Bengaluru- ಏರ್‌ಪೋರ್ಟ್‌ನಲ್ಲಿ ಎಲ್ನೋಡಿದ್ರೂ ಕಾಂಗ್ರೆಸ್ ಶಾಸಕರು: ಸಚಿವ ಸ್ಥಾನ ಲಾಭಿಗೆ ದೆಹಲಿಯತ್ತ ಪ್ರಯಾಣ
ಕಾಂಗ್ರೆಸ್ ಶಾಸಕರು ವಿಧಾನಸಭಾ ಅಧಿವೇಶನ ಪೂರ್ಣಗೊಂಡ ಬೆನ್ನಲ್ಲೇ ಸಚಿವ ಸ್ಥಾನದ ಲಾಭಿಗಾಗಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರು (ಮೇ 24): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಟೆನ್ಷನ್ ಮೇಲೆ ಟೆನ್ಷನ್ ಶುರುವಾಗಿದೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಪ್ರಯಾಸಪಟ್ಟು ಒಬ್ಬರನ್ನು ಆಯ್ಕೆ ಮಾಡಲಾಗಿದೆ. ಆದರೆಮ ಈಗ ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದ್ದು, ಕಾಂಗ್ರೆಸ್ ಶಾಸಕರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಬಣ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ ಹಾಗೂ ಹೈಕಮಾಂಡ್ ಬಣಗಳಾಗಿ ಒಟ್ಟು ಮೂರು ಬಣಗಳು ರಚನೆಯಾಗಿವೆ. ಯಾವ ಬಣಕ್ಕೆ ಎಷ್ಟು ಸಚಿವ ಸ್ಥಾನ ಸಿಗಲಿದೆ ಎಂಬುದು ರಾಜ್ಯದ ಜನತೆಗೆ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಜಿಲ್ಲಾವಾರು, ಪ್ರಾದೇಶಿಕ ವಿಭಾಗವಾರು ಮತ್ತು ಜಾತಿವಾರು ಲೆಕ್ಕಾಚಾರದಲ್ಲೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲಾಗುತ್ತಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗಿಂತ ಮುಮಚಿತವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಪ್ರಯಾಣ ಬೆಳೆಸದಿದ್ದು, ತಮ್ಮ ಬಣದವರಿಗೆ ಹೆಚ್ಚಿನ ಸಚಿವ ಸ್ಥಾನಗಳನ್ನು ಪಡೆಯಲು ಲಾಬಿ ಆರಂಭಿಸಲಿದ್ದಾರೆ.
ಗಟ್ಟಿಯಾಗಿ ಇರ್ರಿ ಪಾಟೀಲ್‌ರೇ ಅಂದ್ರು ಡಿಕೆಸುರೇಶ್! ವಾರ್ನಿಂಗ್ ನಮ್ಮ ಡಿಕ್ಷನರಿಯಲ್ಲೇ ಇಲ್ಲವೆಂದ್ರು ಎಂ.ಬಿ. ಪಾಟೀಲ್
ದೆಹಲಿಗೆ ಹೊರಟ ಶಾಸಕರು ಯಾರಾರು?:
ಶಾಸಕರಾದ ವಿನಯ್ ಕುಲಕರ್ಣಿ, ಸಂತೋಷ್ ಲಾಡ್, ಅನಿಲ್ ಮಾದು, ಟಿ.ರಘುಮೂರ್ತಿ, ರಾಘವೇಂದ್ರ ಹಿಟ್ನಾಳ್, ಬಸವರಾಜ್ ಶಿವಣ್ಣ, ಸಿರಗುಪ್ಪ ಶಾಸಕ ನಾಗರಾಜ್, ಬಸವರಾಜ್ ಕೆ ಎಸ್, ಬೀಮಾ ನಾಯಕ್, ತುಕಾರಾಂ, ಎಸ್ ಎಸ್ ಮಲ್ಲಿಕಾರ್ಜುನ, ಡಿ ಸುಧಾಕರ್, ವೆಂಕಟೇಶ್ ಪಾವಗಡ, ಆರ್ ಬಿ ತಿಮ್ಮಾಪುರ, ಅಪ್ಪಾಜಿ ನಾಡಗೌಡ, ಅಶೋಕ್ ಪಟ್ಟಣ್, ಬಸವರಾಜ ರಾಯರೆಡ್ಡಿ, ನಜೀರ್ ಅಹಮದ್, ಆರ್ ವಿ ದೇಶಪಾಂಡೆ ಹಾಗೂ ಬೀದರ್ ರಹೀಂ ಖಾನ್ ಸಚಿವ ಸ್ಥಾನದ ಲಾಭಿ ಮಾಡಲು ದೆಹಲಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಎಲ್ಲ ಶಾಸಕರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೊರಡಲು ಸಿದ್ಧವಾಗಿದ್ದಾರೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಎಲ್ಲಿ ನೋಡಿದರಲ್ಲಿ ಶಾಸಕರು: ಇನ್ನು ಕಾಂಗ್ರೆಸ್ ಶಾಸಕರುಲ್ಲಿ ಸುಮ್ಮ
- ಸಿಎಂ ಸಿದ್ದರಾಮಯ್ಯ ಬಣದ ಶಾಸಕರು
- ಬಸವನಗೌಡ ತುರುವಿನಹಾಳ
- ರಾಘವೇಂದ್ರ ಹಿಟ್ನಾಳ
- ರುದ್ರಪ್ಪ ಲಮಾಣಿ
- ಯಶವಂತ ರಾಯಗೌಡ ಪಾಟೀಲ
- ತುಕಾರಾಮ
- ಪರಸಾದ್ ಅಬ್ಬಯ್ಯ
- ಶಿವಾನಂದ ಪಾಟೀಲ್
- ಆರ್.ಬಿ. ತಿಮ್ಮಾಪುರ
- ಪುಟ್ಟರಂಗಶೆಟ್ಟಿ
- ನಾಗೇಂದ್ರ
- ಎಂ. ಕೃಷ್ಣಪ್ಪ
- ಕೃಷ್ಣಬೈರೇಗೌಡ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ಶಾಸಕರು
ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮಣ ಸವದಿ
ವಿನಯ್ ಕುಲಕರ್ಣಿ
ಬಿ.ಕೆ. ಸಂಗಮೇಶ್
ಎನ್. ಚಲುವರಾಯಸ್ವಾಮಿ
ಸಲೀಂ ಅಹ್ಮದ್
ಮಂಕಾಳು ವೈದ್ಯ
ಟಿ.ಡಿ. ರಾಜೇಗೌಡ
ಸುಬ್ಬಾರೆಡ್ಡಿ
ಎಸ್.ರವಿ
ಸಲೀಂ ಅಹ್ಮದ್
ಮಧು ಬಂಗಾರಪ್ಪ
ಎಸ್‌ಎಸ್ ಮಲ್ಲಿಕಾರ್ಜುನ
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಎಂ ಇಬ್ರಾಹಿಂ
- ಕಾಂಗ್ರೆಸ್ ಹೈಕಮಾಂಡ್ ಬಣದ ಶಾಸಕರು
- ಅಜಯ್ ಸಿಂಗ್
- ಶರಣಪ್ರಸಾದ್ ಪಾಟೀಲ್
- ರಹೀಂಖಾನ್
- ಈಶ್ವರ್‌ಖಂಡ್ರೆ
- ಎಚ್.ಕೆ. ಪಾಟೀಲ್
- ಬಿ.ಕೆ. ಹರಿಪ್ರಸಾದ್
- ಆರ್.ವಿ. ದೇಶಪಾಂಡೆ
- ತನ್ವೀರ್‌ಸೇಠ್
- ದಿನೇಶ್ ಗುಂಡೂರಾವ್
- ರಾಜಾವೆಂಕಟಪ್ಪ
ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ:
ಸರ್ಕಾರಿ ನಿವಾಸದಿಂದ ಎಚ್‌ಎಎಲ್ ವಿಮಾನ ನಿಲ್ದಾಣದತ್ತ ಹೊರಟ ಸಿಎಂ ಸಿದ್ದರಾಮಯ್ಯ. ವಿಶೇಷ ವಿಮಾನ ಮೂಲಕ ದೆಹಲಿಗೆ ತೆರಳಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜಮೀರ್ , ಎಂ.ಬಿ.ಪಾಟೀಲ್ ಸಹ ದೆಹಲಿ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಕಳೆದ ಬಾರಿ ಮುಖ್ಯಮಂತ್ರಿ ಪಟ್ಟಕ್ಕೆ ಲಾಭಿ ಮಾಡಿದಂತೆ ತನ್ನ ಬಣದ ಸದಸ್ಯರನ್ನೇ ಸಚಿವರನ್ನಾಗಿ ಮಾಡಿಕೊಳ್ಳಲು ಮತ್ತೊಮ್ಮೆ ಲಾಭಿ ಮಾಡಲಿದ್ದಾರೆಯೇ ಎಂಬುದು ಕುತೂಹಲವಾಗಿದೆ. ಆದರೆ, ವಿಶೇಷ ವಿಮಾನದಲ್ಲಿ ದೆಹಲಿಗೆ ಹೋಗುತ್ತಿದ್ದರೂ ಅವರೊಂದಿಗೆ ಉಪ ಮುಖ್ಯಮಂತ್ರಿ ಯಾಕೆ ಹೋಗಲಿಲ್ಲ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.