Asianet Suvarna News Asianet Suvarna News

ಸಂತೋಷ್‌ ಮೊದ್ಲು ತಮ್ಮವರನ್ನೇ ಪಕ್ಷದಲ್ಲಿ ಉಳಿಸಿಕೊಳ್ಳಲಿ: ಜಗದೀಶ್‌ ಶೆಟ್ಟರ್‌

ಕಾಂಗ್ರೆಸ್‌ ಶಾಸಕರು ಬಿ.ಎಲ್‌.ಸಂತೋಷ್‌ ಸಂಪರ್ಕದಲ್ಲಿದ್ದರೆ ನಾಳೆಯಿಂದಲೇ ‘ಆಪರೇಶನ್‌’ಆರಂಭಿಸಲಿ. ಕಾಂಗ್ರೆಸ್‌ನ ಯಾವ ಶಾಸಕರು ರಾಜೀನಾಮೆ ಕೊಟ್ಟು ಹೊರ ಹೋಗು ತ್ತಾರೆ ನಾವೂ ನೋಡೋಣ. ರಾಜ್ಯದಲ್ಲಿ ಗಟ್ಟಿಮುಟ್ಟಾದ ಸರ್ಕಾರವಿದೆ. 

Congress MLC Jagadish Shettar Slams On BL Santosh gvd
Author
First Published Sep 2, 2023, 2:40 AM IST

ಹುಬ್ಬಳ್ಳಿ (ಸೆ.02): ಕಾಂಗ್ರೆಸ್‌ ಶಾಸಕರು ಬಿ.ಎಲ್‌.ಸಂತೋಷ್‌ ಸಂಪರ್ಕದಲ್ಲಿದ್ದರೆ ನಾಳೆಯಿಂದಲೇ ‘ಆಪರೇಶನ್‌’ಆರಂಭಿಸಲಿ. ಕಾಂಗ್ರೆಸ್‌ನ ಯಾವ ಶಾಸಕರು ರಾಜೀನಾಮೆ ಕೊಟ್ಟು ಹೊರ ಹೋಗು ತ್ತಾರೆ ನಾವೂ ನೋಡೋಣ. ರಾಜ್ಯದಲ್ಲಿ ಗಟ್ಟಿಮುಟ್ಟಾದ ಸರ್ಕಾರವಿದೆ. ಬಿಜೆಪಿ ಸದ್ಯ ಅಸ್ತಿತ್ವ ಉಳಿಸಿಕೊಂಡರೆ ಸಾಕಾಗಿದೆ ಎಂಬ ಸ್ಥಿತಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ವ್ಯಂಗ್ಯವಾಡಿದರು. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸಿನ 40 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ‘ಮೊದಲು ಅವರ ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲಿ’ ಎಂದು ತಿರುಗೇಟು ನೀಡಿದರು. ಇಡೀ ರಾಷ್ಟ್ರದಲ್ಲಿ ಬರೀ ಆಪರೇಶನ್‌ ಮಾಡಿಯೇ ಸರ್ಕಾರ ರಚನೆ ಮಾಡುವ ಸ್ಥಿತಿಗೆ ಬಿಜೆಪಿ ತಲುಪಿದೆ. 

ನಮೋ ನಮಃ ನವ ಮಂತ್ರಾಲಯ ಸುಕ್ಷೇತ್ರ: ಶುರುವಾಗಿದೆ ಪರಿವರ್ತನೆ ಪರ್ವ

ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲವೂ ಬಹುಮತ ಬರಲಿಲ್ಲ. ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿಯಂತೂ ಜಗಜ್ಜಾಹೀರು. ಈಗ ಬಿಜೆಪಿ ಮುಳುಗುತ್ತಿರುವ ಹಡಗಿನಂತಾಗಿದೆ ಎಂದು ಕಿಡಿಕಾರಿದರು. ಕಾಂಗ್ರೆಸ್‌ಗೆ 135 ಸೀಟ್‌ಗಳು ಬಂದಿವೆ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬಿಜೆಪಿ ಕೆಲವೇ ಜನರ ಕೈಯಲ್ಲಿರುವುದು ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಬಿಜೆಪಿ ಲೀಡರ್‌ಲೆಸ್‌ ಪಕ್ಷ: ಪ್ರತಿಪಕ್ಷ ನಾಯಕನನ್ನು ನೇಮಿಸಲಾಗದಷ್ಟು ಶೋಚನೀಯ ಸ್ಥಿತಿಗೆ ಬಿಜೆಪಿ ಬಂದಿದ್ದು, ಅದು ಲೀಡರ್‌ಲೆಸ್‌ ಪಕ್ಷ ಎಂದು ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್‌ ಸದಸ್ಯ ಜಗದೀಶ್‌ ಶೆಟ್ಟರ್‌ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ವಿಪಕ್ಷ ನಾಯಕನನ್ನು ಹುಡುಕಲಾಗದೇ ಇರುವುದು ಪಕ್ಷದ ಕುಸಿತದ ಸಂಕೇತ. ಪಕ್ಷ ಕೆಲವೇ ಕೆಲವರ ಹಿಡಿತದಲ್ಲಿ ಸಿಲುಕಿರುವುದಕ್ಕೆ ಇದು ಉದಾಹರಣೆ. ಪಕ್ಷದೊಳಗಿನ ಉಸಿರುಗಟ್ಟುವ ವಾತಾವರಣದಿಂದ ಬಿಜೆಪಿಯಿಂದ ಮುಖಂಡರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಒಂದೇ ದಿನ ಈ ಪ್ರಕ್ರಿಯೆ ನಡೆಯದು. 

ಪಕ್ಷಕ್ಕೆ ಬರುವವರ ಜತೆಗೆ ಮಾತುಕತೆ, ಸಂಪರ್ಕ ನಡೆದಿದ್ದು, ಪಕ್ಷಕ್ಕೆ ಕರೆದುಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕಾಂಗ್ರೆಸ್‌ ಹಿರಿಯ ನಾಯಕರ ನಿರ್ಧಾರಗಳ ಬಳಿಕ ಕೆಲವರು ಸೇರಿಕೊಳ್ಳುತ್ತಾರೆ ಎಂದು ಶೆಟ್ಟರ್‌ ಹೇಳಿದರು. ಅಮಿತ್‌ ಶಾ ಕರೆ ಮಾಡಿದ್ದರು ಎಂಬ ವಿಚಾರವಾಗಿ ಸ್ಪಷ್ಟನೆ ನೀಡಿದ ಶೆಟ್ಟರ್‌, ಅವರು ನನಗೆ ಕರೆ ಮಾಡಿಲ್ಲ. ಆದರೂ ಆ ರೀತಿ ಸುದ್ದಿ ಏಕೆ ಹಬ್ಬಿತೋ ಗೊತ್ತಿಲ್ಲ. ಅದು ಸುಳ್ಳು ಎಂಬುದು ಸಾಬೀತಾಗಿದೆ ಎಂದರು. ಶಂಕರ ಪಾಟೀಲ್‌ ಮುನೇನಕೊಪ್ಪ ಕಾಂಗ್ರೆಸ್‌ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಅವರ ಜತೆ ನಾನು ವೈಯಕ್ತಿಕವಾಗಿ ಮಾತನಾಡಿಲ್ಲ. ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದರು.

ರಾಕಿ ಕಟ್ಟಿದ ಬಾಲಕಿ, ಬಾತ್‌ರೂಂಗೆ ಹೋಗಿ ಅತ್ತ ಬಾಲಕ: ಶಿಕ್ಷಕರು-ಪೋಷಕರ ನಡುವೆ ವಾಗ್ವಾದ

ರಾಜ್ಯ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಗ್ಯಾರಂಟಿಗಳು ಜಾರಿಗೆ ಬಂದಿವೆ. ಇದರಿಂದ ಜನ ಖುಷಿಯಲ್ಲಿದ್ದಾರೆ. ಅದರಲ್ಲೂ ಬಡವರು, ದೀನ ದಲಿತರು ಸುಖಮಯ ಜೀವನ ಮಾಡುತ್ತಿದ್ದಾರೆ. ಯಾವ ರಾಜ್ಯದಲ್ಲೂ ಇಂಥ ಯೋಜನೆಗಳಿಲ್ಲ. ದೇಶದ ಇತಿಹಾಸದಲ್ಲೇ ಇದು ಮೊದಲು. ಹೀಗಾಗಿ ನುರಿತ ತಜ್ಞರು ಈ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದಾರೆ ಎಂದರು.

Follow Us:
Download App:
  • android
  • ios