ನಾನು, ಸಿಎಂ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಹೋಗ್ತಿದ್ದೇವೆ. ನಮ್ಮ ದೇಶಕ್ಕೆ ಶಕ್ತಿ ಮೂಡಿಸಲು ರಾಹುಲ್ ಗಾಂಧಿ ಅವರು ದೊಡ್ಡ ಪ್ರಯತ್ನ ಮಾಡ್ತಿದ್ದಾರೆ. ಯಾರೂ ಹಿಂದೆ ಮಾಡದ ದೊಡ್ಡ ಪ್ರಯತ್ನವನ್ನ ಮಾಡ್ತಿದ್ದೇವೆ. ಭಾರತವನ್ನ ಉಳಿಸುವ ಪ್ರಯತ್ನ ಮಾಡ್ತಿದ್ದೇವೆ. ನ್ಯಾಯ ಕೊಡಿಸಲು ನಾವೆಲ್ಲಾ ಭಾಗಿಯಾಗ್ತಿದ್ದೇವೆ. ಅವರ ಯಾತ್ರೆಗೆ ಶುಭ ಕೋರಲಿದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್‌ 

ಬೆಂಗಳೂರು(ಜ.14): ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಣಿಪುರಕ್ಕೆ ಇಂದು(ಭಾನುವಾರ) ತೆರಳಿದ್ದಾರೆ. ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭವಾಗಲಿದೆ. 

ಮಣಿಪುರದ ಇಂಪಾಲ್‌ನಿಂದ ಭಾರತ್ ಜೋಡೋ ನ್ಯಾಯ ಯಾತ್ರೆ‌ ಆರಂಭವಾಗಲಿದೆ. ಭಾರತ್ ಜೋಡೋ ನ್ಯಾಯ ಯಾತ್ರೆಗೆ ಪಾಲ್ಗೊಳ್ಳಲು ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ಮಣಿಪುರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ತೆರಳಿದ್ದಾರೆ. ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. 

ರಾಹುಲ್‌ ಗಾಂಧಿ ಯಾತ್ರೆಯ ಆರಂಭದ ಸ್ಥಳ ಬದಲು: ಕಾಂಗ್ರೆಸ್‌ ಲೋಕಸಭೆ ರಣನೀತಿ ಟೀಂನಿಂದ ಸುನೀಲ್ ಕನುಗೋಲು ಔಟ್‌

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ನಾನು, ಸಿಎಂ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಹೋಗ್ತಿದ್ದೇವೆ. ನಮ್ಮ ದೇಶಕ್ಕೆ ಶಕ್ತಿ ಮೂಡಿಸಲು ರಾಹುಲ್ ಗಾಂಧಿ ಅವರು ದೊಡ್ಡ ಪ್ರಯತ್ನ ಮಾಡ್ತಿದ್ದಾರೆ. ಯಾರೂ ಹಿಂದೆ ಮಾಡದ ದೊಡ್ಡ ಪ್ರಯತ್ನವನ್ನ ಮಾಡ್ತಿದ್ದೇವೆ. ಭಾರತವನ್ನ ಉಳಿಸುವ ಪ್ರಯತ್ನ ಮಾಡ್ತಿದ್ದೇವೆ. ನ್ಯಾಯ ಕೊಡಿಸಲು ನಾವೆಲ್ಲಾ ಭಾಗಿಯಾಗ್ತಿದ್ದೇವೆ. ಅವರ ಯಾತ್ರೆಗೆ ಶುಭ ಕೋರಲಿದ್ದೇವೆ ಎಂದು ತಿಳಿಸಿದ್ದಾರೆ. 

ಸಿಎಂ ವಿರುದ್ಧ ಏಕವಚನದಲ್ಲಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್‌ ಅವರು, ಅವರಿಗೆ ಹೆಚ್ಚು ಕಡಿಮೆಯಾಗಿದೆ. ಅವರು ರೆಸ್ಟಲ್ಲಿದ್ರು, ಈಗ ಏನೇನೋ ಮಾತಾಡ್ತಿದ್ದಾರೆ. ಜನರೇ ಅವರಿಗೆ ಉತ್ತರ ಕೊಡ್ತಾರೆ ಅಂತ ತಿಳಿಸಿದ್ದಾರೆ.