ರಾಹುಲ್ ಗಾಂಧಿ ಯಾತ್ರೆಯ ಆರಂಭದ ಸ್ಥಳ ಬದಲು: ಕಾಂಗ್ರೆಸ್ ಲೋಕಸಭೆ ರಣನೀತಿ ಟೀಂನಿಂದ ಸುನೀಲ್ ಕನುಗೋಲು ಔಟ್
ಬಿಜೆಪಿ ರಾಜ್ಯಗಳನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡರೆ ಬಿಜೆಪಿ ಬುಡವೇ ಅಲ್ಲಾಡಿದಂತೆ. ಹೀಗಾಗಿ ರಾಷ್ಟ್ರೀಯ ಹೊಣೆ ಬದಲು ಸುನೀಲ್ ಕನುಗೋಲುಗೆ ರಾಜ್ಯ ಹೊಣೆ ವಹಿಸಲಾಗಿದೆ ಎನ್ನಲಾಗಿದೆ.
ಇಂಫಾಲ್ (ಜನವರಿ 13, 2024): ಮಣಿಪುರದ ಹಿಂಸಾಪೀಡಿತ ಇಂಫಾಲ್‌ನಲ್ಲಿ ಕೆಲವೇ ಕೆಲವು ಜನರ ಜೊತೆ ಭಾರತ್ ನ್ಯಾಯ ಯಾತ್ರೆ ಆರಂಭಿಸಬೇಕು ಎಂದು ಸರ್ಕಾರ ಸೂಚಿಸಿರುವ ಕಾರಣ, ಕೊನೆಕ್ ಷಣದಲ್ಲಿ ಯಾತ್ರೆಯ ಆರಂಭದ ಸ್ಥಳವನ್ನು ಬದಲಿಸಲಾಗಿದೆ. ಇಂಫಾಲ್ ಬದಲು ತೌಬಾಲ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಗೆ ಚಾಲನೆ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೇಶಾಮ್ ಮೇಘಚಂದ್ರ, ‘ಇಂಫಾಲ್‌ನ ಕಾಂಗ್‌ಜೇಬಂಗ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ನಾವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಜನರಿಗೆ 1 ಸಾವಿರ ಸಂಖ್ಯೆಯ ಮಿತಿ ವಿಧಿಸಿದ ಕಾರಣ ಸಮಾರಂಭದ ಸ್ಥಳವನ್ನು ಬದಲಾಯಿಸಿದ್ದೇವೆ’ ಎಂದು ಹೇಳಿದ್ದಾರೆ.
ಜನವರಿ 14ರಿಂದ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಗೊಳ್ಳಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಮುಂಬೈನಲ್ಲಿ ಯಾತ್ರೆ ಅಂತ್ಯವಾಗಲಿದೆ.
ಇದನ್ನು ಓದಿ: ಮೋದಿ ಹೆಸರು ತುಂಬಾ ಪವರ್‌ಫಲ್; ಪ್ರಚಾರದಲ್ಲಿ ಖರ್ಗೆ, ರಾಹುಲ್ ಸಹ ಸಾಟಿಯಲ್ಲ: ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ
ಕಾಂಗ್ರೆಸ್ ಲೋಕಸಭೆ ರಣನೀತಿ ಟೀಂನಿಂದ ಕನುಗೋಲು ಔಟ್
ನವದೆಹಲಿ: ಲೋಕಸಭೆ ಚುನಾವಣಾ ರಣನೀತಿ ರೂಪಿಸಲು ಕಾಂಗ್ರೆಸ್ ರಚಿಸಿದ್ದ ‘ಟಾಸ್ಕ್‌ಫೋರ್ಸ್ - 2024’ ತಂಡದಿಂದ ಖ್ಯಾತ ಚುನಾವಣಾ ರಣನೀತಿ ತಜ್ಞ ಸುನೀಲ್ ಕನುಗೋಲು ಹೊರಬಂದಿದ್ದಾರೆ. ಆದರೆ ಪಕ್ಷದ ಮಹಾರಾಷ್ಟ್ರ ಹಾಗೂ ಹರ್ಯಾಣ ರಣನೀತಿ ತಂಡದಲ್ಲಿ ಮುಂದುವರಿಯಲಿದ್ದಾರೆ.
ಬಿಜೆಪಿ ರಾಜ್ಯಗಳನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡರೆ ಬಿಜೆಪಿ ಬುಡವೇ ಅಲ್ಲಾಡಿದಂತೆ. ಹೀಗಾಗಿ ರಾಷ್ಟ್ರೀಯ ಹೊಣೆ ಬದಲು ರಾಜ್ಯ ಹೊಣೆ ವಹಿಸಲಾಗಿದೆ ಎನ್ನಲಾಗಿದೆ.
'ಮಣಿಪುರದಿಂದ ಮುಂಬೈ': ಜನವರಿ 14 ರಿಂದ ಭಾರತ ನ್ಯಾಯ ಯಾತ್ರೆ ಪ್ರಾರಂಭಿಸಲಿರೋ ರಾಹುಲ್ ಗಾಂಧಿ; 6200 ಕಿ.ಮೀ. ಪ್ರವಾಸ
ಸಹಿಸಬೇಡಿ, ಹೆದರಬೇಡಿ: ರಾಹುಲ್ ಯಾತ್ರೆ ಘೋಷ ವಾಕ್ಯ
‘ಸಾಹೋ ಮತ್, ಡರೋ ಮತ್’ (ಸಹಿಸಿಕೊಳ್ಳಬೇಡಿ ಮ್ತು ಭಯಪಡಬೇಡಿ) ಎಂಬ ಘೋಷವಾಕ್ಯದೊಂದಿಗೆ ಜನವರಿ 14ರಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ‘ಭಾರತ್ ಜೋಡೋ ನ್ಯಾಯ ಯಾತ್ರೆ’ ಯನ್ನು ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ.
ಅಲ್ಲದೇ ‘ನ್ಯಾಯ ಗೀತೆ’ ಎಂಬ ಶೀರ್ಷಿಕೆಯೊಂದಿಗೆ ಸಹಿಸಿಕೊಳ್ಳಬೇಡಿ ಮ್ತು ಭಯಪಡಬೇಡಿ ಎಂಬ ಅಡಿ ಬರಹದಲ್ಲಿ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜೋಡೋ ಯಾತ್ರೆ ಸೇರಿದಂತೆ ಅವರ ಅನೇಕ ಜನರೊಂದಿಗಿನ ಭೇಟಿಯ ವಿಡಿಯೋ ತುಣುಕುಗಳಿವೆ.
ಈ ಹಾಡನ್ನು ಹಂಚಿಕೊಂಡು ಟ್ವೀಟ್ ಮಾಡಿರುವ ರಾಹುಲ್ ‘ಬೀದಿಯಿಂದ ಹಿಡಿದು ಸಂಸತ್ತಿನವರೆಗೆ ನ್ಯಾಯದ ಹಕ್ಕು ಸಿಗುವ ತನಕ ನಾವು ಎಲ್ಲ ಮನೆಯಲ್ಲೂ ತಲುಪುತ್ತೇವೆ. ಸಹಿಸಿಕೊಳ್ಳಬೇಡಿ, ಭಯಪಡಬೇಡಿ’ ಎಂದಿದ್ದಾರೆ.