಗಳನ್ನು ತಮ್ಮ ಬೆಂಬಲಿಗರನ್ನು (Followers) ಕರೆದುಕೊಂಡು ಬರುತ್ತಿದ್ದಾರೆ. ಇದರಿಂದಾಗಿ, ನಗರದ ಕೆಪಿಸಿಸಿ ಕಚೇರಿಯ ಮುಂದೆ ಬಸ್‌ ಮತ್ತು ಕಾರುಗಳ ನಿಲುಗಡೆ ಹೆಚ್ಚಾಗಿದ್ದು, ಟ್ರಾಫಿಕ್‌ ಜಾಮ್‌ (Traffic jam) ಉಂಟಾಗುತ್ತಿದೆ. ಇದನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲು ಪೊಲೀಸರು ಹೆಣಗಾಡುತ್ತಿದ್ದಾರೆ. ದಾಸರಹಳ್ಳಿ, ಶಿಡ್ಲಘಟ್ಟ ಸೇರಿ‌ ಕೆಲ ಕ್ಷೇತ್ರಗಳ ಆಕಾಂಕ್ಷಿಗಳು ಬಸ್‌ಗಳಲ್ಲಿ ಜನರನ್ನು ಕರೆತಂದಿದ್ದರು. 

Latest Videos
Follow Us:
Download App:
  • android
  • ios