ಬಿಜೆಪಿ ಪರಿಸ್ಥಿತಿ ಏನಾಗಿದೆ ಅಂತ ನಿಮಗೆ ಗೊತ್ತು. ವಿರೋಧ ಪಕ್ಷದ ನಾಯಕ ಯಾರು ಅಂತ ಗೊತ್ತಿಲ್ಲ. ಈಗ ಜೆಡಿಎಸ್ ಜೊತೆ ‌ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಬಿಳಿಸಿದವರ ಜೊತೆ ಕುಮಾರಸ್ವಾಮಿ ಅಲೈಯನ್ಸ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜೆಡಿಎಸ್ ಶಾಸಕರು ಅಸಮಧಾನಗೊಂಡಿದ್ದಾರೆ: ಡಿ.ಕೆ. ಶಿವಕುಮಾರ್‌ 

ಬೆಂಗಳೂರು(ಸೆ.15): ಮುಂದೆ ಪದ್ಮನಾಭ ನಗರದಲ್ಲಿ‌ ಕಾಂಗ್ರೆಸ್ ಶಾಸಕ ಆಯ್ಕೆಯಾಗಬೇಕು. ಅಭ್ಯರ್ಥಿ ಯಾರು ಆಗ್ತಾರೋ‌ ಗೊತ್ತಿಲ್ಲ. ಆದ್ರೆ ಕಾಂಗ್ರೆಸ್ ಶಾಸಕ‌ ಮಾತ್ರ ಆಯ್ಕೆಯಾಗಬೇಕು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲ ಅಂದ್ರೆ ವಯಸ್ಸು ಮತ್ತೆ ಬರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.‌ಕೆ. ಶಿವಕುಮಾರ್ ಹೇಳಿದ್ದಾರೆ. 

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.‌ಕೆ. ಶಿವಕುಮಾರ್ ಅವರು, ಪದ್ಮನಾಭನಗರದಿಂದ ಎಂಟು ಕಾರ್ಪೋರೆಟರ್‌ಗಳು ಗೆಲ್ಲಬೇಕು. ಈ ಹಿಂದೆ ಯಶವಂತಪುರ ಕ್ಷೇತ್ರದಿಂದ ಮಾಜಿ‌ ಕಾರ್ಪೋರೆಟರ್‌ಗಳ ಸೇರ್ಪಡೆ ಮಾಡಿಕೊಂಡ್ವಿ, ಬಿಜೆಪಿ ಪರಿಸ್ಥಿತಿ ಏನಾಗಿದೆ ಅಂತ ನಿಮಗೆ ಗೊತ್ತು. ವಿರೋಧ ಪಕ್ಷದ ನಾಯಕ ಯಾರು ಅಂತ ಗೊತ್ತಿಲ್ಲ. ಈಗ ಜೆಡಿಎಸ್ ಜೊತೆ ‌ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಬಿಳಿಸಿದವರ ಜೊತೆ ಕುಮಾರಸ್ವಾಮಿ ಅಲೈಯನ್ಸ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಜೆಡಿಎಸ್ ಶಾಸಕರು ಅಸಮಧಾನಗೊಂಡಿದ್ದಾರೆ. ಅವರ ಅನುಕೂಲಕ್ಕೆ ಜೆಡಿಎಸ್ ರಾಜಕೀಯ ಮಾಡುತ್ತಿದ್ದಾರೆ. ಅವರ ಅನುಕೂಲ ಅವರು‌ ನೋಡ್ತಾ ಇದ್ರೆ ಅಲ್ಲಿ ಇದ್ದು ನೀವೇನೂ ಮಾಡ್ತೀರಾ?. ನಿಮ್ಮ ‌ನಿರ್ಧಾರ ನೀವು ಮಾಡಿಕೊಳ್ಳಿ ಅಂತ ಹೇಳುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿನ ಅಸಮಾಧಾನಿತ ನಾಯಕರಿಗೆ ಬಹಿರಂಗ ಅಹ್ವಾನ ಕೊಟ್ಟಿದ್ದಾರೆ. 

ಗೌಡ, ಎಚ್‌ಡಿಕೆ ಸಿದ್ಧಾಂತ ಎಲ್ಲಿ ಹೋಯ್ತು?: ಡಿ.ಕೆ.ಶಿವಕುಮಾರ್‌

ಹೊಸ ಬಾಂಬ್ ಸಿಡಿಸಿದ ಡಿಕೆಶಿ

ಮತ್ತೆ ಮುಂದಿನ ತಿಂಗಳು 20, 21 ಮತ್ತೊಂದು ಸೀರಿಸ್ ಇದೆ. ನಾನು ಮಾತನಾಡುವುದಿಲ್ಲ ಮಾಡಿ ತೋರಿಸುತ್ತೀನಿ ಎಂದು ಹೇಳುವ ಮೂಲಕ ಡಿ.ಕೆ. ಶಿವಕುಮಾರ್‌ ಮತ್ತೊಂದು ಆಪರೇಷನ್ ಹಸ್ತದ ಸುಳಿವು ಕೊಟ್ಟಿದ್ದಾರೆ.