Asianet Suvarna News Asianet Suvarna News

ರಾಮನಗರದಿಂದ ಬೆಳೆದವರು ಈಗ ಜಿಲ್ಲೆಯಲ್ಲೇ ಇಲ್ಲ: ಕುಮಾರಸ್ವಾಮಿ ವಿರುದ್ಧ ಡಿಕೆಶಿ ಗರಂ..!

ನಾವು ಮಾತ್ರ ನಮ್ಮ ಕೆಂಪೇಗೌಡರು ಕಟ್ಟಿದ ಬೆಂಗಳೂರಿನಿಂದ ದೂರ ಏಕೆ ಉಳಿಯಬೇಕು?. ನಮ್ಮೂರಿನ ಅನೇಕರು ಊರು ಬಿಟ್ಟು ಬೆಂಗಳೂರು ಸೇರಿದ್ದಾರೆ. ಅಂತಹವರು ತಮ್ಮೂರಿನಲ್ಲೇ ಬದುಕುಬೇಕು ಎಂಬುದು ನಮ್ಮ ಉದ್ದೇಶ. ಕುಮಾರಸ್ವಾಮಿ ಮಾತ್ರ ತಮ್ಮ ಹೆಸರಿನ ಹಿಂದೆ ತಮ್ಮ ಊರಿನ ಹೆಸರು ಸೇರಿಸಿಕೊಂಡಿದ್ದಾರೆ. ನಾವುಗಳು ಸೇರಿಸಿಕೊಳ್ಳುವುದರಲ್ಲಿ ತಪ್ಪೇನು?: ಡಿಸಿಎಂ ಡಿ.ಕೆ.ಶಿವಕುಮಾರ್‌ 
 

dcm dk shivakumar slams union minister hd kumaraswamy grg
Author
First Published Jul 27, 2024, 10:09 PM IST | Last Updated Jul 29, 2024, 2:00 PM IST

ರಾಮನಗರ(ಜು.27):  ನಾವು ಬೆಂಗಳೂರಿನವರು‌‌, ಕನಕಪುರ ಲೋಕಸಭಾ ಕ್ಷೇತ್ರದಲ್ಲಿನ ನಾವುಗಳು ಈಗ ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿದ್ದೆವೆ. ನಮ್ಮೂರಿನ ಹೆಸರುಗಳನ್ನು ಬದಲಿಸಿದವರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ನಮ್ಮತನವನ್ನು ಬದಲಿಸಿದವರು ನಾವಲ್ಲ ಎಂದು ಟೀಕಿಸಿದರು. ದೇವೇಗೌಡರ ಪೂರ್ಣ ಹೆಸರು ಎಚ್.ಡಿ.ದೇವೇಗೌಡ ಎಂಬುದನ್ನು ಮರೆಯಬಾರದು. ತಮ್ಮ ಹೆಸರಿನ ಹಿಂದೆ ತಮ್ಮಗಳ ಊರಿನ ಹೆಸರನ್ನು ಸೇರಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. 

ಇಂದು(ಶನಿವಾರ) ಕನಕಪುರದ ತಾಲೂಕು ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ನಾವು ಮಾತ್ರ ನಮ್ಮ ಕೆಂಪೇಗೌಡರು ಕಟ್ಟಿದ ಬೆಂಗಳೂರಿನಿಂದ ದೂರ ಏಕೆ ಉಳಿಯಬೇಕು?. ನಮ್ಮೂರಿನ ಅನೇಕರು ಊರು ಬಿಟ್ಟು ಬೆಂಗಳೂರು ಸೇರಿದ್ದಾರೆ. ಅಂತಹವರು ತಮ್ಮೂರಿನಲ್ಲೇ ಬದುಕುಬೇಕು ಎಂಬುದು ನಮ್ಮ ಉದ್ದೇಶ. ಕುಮಾರಸ್ವಾಮಿ ಮಾತ್ರ ತಮ್ಮ ಹೆಸರಿನ ಹಿಂದೆ ತಮ್ಮ ಊರಿನ ಹೆಸರು ಸೇರಿಸಿಕೊಂಡಿದ್ದಾರೆ. ನಾವುಗಳು ಸೇರಿಸಿಕೊಳ್ಳುವುದರಲ್ಲಿ ತಪ್ಪೇನು? ಎಂದು ಹೇಳಿದ್ದಾರೆ. 

ಬೆಂಗಳೂರು ಸೌಥ್ ಅಂತ ಮಾಡಿದ್ದಾರೆ, ಅದ್ರಲ್ಲಿ‌ ತಪ್ಪೇನು?: ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್

ರಾಮನಗರ ಈ ಹಿಂದೆ ಕ್ಲೋಸ್ ಪೇಟೆಯಾಗಿತ್ತು. ಈಗ ರಾಮನಗರ ಜಿಲ್ಲಾ ಕೇಂದ್ರ ಸ್ಥಳವಾಗಿದೆ. ಆದರೆ, ಜಿಲ್ಲೆಯ ಹೆಸರನ್ನಷ್ಟೆ ಬದಲಿಸಿದ್ದೆವೆ. ಇದು ಅಂತಾರಾಷ್ಟ್ರೀಯ ಮಾನ್ಯತೆಗೆ ದಾರಿಯಾಗಲಿದೆ. ಹೀಗಾಗಿ ಟೀಕಿಸುವವರು ಇನ್ನಾದರೂ ಅರ್ಥ ಮಾಡಿಕೊಳ್ಳಲಿ. ನಮ್ಮ ಜಿಲ್ಲೆಯಿಂದ ಬೆಳೆದವರು ಈಗ ಜಿಲ್ಲೆಯಲ್ಲಿಲ್ಲ. ರಾಮನಗರ ಹೆಸರನ್ನು ತೆಗೆದವರು ಸರ್ವನಾಶ ಎಂದು ದೆಹಲಿಯಲ್ಲಿ ಹೇಳಿದ್ದಾರೆ. ನಮ್ಮ ಸಿಎಂ ಸೇರಿ ಮೂವತ್ತಕ್ಕೂ ಹೆಚ್ಚು ಶಾಸಕರು ಹೆಸರು ಬದಲಾವಣೆಗೆ ಒಪ್ಪಿಗೆ ನೀಡಿದ್ದಾರೆ. ಹಾಗಾದರೆ ಇಡೀ ಸರ್ಕಾರವೇ ಸರ್ವನಾಶ ವಾಗಬೇಕೆ.? ಎಂದು ಕುಮಾರಸ್ವಾಮಿ ವಿರುದ್ಧ ಡಿಕೆಶಿ ಕೆಂಡ ಕಾರಿದ್ದಾರೆ. 

ಮಾಧ್ಯಮಗಳಿಗೆ ಜಿಲ್ಲಾ ಹಾಗೂ ತಾಲೂಕು ಕಚೇರಿಯೇ ಇಲ್ಲ‌. ಕುಮಾರಸ್ವಾಮಿ ಅವರ ಇಡೀ ಕುಟುಂಬವೇ ಜಿಲ್ಲೆಯಲ್ಲಿ ಆಡಳಿತ ಮಾಡಿದ್ದಾರೆ. ಹೀಗಿದ್ದರೂ ಮಾಧ್ಯಮಗಳಿಗೆ ಒಂದು ಕಚೇರಿ ನೀಡಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದ್ದಾರೆ. 

Latest Videos
Follow Us:
Download App:
  • android
  • ios