ಗಟ್ಟಿಯಾಗಿ ಇರ್ರಿ ಪಾಟೀಲ್‌ರೇ ಅಂದ್ರು ಡಿಕೆಸುರೇಶ್! ವಾರ್ನಿಂಗ್‌ ನಮ್ಮ ಡಿಕ್ಷನರಿಯಲ್ಲೇ ಇಲ್ಲವೆಂದ್ರು ಎಂ.ಬಿ. ಪಾಟೀಲ್

ವಿಧಾನಸೌಧದಲ್ಲಿ ಡಿಕೆ ಸುರೇಶ್‌ಗೂ ನಾನು ವಾರ್ನಿಂಗ್ ಮಾಡಿಲ್ಲ, ನಾನೂ ಸುರೇಶ್‌ಗೆ ವಾರ್ನಿಂಗ್ ಮಾಡಿಲ್ಲ. ಇದನ್ನು ತಪ್ಪಾಗಿ ಅರ್ಥೈಸುವುದು ಬೇಡ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

Political fight between Karnataka DCM DK Shivakumar and Minister MB Patil sat

ಬೆಂಗಳೂರು (ಮೇ 24): ನಾನು ವಿಧಾನ‌ಸೌಧದಲ್ಲಿ ಶಾಸಕಾಂಗ ಸಭೆ ಮುಗಿಸಿ ಹೊರಟಿದ್ದಾಗ ಕಾರಿಡಾರ್‌ನಲ್ಲಿ ನನ್ನನ್ನು ಕರೆದ ಸಂಸದ ಡಿ.ಕೆ. ಸುರೇಶ್‌ ಅವರು ಗಟ್ಟಿಯಾಗಿ ಇರ್ರಿ ಎಂ.ಬಿ.ಪಾಟೀಲ್‌ರೇ ಅಂದ್ರು.. ನಿಮ್ಮ ಜೊತೆ ಆಮೇಲೆ‌ ಮಾತಾಡ್ತೇನೆ ಅಂತ ನಾನು ಹೇಳಿದೆ. ಡಿಕೆ ಸುರೇಶ್‌ಗೂ ನಾನು ವಾರ್ನಿಂಗ್ ಮಾಡಿಲ್ಲ, ನಾನೂ ಸುರೇಶ್‌ಗೆ ವಾರ್ನಿಂಗ್ ಮಾಡಿಲ್ಲ. ಇದನ್ನು ತಪ್ಪಾಗಿ ಅರ್ಥೈಸುವುದು ಬೇಡ ಎಂದು ಸಚಿವ ಎಂ.ಬಿ. ಪಾಟೀಲ್‌ ಸ್ಪಷ್ಟನೆ ನೀಡಿದರು.

ವಿಧಾನಸೌಧ ಕಾರಿಡಾರ್ ನಲ್ಲಿ ಡಿಕೆ ಸುರೇಶ್ ಹಾಗೂ ಎಂ.ಬಿ.ಪಾಟೀಲ್ ಮುಖಾಮುಖಿ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ವಿಧಾನ‌ಸೌಧದಲ್ಲಿ ಶಾಸಕಾಂಗ ಸಭೆ ಮುಗಿಸಿ ಹೊರಟಿದ್ದೆನು. ಆಗ ಡಿಕೆ ಸುರೇಶ್ ಪ್ರೀತಿಯಿದ ಎಂ.ಬಿ.ಪಾಟೀಲ್ ರೇ ಎಂದು ಕರೆದರು. ನಾನು ವಾಪಸ್ ಬಂದೆ.. ಆಗ ಗಟ್ಟಿಯಾಗಿ ಇರ್ರಿ ಎಂ.ಬಿ.ಪಾಟೀಲ್‌ರೇ ಅಂದ್ರು.. ನಿಮ್ಮ ಜೊತೆ ಆಮೇಲೆ‌ ಮಾತಾಡ್ತೇನೆ ಅಂತ ನಾನು ಹೇಳಿದೆ.. ಇದನ್ನು ಬಿಟ್ಟು ನನಗೆ ವಾರ್ನಿಂಗ್ ಮಾಡಿದರು ಎನ್ನುವುದು ಸುಳ್ಳು ಎಂದು ಹೇಳಿದರು.

ಕಾಂಗ್ರೆಸ್‌ ಒಗ್ಗಟ್ಟಿಗೆ ಬೆಂಕಿಯಿಟ್ಟ ಎಂ.ಬಿ. ಪಾಟೀಲ್‌: ಪವರ್‌ ಶೇರಿಂಗ್‌ ಹೇಳಿಕೆ ರಹಸ್ಯವೇನು?

ವಾರ್ನಿಂಗ್‌ ನಮ್ಮ ಡಿಕ್ಷನರಿಯಲ್ಲೇ ಇಲ್ಲ: ಮುಂದುವರೆದು, ಡಿಕೆ ಸುರೇಶ್ ಗೂ ನಾನು ವಾರ್ನಿಂಗ್ ಮಾಡಿಲ್ಲ, ನಾನೂ ಡಿಕೆಸುರೆಶ್ ಗೆ ವಾರ್ನಿಂಗ್ ಮಾಡಿಲ್ಲ. ನನಗೆ ವಾರ್ನಿಂಗ್ ಕೊಡೋರು ಯಾರೂ ಇಲ್ಲ. ಡಿ.ಕೆ.ಸುರೇಶ್ ಗೆ ವಾರ್ನಿಂಗ್ ಕೊಡೊರೂ ಯಾರೂ ಇಲ್ಲ. ವಾರ್ನಿಂಗ್ ಗೀರ್ನಿಂಗ್ ನಮ್ಮ ಡಿಕ್ಷನರಿಯಲ್ಲಿಯೇ ಇಲ್ಲ. ವಾರ್ನಿಂಗ್ ನಾವು ಕೊಡ್ತೇವೇಯೇ ಹೊರತು ತಗೋಳೋದು ಇಲ್ಲ. ಇದನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸುವುದು ಬೇಡ. ಅವರು ನನ್ನ ಪ್ರೀತಿಯಿಂದ ಕರೆದಿದ್ದಾರೆ. ಪ್ರೀತಿಯಿಂದ ಗಟ್ಟಿಯಾಗಿ ಇರಿ ಎಂದು ಹೇಳಿದ್ದು ಅಷ್ಟೇ. ವಾರ್ನಿಂಗ್ ಮಾಡುವಂತಹದ್ದು ಯಾವುದು ಆಗಿಲ್ಲ. ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದರು.

ಯಾರಿಗೂ ಹೆದರಿಲ್ಲ, ಹೆದರೋದೂ ಇಲ್ಲ: ರಾಜ್ಯದಲ್ಲಿ ನಾನು ಯಾರತ್ರಾನೂ ವಾರ್ನಿಂಗ್ ಮಾಡಿಸಿಕೊಳ್ಳುವಷ್ಟು ಎಂ.ಬಿ.ಪಾಟೀಲ್ ವೀಕ್ ಆಗಿಲ್ಲ. ಹಾಗೇಯೇ ಡಿ.ಕೆ.ಸುರೇಶ್ ಕೂಡ ವಾರ್ನಿಂಗ್ ತಗೆದುಕೊಳ್ಳುವಷ್ಟು ವೀಕ್ ಆಗಿಲ್ಲ. ನಮ್ಮ ಸಂಬಂಧ ಚೆನ್ನಗಿದೆ, ತಪ್ಪಾಗಿ ಬಿಂಬಿಸುವುದು ಬೇಡ. ಎಂ.ಬಿ.ಪಾಟೀಲ್ ಯಾರಿಗೂ ಹೆದರಿಲ್ಲ, ಹೆದರೋದೂ ಇಲ್ಲ. ಇಂದದ್ದೆಲ್ಲಾ ಬಹಳಷ್ಟು ನೋಡಿದ್ದೇನೆ. ನನ್ನ ತಂದೆ ಕೂಡ ಯಾವತ್ತೂ ನನಗೆ ಬೆರಳು ಮಾಡಿ ತೋರಿಸಿಲ್ಲ. ರಾಜಕೀಯದಲ್ಲಿ 30 ವರ್ಷದಿಂದ ಇದ್ದೇನೆ. ನಾನು ವಿಜಯಪುರ ಜಿಲ್ಲೆಯವನು. 6 ಬಾರಿ ಶಾಸಕ, ಒಂದು ಬಾರಿ ಎಂ.ಪಿ.ಆಗಿದ್ದೇನೆ. 5 ವರ್ಷ ನೀರಾವರಿ ಹಾಗೂ ಗೃಹ ಸಚಿವ ಕೂಡ ಆಗಿದ್ದೇನೆ. ನನ್ನ ಹಾಗೂ ಡಿಕೆಸುರೇಶ್‌ ನಡುವಿನ ಭಾಂದವ್ಯ ಬಹಳ ಚೆನ್ನಾಗಿದೆ. ಹಾಗೆ ಏನಾದರೂ ಇದ್ದಿದ್ದರೇ ನಾನೇ ಹೇಳುತ್ತಿದ್ದೆ. ಹೀಗೆ ಮಾಡಿದ್ದರೇ ಹೌದಪ್ಪ ಎಂದು ನಾನು ಉತ್ತರ ನೀಡುತ್ತಿದ್ದೆ ಎಂದು ಮಾಹಿತಿ ನೀಡಿದರು.

ಸಿದ್ದರಾಮಯ್ಯ, ಡಿಕೆಶಿಯನ್ನು ಸಿಎಂ ಆಗೋಕೆ ಬಿಡೋದಿಲ್ಲ: ಭವಿಷ್ಯದ ಎಚ್ಚರಿಕೆ ರವಾನೆ!

ಎಂ.ಬಿ. ಪಾಟೀಲ್‌ ಮುಖ್ಯಮಂತ್ರಿ ಆಗಲಿ ಬಿಡಿ: 
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್‌ ಅವರು, ಈ ಹಿಂದೆ ಸಿದ್ದರಾಮಯ್ಯ ಐದು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಈಗ ಮತ್ತೆ ಮುಖ್ಯಮಂತ್ರಿ ಆಗಿದ್ದಾರೆ. ಮತ್ತೆ ಮುಂದಿನ ಐದು ವರ್ಷ ಬೇಕಾದರೂ ಸಿಎಂ ಆಗಿರಲಿ. ಬೇಡ ಅಂದವರು ಯಾರು? ಎಂ.ಬಿ ಪಾಟೀಲ್ ಕೂಡ ಮುಖ್ಯಮಂತ್ರಿ ಆಗಲಿ ಬಿಡಿ ಎಂದು ಪರೋಕ್ಷವಾಗಿ ಸಚಿವ ಎಂ.ಬಿ. ಪಾಟೀಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios