Asianet Suvarna News Asianet Suvarna News

Delhi MCD Election Results: ಎಎಪಿಯಿಂದ ಸಂಭ್ರಮಾಚರಣೆ, ಕಾಂಗ್ರೆಸ್‌ ಕಚೇರಿ ಖಾಲಿ ಖಾಲಿ..!

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಈ ಚುನಾವಣೆ ಕಾಂಗ್ರೆಸ್‌, ಎಎಪಿ ಹಾಗೂ ಬಿಜೆಪಿ ನಡುವೆ ಪ್ರಬಲ ಸ್ಪರ್ಧೆ ನಡೆಯಬಹುದು ಎಂದು ಭಾವಿಸಲಾಗಿತ್ತಾದರೂ, ಕೈ ಪಕ್ಷ ಮಕಾಡೆ ಮಲಗಿದೆ. 

delhi mcd poll results 2022 aap celebrates congress wears deserted look ash
Author
First Published Dec 7, 2022, 1:31 PM IST

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ (Delhi Municipal Corporation Election Results 2022) ಬಹುತೇಕ ಹೊರಬಿದ್ದಿದ್ದು, ಎಎಪಿ (AAP) ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಈ ಮೂಲಕ 15 ವರ್ಷಗಳಿಂದ ಬಿಜೆಪಿ (BJP) ಕೈಯಲ್ಲಿದ್ದ ಅಧಿಕಾರವನ್ನು ಈ ಬಾರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ನೇತೃತ್ವದ ಪಕ್ಷ ಕಸಿದುಕೊಂಡಿದೆ. ಅಲ್ಲದೆ, ದೆಹಲಿ ಸರ್ಕಾರ  ಹಾಗೂ ಮಹಾನಗರ ಪಾಲಿಕೆ ಎರಡೂ ಚುಕ್ಕಾಣಿಯನ್ನು ಈಗ ಆಪ್‌ ತನ್ನ ಹಿಡಿತಕ್ಕೆ ತೆಗೆದುಕೊಲ್ಳುತ್ತಿದೆ. ಈ ಹಿನ್ನೆಲೆ ರಾಷ್ಟ್ರ ರಾಜಧಾನಿಯಲ್ಲಿ (National Capital) ಆಪ್‌ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದ್ದು, ಎಎಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. 

250 ವಾರ್ಡ್‌ಗಳ ದೆಹಲಿ ಪಾಲಿಕೆಯಲ್ಲಿ ಎಎಪಿ ಈಗಾಗಲೇ 100 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನೂ ಹಲವು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಧಿಕಾರ ಹಿಡಿಯಲು 16 ಸ್ಥಾನಗಳ ಅಗತ್ಯವಿದ್ದು, ಆಧರೆ ಆಪ್‌ 130 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆ ದೆಹಲಿಯ ಎಎಪಿ ಕಚೇರಿಯ ಬಳಿ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗಿದೆ. 

ಇದನ್ನು ಓದಿ:  Delhi MCD Poll Results: ಎಎಪಿಗೆ ಸಿಗಲಿದೆ ಸ್ಪಷ್ಟ ಬಹುಮತ, ಬಿಜೆಪಿಯಿಂದ ಪ್ರಬಲ ಪೈಪೋಟಿ..!

ಕಾಂಗ್ರೆಸ್‌ ಕಚೇರಿ ಖಾಲಿ ಖಾಲಿ..!
ಇನ್ನೊದೆಡೆ, 250 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ (Congress) ಕೇವಲ 8 ರಿಂದ 9 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದ್ದು, ಎರಡಂಕಿ ಮುಟ್ಟಲು ಸಹ ವಿಫಲವಾದಂತಾಗಿದೆ. ಈ ಹಿನ್ನೆಲೆ ದೆಹಲಿಯ ಕಾಂಗ್ರೆಸ್‌ ಕಚೇರಿ ಖಾಲಿ ಖಾಲಿಯಾಗಿದೆ. ಕಾಂಗ್ರೆಸ್‌ ಕಚೇರಿಯ ಕೆಲವೇ ಮೀಟರ್‌ಗಳಷ್ಟು ಅಂತರದಲ್ಲಿ ಎಎಪಿ ಕಚೇರಿ ಇದ್ದು, ಅಲ್ಲಿ ಅಂಬ್ರಮಾಚರಣೆ ಜೋರಾಗಿದ್ದರೆ, ಕಾಂಗ್ರೆಸ್‌ ಕಚೇರಿ ಮಾತ್ರ ಖಾಲಿ ಹೊಡೆಯುತ್ತಿದ್ದು, ನಿರ್ಜನ ಪ್ರದೇಶವಾದಂತಾಗಿದೆ. 

ದೆಹಲಿಯ ರೋಸ್‌ ಅವೆನ್ಯೂ ಪ್ರದೇಶದಲ್ಲಿರುವ ರಾಜೀವ್‌ ಭವನ್‌ನ ಕಾಂಗ್ರೆಸ್‌ ಸ್ಥಳೀಯ ಕಚೇರಿಗೆ ಯಾವುದೇ ನಾಯಕರಾಗಲೀ ಅಥವಾ ಕಾರ್ಯಕರ್ತರಾಗಲೀ ಬೆಳಗ್ಗೆಯಿಂದ ಕಾಣಿಸಿಕೊಳ್ಳುತ್ತಿಲ್ಲ. ಎಕ್ಸಿಟ್‌ ಪೋಲ್‌ಗಳು ಸಹ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳು ಸಿಗಲ್ಲ ಎಂದು ಭವಿಷ್ಯ ನುಡಿದಿದ್ದವು. ಆ ಭವಿಷ್ಯ ನಿಜವಾಗುತ್ತಿದೆ. 

ಇದನ್ನೂ ಓದಿ: ಸಮೀಕ್ಷಾ ವರದಿ: ಗುಜರಾತ್‌ನಲ್ಲಿ ಕಮಲ, ಅತಂತ್ರದಲ್ಲಿ ಹಿಮಾಚಲ, ದೆಹಲಿಯಲ್ಲಿ ಆಪ್ ಕಿಲ ಕಿಲ!

ಆದರೂ, ದೆಹಲಿಯ ಕಾಂಗ್ರೆಸ್‌ ಕಚೇರಿಯ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಎಎಪಿ ಹಾಗೂ ಬಿಜೆಪಿ ಕೇರಿಗಳ ಬಳಿ ಬೆಳಗ್ಗಿನಿಂದ ಹೆಚ್ಚು ಮಂದಿ ನಾಯಕರು ಹಾಗೂ ಕಾರ್ಯಕರ್ತರು ಒಂದೆಡೆ ದೌಡಾಯಿಸಿದ್ದು, ಫಲಿತಾಂಶಕ್ಕಾಗಿ ಕುತೂಹಲದಿಂದ ನೋಡುತ್ತಿದ್ದರು. ಆದರೆ, ಕಾಂಗ್ರೆಸ್‌ ಕಚೇರಿಯತ್ತ ಮಾತ್ರ ಆ ಪಕ್ಷದ ನಾಯಕರಾಗಲೀ, ಕಾರ್ಯಕರ್ತರಾಗಲೀ ಕಾಲಿಟ್ಟಿಲ್ಲ. 

ಬುಧವಾರ ಬೆಳಗ್ಗೆ ಹೆಚ್ಚು ಭದ್ರತೆಯೊಂದಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಇನ್ನೂ ಮುಂದುವರಿದಿದೆ. ಡಿಸೆಂಬರ್‌ 4 ರಂದು ದೆಹಲಿ ಪಾಲಿಕೆಯ 250 ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು,  1,349 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿತ್ತು. ಈಗ ಬಹುತೇಕ ಫಲಿತಾಂಶಗಳು ಹೊರಹೊಮ್ಮುತ್ತಿದೆ. ಇನ್ನು, ಈ ಚುನಾವಣೆಯಲ್ಲಿ ಶೇ.  50.48 ರಷ್ಟು ಮತದಾನ ನಡೆದಿತ್ತು.

ಇದನ್ನೂ ಓದಿ: ದೆಹಲಿ ನಗರಸಭೆ ಮತ ಎಣಿಕೆ: ಈ ಕ್ಷಣದ ಅಪ್‌ಡೇಟ್ ಇಲ್ಲಿದೆ

ರಾಷ್ಟ್ರ ರಾಜಧಾನಿಯಲ್ಲಿ ನಡೆದ ಈ ಚುನಾವಣೆ ಕಾಂಗ್ರೆಸ್‌, ಎಎಪಿ ಹಾಗೂ ಬಿಜೆಪಿ ನಡುವೆ ಪ್ರಬಲ ಸ್ಪರ್ಧೆ ನಡೆಯಬಹುದು ಎಂದು ಭಾವಿಸಲಾಗಿತ್ತಾದರೂ, ಕೈ ಪಕ್ಷ ಮಕಾಡೆ ಮಲಗಿದೆ. ಮತ ಎಣಿಕೆಗೂ ಮುನ್ನ ಈ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಆಪ್‌ ಹಾಗೂ ಬಿಜೆಪಿ ಇಬ್ಬರೂ ಸಹ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೆ, ಕಾಂಗ್ರೆಸ್‌ ಸಹ ಈ ಬಾರಿ ನಾವೂ ಅಧಿಕಾರ ಹಿಡಿಯಬಹುದೇ ಎಂದು ಎದುರು ನೋಡುತ್ತಿತ್ತು. 

Follow Us:
Download App:
  • android
  • ios