ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ವತಿಯಿಂದ ಮೈಸೂರಿನಲ್ಲಿ ಆ.12ರಂದು ನಡೆಯಲಿರುವ ವಕೀಲರ ರಾಜ್ಯಮಟ್ಟದ ಹತ್ತನೇ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅತಿಥಿಯಾಗಿ ಭಾಗವಹಿಸಿ ಸುಪ್ರಿಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಕಾರ್ಯಕ್ರಮದಿಂದ ಡಿ.ಕೆ.ಶಿವಕುಮಾರ್‌ ಹಿಂದೆ ಸರಿದಿದ್ದಾರೆ.

ಬೆಂಗಳೂರು (ಆ.09): ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ವತಿಯಿಂದ ಮೈಸೂರಿನಲ್ಲಿ ಆ.12ರಂದು ನಡೆಯಲಿರುವ ವಕೀಲರ ರಾಜ್ಯಮಟ್ಟದ ಹತ್ತನೇ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅತಿಥಿಯಾಗಿ ಭಾಗವಹಿಸಿ ಸುಪ್ರಿಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಕಾರ್ಯಕ್ರಮದಿಂದ ಡಿ.ಕೆ.ಶಿವಕುಮಾರ್‌ ಹಿಂದೆ ಸರಿದಿದ್ದಾರೆ.

ವಕೀಲರ ಪರಿಷತ್‌ ನೂತನ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಡಿ.ಕೆ. ಶಿವಕುಮಾರ್‌ ಅವರ ಹೆಸರು ಕೈಬಿಡಲಾಗಿದೆ. ಉಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಸೇರಿದಂತೆ ಇತರೆ ಗಣ್ಯರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.

3177 ಕೋಟಿ ವೆಚ್ಚದಲ್ಲಿ 318 ಮೆಟ್ರೋ ಬೋಗಿ ನಿರ್ಮಾಣದ ಗುತ್ತಿಗೆ ಬೆಮೆಲ್‌ಗೆ

ಸುರೇಶ್‌ ಕುಮಾರ್‌ ವಿರೋಧಿಸಿದ್ದರು: ಈ ಹಿಂದೆ ಡಿ.ಕೆ.ಶಿವಕುಮಾರ್‌ ಅವರ ಹೆಸರನ್ನು ಮುಖ್ಯ ಅತಿಥಿ ಎಂದು ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರಿತ್ತು. ಆದರೆ, ಸೋಮವಾರ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ಗೆ ಪತ್ರ ಬರೆದಿದ್ದ ಶಾಸಕ ಸುರೇಶ್‌ ಕುಮಾರ್‌, ‘ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್‌ ಅವರು ವಕೀಲರ ಪರಿಷತ್‌ ಸಮಾವೇಶದಲ್ಲಿ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದು ನ್ಯಾಯಸಮ್ಮತವೇ?’ ಎಂದು ಪ್ರಶ್ನಿಸಿದ್ದರು.

ಎನ್‌ಆರ್‌ಐ ಫೋರಂಗೆ ಬಲ ತುಂಬಲು ಅನಿವಾಸಿ ಕನ್ನಡಿಗರ ಆಗ್ರಹ

ಅದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಡಿ.ಕೆ.ಶಿವಕುಮಾರ್‌, ‘ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧವೂ ನ್ಯಾಯಾಲಯದಲ್ಲಿ ಪ್ರಕರಣಗಳು ಇಲ್ಲವೇ? ಹಾಗಿದ್ದರೂ ಅವರು ನ್ಯಾಯಾಂಗ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲವೇ? ಸುರೇಶ್‌ ಕುಮಾರ್‌ ಅವರು ಯಡಿಯೂರಪ್ಪನವರ ಬಗ್ಗೆಯೂ ಮಾತನಾಡಬೇಕು ಎಂದರು. ಅವರ ಮೇಲೆ ಎಷ್ಟು ಪ್ರಕರಣಗಳಿವೆ. ಅವರು ಹಿಂದೆ ನ್ಯಾಯಾಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೋ, ಇಲ್ಲವೋ? ಅದರ ಬಗ್ಗೆ ಮಾತನಾಡಲಿ. ನಾನು ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತೇನೆ. ವ್ಯಕ್ತಿಯಾಗಿ ಅಲ್ಲ. ಡಿಸಿಎಂ ಆಗಿ ಸಭೆಗೆ ಹೋಗುವೆ’ ಎಂದು ಹೇಳಿದ್ದರು.