ನನ್ನ ಸೋಲಿಸಿ ಕಣ್ಣೀರು ಹಾಕಿಸಿದವರಿಗೂ ಕಣ್ಣೀರು ಹಾಕಿಸಿ; ಆಗಲೇ ನನ್ನ ಆತ್ಮಕ್ಕೆ ಶಾಂತಿ: ಹೆಚ್‌ಡಿ ದೇವೇಗೌಡ ಕರೆ!

ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ತುಮಕೂರಿನಿಂದ ನಿಲ್ಲಲು ಬಯಸಿದವನಲ್ಲ, ರಾಜಕೀಯ ನಿವೃತ್ತಿ ಘೋಷಿಸಲು ಬಯಸಿದ್ದೆ. ಆದರೆ ಜಿಲ್ಲೆಯ ಕೆಲವು ಮುಖಂಡರು ಚುನಾವಣೆಗೆ ನಿಲ್ಲಿಸಿ ನನ್ನನ್ನು ಬಲಿಪಶು ಮಾಡಿದರು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ದೂರಿದ್ದಾರೆ.

Defeat those who defeated me Deve Gowda instructed the jds activists at madhugiri rav

ಮಧುಗಿರಿ (ಏ.25) : ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ತುಮಕೂರಿನಿಂದ ನಿಲ್ಲಲು ಬಯಸಿದವನಲ್ಲ, ರಾಜಕೀಯ ನಿವೃತ್ತಿ ಘೋಷಿಸಲು ಬಯಸಿದ್ದೆ. ಆದರೆ ಜಿಲ್ಲೆಯ ಕೆಲವು ಮುಖಂಡರು ಚುನಾವಣೆಗೆ ನಿಲ್ಲಿಸಿ ನನ್ನನ್ನು ಬಲಿಪಶು ಮಾಡಿದರು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ(HD Devegowda) ದೂರಿದ್ದಾರೆ.

ಸೋಮವಾರ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿ.ಕೈಮರದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಲೋಕಸಭೆಯಲ್ಲಿ ಜಿಲ್ಲೆಯ ಕೆಲ ಮುಖಂಡರು, ಮಾಜಿ ಶಾಸಕರು ನನ್ನನ್ನು ಬಲಿಪಶು ಮಾಡಿದ್ದು ಈ ಬಾರಿ ತಕ್ಕ ಪಾಠ ಕಲಿಸುವಂತೆ ಮನವಿ ಮಾಡಿದರು. ನಾನು ಬೇಡವೆಂದರೂ ಕರೆತಂದು ಲೋಕಸಭೆಯ ಚುನಾವಣೆಯಲ್ಲಿ ನನ್ನನ್ನು ಸೋಲಿಸಿ ಕಣ್ಣೀರು ಹಾಕಿಸಿದವರಿಗೂ ಕಣ್ಣೀರು ಹಾಕಿಸಬೇಕು. ಆಗಲೇ ನನ್ನ ಆತ್ಮಕ್ಕೆ ಶಾಂತಿಯೆಂದು ಮಾಜಿ ಪ್ರಧಾನಿ ದೇವೇಗೌಡರು ಕಣ್ಣೀರು ಹಾಕಿದರು.

ಆರ್‌.ಉಗ್ರೇಶ್‌ ಪರ ಎಚ್‌.ಡಿ.ದೇವೇಗೌಡರಿಂದ ಮತಯಾಚನೆ

ನಾನು ಯಾರ ಮನಸ್ಸು ನೋಯಿಸಲ್ಲ, ಹಿಂದಿನದನ್ನು ಮೆಲುಕು ಹಾಕುವುದಿಲ್ಲ. ರಾಜ್ಯದಲ್ಲಿ ಜೆಡಿಎಸ್‌ 25 ಸ್ಥಾನ ಪಡೆಯುತ್ತದೆ ಎಂದು ಕೆಲವು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ, ಬಹುಶಃ ಮಧುಗಿರಿ ಒಂದೇ ಸಾಕು ಕಾಂಗ್ರೆಸ್‌ ನಾಯಕರಿಗೆ ಉತ್ತರ ಕೊಡೋಕೆ. ಕಾಂಗ್ರೆಸ್‌ನವರಿಗೆ ಮಧುಗಿರಿಯಿಂದಲೇ ತಕ್ಕ ಉತ್ತರವನ್ನು ಕೊಡ್ತೀನಿ ಎಂದು ಗುಡುಗಿದರು.

ಹಿಂದೆ ನಾನು ಸಿಎಂ ಆಗಲು ಜಿಲ್ಲೆಯಲ್ಲಿ 9 ಸ್ಥಾನ ನೀಡಿದ್ದರು. ಈಗ ಕುಮಾರಸ್ವಾಮಿ ಜಿಲ್ಲೆಯ ಬಗ್ಗೆ ವಿಶ್ವಾಸವಿಟ್ಟಿದ್ದು ಪಂಚರತ್ನ ಯೋಜನೆ ಜಾರಿಗೆ ಜೋಳಿಗೆ ಹಿಡಿದು ಹೊರಟಿದ್ದಾರೆ. ಮಹಿಳೆಯರು, ಮುಸ್ಲಿಮರು, ದಲಿತರು, ಯಾದವರು ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಆಶೀರ್ವಾದ ಮಾಡಬೇಕು ಎಂದರು.

ರೈತರ ಕಣ್ಣೀರು ಒರೆಸಲು ಎಚ್‌ಡಿಕೆ ಸಿಎಂ ಆಗಬೇಕು: ಎಚ್‌ಡಿ ದೇವೇಗೌಡ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios