ಇಡೀ ದೇಶದಲ್ಲೀಗ ಬದಲಾವಣೆ ಗಾಳಿ ಬೀಸುತ್ತಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಗತಕಾಲದ ವೈಭವ ಮತ್ತೆ ಮರುಕಳಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಮೈಸೂರು (ಆ.31): ಇಡೀ ದೇಶದಲ್ಲೀಗ ಬದಲಾವಣೆ ಗಾಳಿ ಬೀಸುತ್ತಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಗತಕಾಲದ ವೈಭವ ಮತ್ತೆ ಮರುಕಳಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮದಲ್ಲಿ ನಗರದಲ್ಲಿ ಮಾತನಾಡಿದ ಅವರು, ರಾಜ್ಯದ ಸುಮಾರು 1.10 ಕೋಟಿ ತಾಯಂದಿರು ಇಂದು ಈ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿದ್ದಾರೆ. 

ರಾಹುಲ್‌ ಗಾಂಧಿ ಅವರು ಇದೇ ನೆಲದಲ್ಲಿ ಆರಂಭಿಸಿದ ‘ಭಾರತ ಜೋಡೋ ಯಾತ್ರೆ’ಯ ವೇಳೆ ಅವರಿಗೆ ಶಕ್ತಿ ತುಂಬಿದ್ದೀರಿ. ಯಾತ್ರೆ ವೇಳೆ ಅವರು ಕಂಡ ಜನರ ಹಸಿವು, ಬೆಲೆ ಏರಿಕೆ ಬಿಸಿ, ರೈತರ ಸಮಸ್ಯೆ, ನಿರುದ್ಯೋಗದಂತ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಂತೆ ಅಂದು ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದರು. ಬಳಿಕ ಚುನಾವಣೆ ವೇಳೆ ನಾವು ರಾಜ್ಯದ ಜನರ ಮುಂದೆ 5 ಗ್ಯಾರಂಟಿ ಯೋಜನೆಯನ್ನು ಇಟ್ಟೆವು ಎಂದರು. 

ಸಚಿವ ಈಶ್ವರ ಖಂಡ್ರೆ ಜನಸ್ಪಂದನ ನೆಪ ಮಾತ್ರ: ಕೇಂದ್ರ ಸಚಿವ ಭಗವಂತ ಖೂಬಾ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ನಾವು ದೇಶಕ್ಕೆ ‘ಕರ್ನಾಟಕ ಮಾದರಿ’ಯನ್ನು ಪರಿಚಯಿಸಿದ್ದೇವೆ. ರಾಹುಲ್‌ ಗಾಂಧಿ ಅವರು ‘ನ್ಯಾಯ್‌ ಯೋಜನೆ’ ಘೋಷಿಸಿ 6 ಸಾವಿರ ಪ್ರೋತ್ಸಾಹ ಧನ ಘೋಷಣೆ ಮಾಡಿದ್ದರು. ಅದರನುಗುಣವಾಗೇ ಐದು ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ಸರಾಸರಿ 5 ಸಾವಿರದಷ್ಟುಆರ್ಥಿಕ ನೆರವು ನೀಡಲಾಗುತ್ತಿದೆ. ನಾವು ನುಡಿದಂತೆ ನಡೆದಿದ್ದೇವೆ ಎಂದರು.

ಗೌಡರ ಕುಟುಂಬಕ್ಕೆ ಡಿಕೆಶಿ ಎಚ್ಚರಿಕೆ: ‘ನಮ್ಮ ಕುಟುಂಬದವರ ಹೆಸರಿನಲ್ಲಿ ನೈಸ್‌ನ ಒಂದು ಗುಂಟೆ ಜಾಗವೂ ಇಲ್ಲ ಎನ್ನುತ್ತಾರೆ. ಅವರ ಕುಟುಂಬದ ಹೆಸರಿನಲ್ಲಿದೆ ಎಂದು ನಾವು ಹೇಳಿಲ್ಲ. ಅವರು ಯಾಕೆ ಮೈ ಮುಟ್ಟಿಕೊಂಡು ನೋಡಿಕೊಳ್ಳುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ರಾಜಕಾರಣಿಗಳು ಹಾಗೂ ಅವರ ಕುಟುಂಬಗಳ ಹೆಸರಿನಲ್ಲಿ ಎಷ್ಟುಮೌಲ್ಯದ ಆಸ್ತಿಗಳಿವೆ? ಭೂಸುಧಾರಣೆ ಕಾಯ್ದೆ 79-‘ಎ’ ಮತ್ತು ‘ಬಿ’ ಅಡಿ ರಾಜಕಾರಣಿಗಳು ಹಾಗೂ ಅವರ ಕುಟುಂಬದವರ ಎಷ್ಟುಭೂಮಿಯನ್ನು ಸರ್ಕಾರ ಹಿಂಪಡೆದಿಲ್ಲ ಎಂಬ ಪಟ್ಟಿತೆಗೆಯಬೇಕಾ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ರೌಡಿ ಶೀಟರ್‌ಗಳು ಬಾಲ ಬಿಚ್ಚದಂತೆ ಹತೊಟಿಗೆ ತನ್ನಿ: ಸಚಿವ ಪ್ರಿಯಾಂಕ್‌ ಖರ್ಗೆ

ನೈಸ್‌ ಅಕ್ರಮದ ಬಗ್ಗೆ ಮಾಜಿ ಪ್ರಧಾನಮಂತ್ರಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ‘ದೇವೇಗೌಡರ ಕುಟುಂಬದವರು ನೈಸ್‌ ಜಾಗ ಒಂದು ಗುಂಟೆಯೂ ನಮ್ಮ ಬಳಿ ಇಲ್ಲ ಎಂದು ಹೇಳುವಂತದ್ದು ಏನಿದೆ? ಅವರನ್ನು ನಾವು ಕೇಳಿದ್ದೇವೆಯೇ? ಯಾಕೆ ಮೈ ಮುಟ್ಟಿಕೊಂಡು ನೋಡಿಕೊಳ್ಳುತ್ತಿದ್ದಾರೆ. ಯಾರಾರ‍ಯರ ಹೆಸರಿನಲ್ಲಿ ಏನೇನಿದೆ ಎಂಬುದರ ಪಟ್ಟಿನಮ್ಮ ಬಳಿ ಇದೆ. ಬೆಂಗಳೂರು ಸುತ್ತಮುತ್ತ ಯಾವ್ಯಾವ ರಾಜಕಾರಣಿ ಹಾಗೂ ಕುಟುಂಬದವರ ಬಳಿ ಎಷ್ಟೆಷ್ಟುಆಸ್ತಿಯಿದೆ ಎಂಬ ಪಟ್ಟಿತೆಗೆಯಬೇಕಾ? 79-ಎ ಹಾಗೂ ಬಿ ಅಡಿ ಏನೇನಾಗಿದೆ ಎಂಬುದನ್ನು ತೆಗೆಯಬೇಕಾ?’ ಎಂದು ಪ್ರಶ್ನಿಸಿದ್ದಾರೆ.