'ನಾಲ್ಕು ಓಟು ಹಾಕಿಸೋಕೆ ಆಗೊಲ್ಲ, ಬಂದು ಎಂಎಲ್ಸಿ ಸ್ಥಾನ ಕೇಳ್ತೀರಾ?' ಆಕಾಂಕ್ಷಿಗಳಿಗೆ ಡಿಕೆಶಿ ಎಚ್ಚರಿಕೆ

ರಾಜೀವ್ ಗಾಂಧಿಯವರ ಪ್ರಾಣ ಎಲ್ಲಿ ಹೋಯ್ತೋ ಅಲ್ಲಿ ಕನಕಪುರದ ಕಲ್ಲು ಹಾಕಿದ್ದೇನೆ. ಸೋನಿಯಾ ಗಾಂಧಿ ಸೂಚನೆ ಮೇರೆಗೆ ಹಾಕಿದ್ದೇನೆ. ನನಗೆ ಕನಕಪುರ ಬಂಡೆ ಅಂತಾರಲ್ಲ, ನಮ್ಮೂರ ಬಂಡೆಯ ಕಲ್ಲು ಅಲ್ಲಿ ತೆಗೆದುಕೊಂಡು ಹೋಗಿ ಹಾಕಿದ್ದೇನೆ. ಅಲ್ಲಿ ಹೋದಾಗ ನೋಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನುಡಿದರು.

Congress govt In Karnataka Completes one Years DK Shivakumar speech at kpcc office rav

ಬೆಂಗಳೂರು (ಮೇ.21): ರಾಜೀವ್ ಗಾಂಧಿಯವರ ಪ್ರಾಣ ಎಲ್ಲಿ ಹೋಯ್ತೋ ಅಲ್ಲಿ ಕನಕಪುರದ ಕಲ್ಲು ಹಾಕಿದ್ದೇನೆ. ಸೋನಿಯಾ ಗಾಂಧಿ ಸೂಚನೆ ಮೇರೆಗೆ ಹಾಕಿದ್ದೇನೆ. ನನಗೆ ಕನಕಪುರ ಬಂಡೆ ಅಂತಾರಲ್ಲ, ನಮ್ಮೂರ ಬಂಡೆಯ ಕಲ್ಲು ಅಲ್ಲಿ ತೆಗೆದುಕೊಂಡು ಹೋಗಿ ಹಾಕಿದ್ದೇನೆ. ಅಲ್ಲಿ ಹೋದಾಗ ನೋಡಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನುಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷದ ಪೂರೈಕೆ ಹಿನ್ನೆಲೆ ಕೆಪಿಸಿಸಿ ಘಟಕದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಒಂದು ವರ್ಷ ಪೂರೈಸಿದ್ದು ಮುಖ್ಯವಲ್ಲ. ನಾಲ್ಕು ವರ್ಷಗಳಲ್ಲಿ ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಅದು ಮುಖ್ಯ ಎನ್ನುವ ಮೂಲಕ ನನ್ನ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಅಂತ ಕ್ಲೈಮ್ ಮಾಡಿದ ಡಿಕೆಶಿ.

ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಪ್ರತಿಮೆ ಬದಲಾವಣೆ ಮಾಡಿದ್ದೇವೆ. ನಾನು ಬೆಂಗಳೂರು ಉಸ್ತುವಾರಿ ಸಚಿವನಾದ ಮೇಲೆ ಮೊದಲು ಅನುದಾನ ಬಿಡುಗಡೆ ‌ಮಾಡಿರುವುದು ರಾಜೀವ್ ಗಾಂಧಿ ಪ್ರತಿಮೆ ಬದಲಾವಣೆ ಮಾಡುವುದಕ್ಕೆ. ಪ್ರತಿಮೆಯನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟನೆ ಮಾಡಿದ್ರು ಎಂದರು.

ಅಂಜಲಿ ಹತ್ಯೆ ಪ್ರಕರಣ: ನಮ್ಮ ಸರ್ಕಾರದಲ್ಲಿ ಎನ್‌ಕೌಂಟರ್ ಆಗಿದ್ದರೆ ಇಂದು ಇಂಥ ಪ್ರಕರಣ ನಡೆಯುತ್ತಿರಲಿಲ್ಲ: ಯತ್ನಾಳ್

ಎಂಎಲ್‌ಸಿ ಆಕಾಂಕ್ಷಿಗಳಿಗೆ ಡಿಕೆಶಿ ಎಚ್ಚರಿಕೆ:

ನಾಲ್ಕು ಓಟು ಹಾಕಿಸೋಕೆ ಆಗೊಲ್ಲ ಬಂದು ಎಂಎಲ್‌ಸಿ ಸ್ಥಾನ ಕೇಳ್ತೀರಾ? ಮೊದಲು ನಿಮ್ಮ ಬೂತ್‌ನಲಲ್ಲಿ ಪಕ್ಷ ಸಂಘಟನೆ ಮಾಡಿ, ಬೂತ್‌ ಮಟ್ಟದಲ್ಲಿ ಲೀಡ್ ಕೊಡಿಸಿ ಆಗ ಬಂದು ಕೇಳಿ. ಇಲ್ಲದೇ ಹೋದ್ರೆ ನಾಯಕತ್ವ ಕೊಡೊಲ್ಲ. ಬಿಳಿ ಜುಬ್ಬಾ, ಬಿಳಿ ಕಾರು ತಗೊಂಡು ಬಂದು ಸ್ಥಾನ ಕೇಳೋದಲ್ಲ. ಮೊದಲು ಸಂಘಟನೆ ಮಾಡಿ, ಇಲ್ಲ ಜಾಗ ಖಾಲಿ ಮಾಡಿ. ನಾವು ಹೊಸ ನಾಯಕತ್ವ ಬೆಳೆಸುತ್ತೇವೆ. ನಾನು ಸದ್ಯ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಇನ್ನು ಎಷ್ಟು ದಿನ ಇರ್ತೇನೆ ಅನ್ನೋದು ಗೊತ್ತಿಲ್ಲ. ಆದರೆ ಇರುವುದರೊಳಗೆ ನಮ್ಮ ಪಕ್ಷದ ಬುನಾದಿ ಗಟ್ಟಿ ಮಾಡ್ತೇನೆ ಎಂದರು. 

ಗ್ರೇಸ್ ಮಾರ್ಕ್ಸ್‌ ನೀಡಿದರೂ ಕಾಂಗ್ರೆಸ್‌ ಸರ್ಕಾರ ಜಸ್ಟ್ ಪಾಸಾಗಲ್ಲ: ಬಿಜೆಪಿ ಅಭ್ಯರ್ಥಿ ಕಾಗೇರಿ ಲೇವಡಿ

ರಾಜೀವ್ ಗಾಂಧಿ ಪುಣ್ಯಸ್ಮರಣೆ: ರಕ್ತದಾನ

ಇಂದು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಹಿನ್ನಲೆ ಯೂತ್ ಕಾಂಗ್ರೆಸ್ ನಿಂದ ಕಾಂಗ್ರೆಸ್ ಭವನದಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು. ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾಲನೆ ನೀಡಿದರು.
 

Latest Videos
Follow Us:
Download App:
  • android
  • ios