ಜೆಡಿಎಸ್‌ಗೆ ಮರಳಲು ದತ್ತಗೆ ಗಡುವು ; ಪ್ರಜ್ವಲ್ ರೇವಣ್ಣ
ಜನವರಿ 9ರೊಳಗೆ ಮರಳಿ ಜೆಡಿಎಸ್ ಪಕ್ಷಕ್ಕೆ ಬರಲು ಮಾಜಿ ಶಾಸಕ ವೈಎಸ್‌ವಿ ದತ್ತ ಅವರಿಗೆ ಮನವಿ ಮಾಡಲಿದ್ದು. ಬಾರದೇ ಇದ್ದಲ್ಲಿ ಪಕ್ಷದಿಂದ ಮುಂದಿನ ನಡೆಯನ್ನು ಪ್ರಕಟಿಸಲಾಗುವುದು ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಕಡೂರು (ಡಿ.24) : ಜನವರಿ 9ರೊಳಗೆ ಮರಳಿ ಜೆಡಿಎಸ್ ಪಕ್ಷಕ್ಕೆ ಬರಲು ಮಾಜಿ ಶಾಸಕ ವೈಎಸ್‌ವಿ ದತ್ತ ಅವರಿಗೆ ಮನವಿ ಮಾಡಲಿದ್ದು. ಬಾರದೇ ಇದ್ದಲ್ಲಿ ಪಕ್ಷದಿಂದ ಮುಂದಿನ ನಡೆಯನ್ನು ಪ್ರಕಟಿಸಲಾಗುವುದು ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಪಟ್ಟಣದ ನಂದಿ ಕ್ರೀಡಾ ಕಬ್‌್ಲನಲ್ಲಿ ಶುಕ್ರವಾರ ನಡೆದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವೈಎಸ್‌ವಿ ದತ್ತ ಎಂದರೆ ಅವರೊಬ್ಬ ಜನಪ್ರಿಯ ನಾಯಕರು. ಅದರಲ್ಲೂ ದೇವೇಗೌಡರ ಮಾನಸ ಪುತ್ರರೆಂದು ರಾಜ್ಯದಲ್ಲಿ ಬಿಂಬಿತರಾಗಿದ್ದಾರೆ. ಅವರು ಈಗ ಕಾಂಗ್ರೆಸ್ ಸೇರ್ಪಡೆ ಆಗುವುದಾಗಿ ಹೇಳಿಕೊಂಡಿದ್ದು, ಕ್ಷೇತ್ರದ ಯಾರೋದೋ ಮಾತು ಕೇಳಿ ಅವರು ಈ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಅವರು ಮನಸ್ಸು ಪರಿವರ್ತನೆ ಮಾಡಿಕೊಂಡು ಮರಳಿ ಜೆಡಿಎಸ್‌ಗೆ ಜ.9ರೊಳಗೆ ಬಂದರೆ ಅವರನ್ನು ಸ್ವಾಗತಿಸುತ್ತೇವೆ ಎಂದರು.
Ramanagara: ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ
ಜೆಡಿಎಸ್‌ನ ರಾಜ್ಯ ಮುಖಂಡರು ಅವರನ್ನು ಕರೆಸಿ ಮಾತನಾಡಿದ್ದು ಆರ್ಥಿಕವಾಗಿ ಶಕ್ತಿ ತುಂಬಿ ಮುಂದೆ ನಿಮ್ಮನ್ನು ಗೆಲ್ಲಿಸುತ್ತೇವೆ. ಇಲ್ಲದೇ ಹೋದಲ್ಲಿ ಎಂಎಲ್‌ಸಿ ಮಾಡುವ ಭರವಸೆÜ ನೀಡಿದ್ದರು. ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿಲ್ಲ. ದಾರಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದರು.
ದತ್ತ ಎಂದರೆ ದೇವೇಗೌಡರು ಬೆಳೆಸಿದ ಗಿಡ ಎಂಬ ಮನೋಭಾವನೆಯಿಂದ ಕ್ಷೇತ್ರದ ಕಾರ್ಯಕರ್ತರು ಹಾಗೂ ಜೆಡಿಎಸ್ ಮುಖಂಡರ ಪರವಾಗಿ ಮನವಿ ಮಾಡಿದ್ದೇವೆ ಅವರು ಬರುತ್ತಾ ರೆಂಬ ನಿರೀಕ್ಷೆಯಿದೆ. ಜ.9 ರ ನಂತರ ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಮಿಂಚಿನ ರಾಜಕೀಯ ಮಿಂಚಿನ ಸಂಚಾರ ನಡೆಯಲಿದ್ದು ದತ್ತ ಬಂದರೆ ಸ್ವಾಗತ,ಬಾರದಿದ್ದರೆ ಕಾರ್ಯಕರ್ತರು
ಹೇಳುವ ವ್ಯಕ್ತಿಯನ್ನೇ ಆಭ್ಯರ್ಥಿಯನ್ನಾಗಿ ಮಾಡಿ ಕ್ಯಾಂಪೇನ್ ಮಾಡಿ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಜೆಡಿಎಸ್ ಕಡೂರು ಕ್ಷೇತ್ರದಲ್ಲಿ ಸದೃಢÜವಾಗಿದೆ ಯಾರೂ ಜೆಡಿಎಸ್ ಪಕ್ಷವನ್ನು ಕಡೆಗಣಿಸಲು ಸಾಧ್ಯವಿಲ್ಲ.ತಾವೇ ಕ್ಷೇತ್ರದಲ್ಲಿ ಸಂಚರಿಸಿ ಹೋಬಳಿ ಮಟ್ಟದಿಂದಲೇ ಕಾರ್ಯಕರ್ತರ ಮನಗೆದ್ದು ಹೋರಾಟ ಮಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್,ಬಿಜೆಪಿ ಮತ್ತಿತರ ಪಕ್ಷದಿಂದ ಬರುವವರಿಗೆ ಜೆಡಿಎಸ್ ಬಾಗಿಲು ಸದಾ ತೆರೆದಿದೆ.ಅದರೆ ಕಾರ್ಯಕರ್ತರಾಗಿಯೇ ಬರಬೇಕು ಟಿಕೆಟ್ ಆಕಾಂಕ್ಷಿಗಳಾಗಿ ಬೇಡ ಎಂದರು.
ಸಭೆಯಲ್ಲಿ ಚೇತನ್ ಕೆಂಪರಾಜು ಅವರ ಬಗ್ಗೆ ಕೆಲ ಕಾರ್ಯಕರ್ತರು ಪ್ರಸ್ತಾಪಿಸಿದಾಗ ಅವರು ಮೊದಲು ಪಕ್ಷ ಸೇರ್ಪಡೆಯಾಗಲಿ ನಂತರ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸೋಣ.ಜಿಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್ ಒಡೆಯರಿಗೂ ಇದು ಅನ್ವಯಿಸುತ್ತದೆ ಎಂದರು.
ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಮಹೇಶ್ವರಪ್ಪ ಅವರಿಗೆ ಕೂಡಲೆ ಕಡೂರು -ಬೀರೂರು ಪಟ್ಟಣದಲ್ಲಿ ಜೆಡಿಎಸ್ ಕಚೇರಿ ತೆರೆಯಲು ಸೂಚಿಸಿದರು. ಜ.9 ರ ನಂತರ ಕ್ಷೇತ್ರದ ಪ್ರತಿ ಹೋಬಳಿಗಳಿಗೆ ತೆರಳಿ ಅಲ್ಲಿನ ಕಾರ್ಯಕರ್ತರನ್ನು ಭೇಟಿ ಮಾಡುವುದಾಗಿ ತಿಳಿಸಿದರು. ಈ ಭಾರಿ ಸಂಸದರ ನಿಧಿಯಿಂದ ಕ್ಷೇತ್ರಕ್ಕೆ 1.20 ಕೋಟಿರೂ ಹಣ ನೀಡಿದ್ದು 30 ಲಕ್ಷ ರು.ಗಳನ್ನು ಉಪ್ಪಾರ ಸಮುದಾಯ ಭವನಕ್ಕೆ ನೀಡಲಾಗಿದೆ. ಉಳಿದ ಹಣವನ್ನು ಇತರೆ ಸಮುದಾಯಗಳ ಭವನಗಳಿಗೆ ನೀಡಲಿದ್ದು ಅವುಗಳ ಪಟ್ಟಿತಯಾರಿಸಲು ಮಹೇಶ್ವರಪ್ಪ ಅವರಿಗೆ ಸೂಚಿಸಿದರು.
Ground Report: ಬೆಳಗಾವಿಯಲ್ಲಿ ಹೇಗಿದೆ ಟಿಕೆಟ್ ಫೈಟ್?
ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮಹೇಶ್ವರಪ್ಪ, ಬಿ.ಟಿ.ಗಂಗಾಧರನಾಯ್ಕ, ಬೀರೂರು ಬಿ.ಪಿ.ನಾಗರಾಜು,ಆನಂದದನಾಯ್ಕ, ಪಾಪಣ್ಣ, ಹೇಮಂತ್,ಕೆ.ಬಿದರೆ ಜಗದೀಶ್, ಸೋನಾಲ್ ಗೌಡ, ಪ್ರೇಮಕುಮಾರ್,ಮರುಗುದ್ದಿ ಮನು ಮತ್ತು ಕಾರ್ಯಕರ್ತರು ಇದ್ದರು.