ಸರ್ಕಾರ ಬೀಳಿಸಲು ಬಿಜೆಪಿ ದೊಡ್ಡವರ ಷಡ್ಯಂತ್ರ: ಡಿ.ಕೆ.ಶಿವಕುಮಾರ್
‘ನಮ್ಮ ಸರ್ಕಾರ ಬೀಳಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದ್ದು, ಈ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ಇದರ ಹಿಂದೆ ದೊಡ್ಡ, ದೊಡ್ಡ ನಾಯಕರು ಕೂಡ ಇದ್ದಾರೆ. ಆದರೆ ಈ ಪ್ರಯತ್ನದಿಂದ ಏನೂ ಆಗುವುದಿಲ್ಲ, ಅವರ ಷಡ್ಯಂತ್ರ ಫಲಿಸಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು (ಅ.29): ‘ನಮ್ಮ ಸರ್ಕಾರ ಬೀಳಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದ್ದು, ಈ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ಇದರ ಹಿಂದೆ ದೊಡ್ಡ, ದೊಡ್ಡ ನಾಯಕರು ಕೂಡ ಇದ್ದಾರೆ. ಆದರೆ ಈ ಪ್ರಯತ್ನದಿಂದ ಏನೂ ಆಗುವುದಿಲ್ಲ, ಅವರ ಷಡ್ಯಂತ್ರ ಫಲಿಸಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಶನಿವಾರ ಬೆಳಗ್ಗೆ ಹೈದರಾಬಾದ್‌ಗೆ ತೆರಳುವ ಮೊದಲು ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಶಾಸಕ ರವಿ ಗಣಿಗ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.
ಬಿಜೆಪಿಯವರು ಆಮಿಷ ಒಡ್ಡಿರುವ ಬಗ್ಗೆ ರವಿ ಗಣಿಗ ಸೇರಿದಂತೆ ಹಲವರು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಷಡ್ಯಂತ್ರದ ಬಗ್ಗೆ ನಮಗೆ ಗೊತ್ತಿದೆ. ಇದರ ಹಿಂದೆ ದೊಡ್ಡ, ದೊಡ್ಡ ನಾಯಕರು ಇದ್ದಾರೆ. ಆದರೆ, ಇದರಿಂದ ಏನೂ ಆಗುವುದಿಲ್ಲ. ಅವರ ಷಡ್ಯಂತ್ರ ಸಫಲವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಬಿಟ್ಟು ಅಭಿವೃದ್ಧಿ ಚಿಂತೆ ಮಾಡೋಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಮೀರ್ ಸಾಧಿಕ್ ಯಾರು?: ‘ನಿಮ್ಮನ್ನು ಅಧಿಕಾರದಿಂದ ಇಳಿಸಿದವರ ಜೊತೆ ಸೇರಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಮೀರ್‌ಸಾಧಿಕ್ ಎನ್ನುತ್ತಿದ್ದೀರಲ್ಲ. ಮಾಧ್ಯಮಗಳ ಎದುರು ಮಾಡುವ ಟೀಕೆಗಳು ಸಾಯುತ್ತವೆ. ಬನ್ನಿ ಕುಮಾರಣ್ಣ ನಿಜವಾದ ಮೀರ್ ಸಾಧಿಕ್ ಯಾರು ಎಂಬುದನ್ನು ಸದನದಲ್ಲೇ ಚರ್ಚೆ ಮಾಡೋಣ. ಎಲ್ಲವೂ ದಾಖಲೆಗಳಲ್ಲಿ ಉಳಿಯಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಂಥಾಹ್ವಾನ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ನಾಡಿನ ಮುಖ್ಯಮಂತ್ರಿಗಳಿಗೆ ಮೀರ್ ಸಾಧಿಕ್ ಎಂದಿದ್ದಾರೆ.
ಅವರು ಹಾರ್ವರ್ಡ್ ವಿ.ವಿಯಲ್ಲಿ ಡಾಕ್ಟರೇಟ್ ತೆಗೆದುಕೊಂಡಿರಬೇಕು. ಸರ್ಕಾರ ಬಿದ್ದಾಗ ಅದಕ್ಕೆ ಕಾರಣ ಯಾರು ಎಂಬ ಬಗ್ಗೆ ಅವರೇ ಅಧಿವೇಶನದಲ್ಲಿ ನುಡಿಮುತ್ತು ಉದುರಿಸಿದ್ದಾರೆ. ಎಲ್ಲದರ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆ ಮಾಡೋಣ ಎಂದು ಹೇಳಿದರು. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ತೆಗೆದವರು ಸಿದ್ದರಾಮಯ್ಯ ಎಂದು ಒಂದಷ್ಟು ದಿನ, ಡಿ.ಕೆ.ಶಿವಕುಮಾರ್ ಎಂದು ಮತ್ತೊಂದಷ್ಟು ದಿನ ಹೇಳುತ್ತಾರೆ. ಈ ಸರ್ಕಾರ ಬೀಳಲು ಯಡಿಯೂರಪ್ಪ ಅವರು ಮತ್ತು ಅವರ ಎಲ್ಲಾ ಸಹೋದ್ಯೋಗಿಗಳು ಹಣಕೊಟ್ಟು, ಪಿತೂರಿ ನಡೆಸಿದ್ದರು ಎಂದು ಕುಮಾರಸ್ವಾಮಿ ಅವರೇ ಸದನದಲ್ಲಿ ಹೇಳಿದ್ದರು. ಇವೆಲ್ಲಾ ಮರೆತು ಹೋಗಿದೆಯೇ ಎಂದು ತಿರುಗೇಟು ನೀಡಿದರು.
ಡಿಕೆಶಿ ಸಿಎಂ ಆಗುವುದರಲ್ಲಿ ಯಾವ ಅನುಮಾನವಿಲ್ಲ: ಶಾಸಕ ಉದಯ್
ಬಿಜೆಪಿ ಮತ್ತೆ ಆಪರೇಶನ್ ಮಾಡಲು ಹೊರಟಿದ್ದಾರೆ. ಅವರು ಒಮ್ಮೆ ಯಶಸ್ವಿಯಾಗಿರುವುದು ನಿಜ. ಆದರೆ, ಈ ಬಾರಿ ನಮ್ಮ ಒಬ್ಬ ಶಾಸಕನೂ ಬಿಜೆಪಿ ಆಮಿಷಕ್ಕೆ ಒಳಗಾಗುವುದಿಲ್ಲ. ಬಿಜೆಪಿ ಆಪರೇಶನ್ ಸಫಲ ಆಗಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ