ದೆಹಲಿ ಬಿಜೆಪಿಯಲ್ಲಿ ಮಹಿಳಾ ನಾಯಕಿಯರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಇದೀಗ ಹೊಸ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.  ವಿಶೇಷ ಅಂದರೆ ಬಿಜೆಪಿ ಫೈರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿದ್ದ ದಿವಂಗತ ಸುಷ್ಮಾ ಸ್ವರಾಜ್ ಪುತ್ರಿಗೆ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ.

ನವದೆಹಲಿ(ಆ.011) ಬಿಜೆಪಿ ಪ್ರಮುಖ ನಾಯಕಿ, ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಪುತ್ರಿಗೆ ದೆಹಲಿ ಬಿಜಪಿಯಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗಿದೆ. ದೆಹಲಿ ಬಿಜೆಪಿ ಕಾರ್ಯದರ್ಶಿಯಾಗಿ ಬನ್ಸುರಿ ಸ್ವರಾಜ್ ನೇಮಕ ಮಾಡಲಾಗಿದೆ. ಬನ್ಸುರಿ ಜೊತೆಗೆ ದೆಹಲಿ ಬಿಜೆಪಿ ಕಾರ್ಯದರ್ಶಿಗಳಾಗಿ ಹರ್ಷಾ ಮಲ್ಹೋತ್ರ, ಯೋಗೇಂದ್ರ ಚಾಂದೋಲಿಯಾ ಹಾಗೂ ಕಮಲಜೀತ್ ಸೆಹ್ರಾವತ್ ನೇಮಕ ಮಾಡಲಾಗಿದೆ. ದೆಹಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚದೇವಾ ಈ ಕುರಿತು ಘೋಷಣೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಕೀಲೆ ಹಾಗೂ ಉತ್ತಮ ವಾಗ್ಮಿಯಾಗಿರುವ ಬನ್ಸುರಿ ಸ್ವರಾಜ್ ತಾಯಿ ರೀತಿಯಲ್ಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಇದೀಗ ದೆಹಲಿ ಬಿಜೆಪಿಯಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೆಡ್ಡು ಹೊಡೆಯಲು ಬಿಜೆಪಿ ಮಹತ್ತರ ಬದಲಾವಣೆ ಮಾಡಿದೆ. ದೆಹಲಿ ಬಿಜೆಪಿಯಲ್ಲಿ ಮಹಿಳಾ ಯುವ ನಾಯಕಿಯಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹೊಸ ಮುಖಗಳಿಗೆ ಅವಕಾಶ ನೀಡಿರು ದೆಹಲಿ ಬಿಜಿಪಿ, ಪಕ್ಷವನ್ನು ಬಲಪಡಿಸಲು ನಿರ್ಧರಿಸಿದೆ.

ಸುಷ್ಮಾ ಸ್ವರಾಜ್ ಹುಟ್ಟುಹಬ್ಬ: ಹಳೆ ಫೋಟೋ ಪೋಸ್ಟ್ ಮಾಡಿ ಅಮ್ಮನ ನೆನೆದ ಅಪ್ಪ ಮಗಳು

ಬನ್ಸುರಿ ಸ್ವರಾಜ್ ಈ ವರ್ಷದ ಆರಂಭದಲ್ಲೇ ದೆಹಲಿ ಬಿಜೆಪಿಯ ಕಾನೂನು ತಂಡದಲ್ಲಿ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ವಕೀಲೆಯಾಗಿರುವ ಬನ್ಸುರಿ ಸ್ವರಾಜ್, ದೆಹಲಿ ಬಿಜೆಪಿ ಹಲವು ಕೇಸ್‌ಗಳನ್ನು ಮುನ್ನಡೆಸುತ್ತಿದ್ದಾರೆ. ತಾಯಿ ಸುಷ್ಮಾ ಸ್ವರಾಜ್ ಪ್ರಧಾನಿ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ವಿದೇಶಾಂಗ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ. ಸುಷ್ಮಾ ಸ್ವರಾಜ್ ಅನಾರೋಗ್ಯದಿಂದ 2ನೇ ಅವಧಿಯಲ್ಲಿ ರಾಜಕೀಯದಿಂದ ದೂರ ಉಳಿದಿದ್ದರು. ಇನ್ನು 2019ರ ಆಗಸ್ಟ್‌ನಲ್ಲಿ ಸುಷ್ಮಾ ಸ್ವರಾಜ್ ನಿಧನರಾಗಿದ್ದಾರೆ. 67 ವರ್ಷದ ಸುಷ್ಮಾ ಸ್ವರಾಜ್ ಭಾರತದ ವಿದೇಶಾಂಗ ಸಚಿವೆಯಾಗಿ ದೇಶ ವಿದೇಶಗಳಲ್ಲಿ ಜನಪ್ರಿಯರಾಗಿದ್ದರು.

ಇದೀಗ ಬನ್ಸುರಿ ಸ್ವರಾಜ್ ಬಿಜೆಪಿಯಲ್ಲಿ ಹಂತ ಹಂತವಾಗಿ ಬೆಳೆಯುತ್ತಿದ್ದಾರೆ. ಇದೀಗ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ದೆಹಲಿ ಬಿಜೆಪಿ ಪ್ರಮುಖ ನಾಯಕರಿಲ್ಲದೆ ಸೊರಗಿದೆ. ಹೀಗಾಗಿ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಬಲಿಷ್ಠವಾಗಿ ರೂಪುಗೊಂಡಿದೆ. ಆಮ್ ಆದ್ಮಿ ಪಾರ್ಟಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎದುರಿಸಲು ಸಮರ್ಥ ನಾಯಕರ ಅವಶ್ಯಕತೆ ಇದೆ. ಇದೀಗ ಈ ಸ್ಥಾನವನ್ನು ಬನ್ಸುರಿ ಸ್ವರಾಜ್ ಆಕ್ರಮಿಸಿಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿದೆ.