ರಾಜಕೀಯ ಬಿಟ್ಟು ಅಭಿವೃದ್ಧಿ ಚಿಂತೆ ಮಾಡೋಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಒಂದು ರೀತಿಯಲ್ಲಿ ಮಿನಿಭಾರತ ಇದ್ದ ಹಾಗಿದೆ. ಇದು ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಕ್ಷೇತ್ರದಲ್ಲಿ ಕಳೆದ 5 ವರ್ಷದಲ್ಲಿ 105ಕ್ಕೂ ಹೆಚ್ಚು ಮಂದಿರಗಳನ್ನು ಜೀರ್ಣೋದ್ಧಾರ ಇಲ್ಲವೆ ನಿರ್ಮಾಣ ಮಾಡುವ ಮೂಲಕ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ (ಅ.28): ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಒಂದು ರೀತಿಯಲ್ಲಿ ಮಿನಿಭಾರತ ಇದ್ದ ಹಾಗಿದೆ. ಇದು ಸರ್ವ ಜನಾಂಗದ ಶಾಂತಿಯ ತೋಟದಂತಿದೆ. ಕ್ಷೇತ್ರದಲ್ಲಿ ಕಳೆದ 5 ವರ್ಷದಲ್ಲಿ 105ಕ್ಕೂ ಹೆಚ್ಚು ಮಂದಿರಗಳನ್ನು ಜೀರ್ಣೋದ್ಧಾರ ಇಲ್ಲವೆ ನಿರ್ಮಾಣ ಮಾಡುವ ಮೂಲಕ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದ ಶ್ರೀ ವಿಠ್ಠಲ ದೇವರ ಮಂದಿರದ ಅಡಿಗಲ್ಲು ಮತ್ತು ಭೂಮಿಪೂಜೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಊರಲ್ಲಿ ಒಂದು, ಎರಡು ದೇವಸ್ಥಾನಗಳು ಹಾಗೂ ಅದಕ್ಕೆ ಸಂಬಂಧಿಸಿದ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಕ್ಷೇತ್ರವನ್ನು ಧಾರ್ಮಿಕವಾಗಿ ಇನ್ನಷ್ಟು ಅಭಿವೃದ್ಧಿಪಡಿಸಲು, ಧಾರ್ಮಿಕ ಪ್ರವಾಸಿ ಕ್ಷೇತ್ರವನ್ನಾಗಿ ಬೆಳೆಸಲು ಏನು ಮಾಡಬಹುದು ಎನ್ನುವ ಕುರಿತು ಯೋಚಿಸುತ್ತಿದ್ದೇನೆ ಎಂದವರು ತಿಳಿಸಿದರು. ದೇವಸ್ಥಾನಗಳಿಂದ ಮಾನಸಿಕ ನೆಮ್ಮದಿ, ಗ್ರಾಮದಲ್ಲಿ ಶಾಂತಿ, ಸಮೃದ್ಧಿ ಕಾಣಬಹುದು. ನನಗೆ ದೇವರಲ್ಲಿ ಸದಾ ನಂಬಿಕೆ, ಶ್ರದ್ಧೆ, ದೇವರು ಇದ್ದಾನೋ, ಇಲ್ಲವೋ ಎನ್ನುವುದಕ್ಕಿಂತ ಆ ಶಕ್ತಿಯನ್ನು ಸ್ಮರಣೆ ಮಾಡಿದಾಗ ಸಿಗುವ ಮನಶಾಂತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.
ಎಚ್‌ಡಿಕೆ ಮುಂದೆ ಬಿಟ್ಟು ಬಿಜೆಪಿ ನಾಯಕರು ಹೇಡಿಗಳಂತೆ ವರ್ತಿಸುತ್ತಿದ್ದಾರೆ: ಎಂ.ಲಕ್ಷ್ಮಣ್
ನನಗೆ ಜನರ ಸೇವೆ ಮಾಡಲು ಉತ್ಸಾಹ, ಸ್ಫೂರ್ತಿಗೆ ದೇವರ ಮೇಲಿನ ಭಕ್ತಿ, ನಂಬಿಕೆಯೇ ಕಾರಣ. ಜಾತಿ, ಧರ್ಮ, ಭಾಷೆ ಯಾವುದೇ ಭೇದವಿಲ್ಲದೆ ಎಲ್ಲರೊಂದಿಗೆ ಒಂದಾಗಿ ಕೆಲಸ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತಿದೆ ಎಂದು ಹೇಳಿದರು. ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿಯೇ ಜಾತಿಯತೆ ಹೋಗಲಾಡಿಸಲು ಕರೆ ನೀಡಿದ್ದಾರೆ. ಅವರ ಜಾತ್ಯತೀತ ತತ್ವದಲ್ಲಿ ಮುನ್ನಡೆದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ನಾನು ಇಡೀ ಕ್ಷೇತ್ರದ ಜನರಲ್ಲಿ ಮನವಿ ಮಾಡುತ್ತೇನೆ. ಚುನಾವಣೆ ಮುಗಿದಿದೆ. ಯಾವುದೇ ರಾಜಕೀಯ ಬೇಡ. ಎಲ್ಲರೂ ಒಂದಾಗಿ ಅಭಿವೃದ್ಧಿ ಕುರಿತು ಯೋಚಿಸೋಣ.
ಡಿಕೆಶಿ ಸಿಎಂ ಆಗುವುದರಲ್ಲಿ ಯಾವ ಅನುಮಾನವಿಲ್ಲ: ಶಾಸಕ ಉದಯ್
ನಿಮ್ಮೆಲ್ಲರ ಆಶಿರ್ವಾದದಿಂದ ನಾನು ಈಗ ರಾಜ್ಯದ ಮಂತ್ರಿಯಾಗಿದ್ದೇನೆ. ಹಿಂದಿನದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಹಾಗಾಗಿ, ಸಾಧ್ಯವಾದಷ್ಟು ಹೆಚ್ಚು ಕೆಲಸಗಳನ್ನು ತರೋಣ. ನಿಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ವಿನಂತಿಸಿದರು. ನಾಂದೇಡದ ನೀಲಕಂಠಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ರಮೇಶ ಕುಡಚಿ, ಮಲ್ಲಪ್ಪ ಸಾಂಬ್ರೇಕರ, ಯಲ್ಲಪ್ಪ ಕುರುಬರ, ಸಿ.ಸಿ.ಪಾಟೀಲ ಅಣ್ಣ, ಯುವರಾಜ ಕದಂ, ಶ್ವೇತಾ ಡಿ.ಆರ್., ಮನೋಹರ್ ಬಾಂಡಗಿ, ಕೇಶವ ಚೌಗುಲೆ, ಮಹಾವೀರ ಪಾಟೀಲ, ಗಣಪತಿ ಮಾರಿಹಾಳ್ಕರ, ಸಚಿನ್ ಸಾಮಜಿ, ಗ್ರಾಮ ಪಂಚಾಯಿತಿ ಬಸ್ತವಾಡ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.