ಮೈತ್ರಿ ಸರ್ಕಾರ ಪತನದ ಆಡಿಯೋ ಬಾಂಬ್, ರಾಜ್ಯ ರಾಜಕಾರಣದಲ್ಲಿ ಡಿಸಿಎಂ ಸಂಚಲನ
ಉಪಚುನಾವಣೆ ಸಮಯದಲ್ಲಿ ಉಪಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥನಾರಾಯಣ ಅವರು ರಾಜ್ಯ ರಾಜಕಾರಣದಲ್ಲಿ ಆಡೊಯೋ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರು, (ಅ.20): ಉಒಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ರಾಜ್ಯ ರಾಜಕಾರಣದಲ್ಲಿ ಆಡಿಯೋ ಬಾಂಬ್ ಸಿಡಿಸಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಮೈತ್ರಿ ಸರ್ಕಾರದ ಪತನಕ್ಕೆ ಯಾರು ಕಾರಣ ಎಂಬುದರ ಬಗ್ಗೆ ಸಾಕ್ಷ್ಯವಿದೆ. ಯಾರು ಮುನಿರತ್ನ ಅವರನ್ನು ಕಾಂಗ್ರೆಸ್‌ನಿಂದ ಕಳುಹಿಸಿದರು ಎಂಬುದರ ಬಗ್ಗೆ ನಮ್ಮ ಬಳಿ ಆಡಿಯೋ ಸಾಕ್ಷಿ ಇದೆ. ಎಲ್ಲವನ್ನು ಜನರಿಗೆ ತಿಳಿಸುವ ಕಾಲ ಬಂದಿದೆ. ಶೀಘ್ರದಲ್ಲೇ ಈ ಆಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಬಾಂಬ್ ಸಿಡಿಸಿದ್ದಾರೆ.
ವಾಹನ ಚಾಲಕರಿಂದ ದಂಡ ವಸೂಲಿ, ಸರ್ಕಾರದ ವಿರುದ್ಧ ಕುಮಾರಸ್ವಾಮಿ ರೋಷಾವೇಷ
ಇಂದು (ಮಂಗಳವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಸಿದ್ದರಾಮಯ್ಯನವರೇ ದ್ರೋಹ ಮಾಡಿದರು. ಕಾಂಗ್ರೆಸ್ ನವರೇ ಮೈತ್ರಿ ಸರ್ಕಾರ ಬೀಳಿಸಿದರು ಎಂದು ಗಂಭೀರ ಆರೋಪ ಮಾಡಿದರು.
ಈಗ ಮುನಿರತ್ನ, ವೋಟ್‌ಗಾಗಿ ತಮ್ಮನ್ನು ಮಾರಿಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಮುನಿರತ್ನ, ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಗೆ ಆತ್ಮೀಯರು. ಅವರು ಕಾಂಗ್ರೆಸ್ ಬಿಟ್ಟು ಬರಲು ಯಾರು ಕಾರಣ ಎಂಬುದನ್ನು ಹೇಳಬೇಕು ಎಂದರು.
ಡಿ.ಕೆ.ಶಿವಕುಮಾರ್ ತಾವು ಮೈತ್ರಿ ಸರ್ಕಾರದ ಕೈಬಿಡಲ್ಲ. ನಾವು ಜೋಡೆತ್ತುಗಳು ಎಂದು ಕುಮಾರಸ್ವಾಮಿ ಜೊತೆ ಸರ್ಕಾರ ಮಾಡಿದರು. ಬಳಿಕ ಅವರ ಜೊತೆಯೇ ಇದ್ದು ಅವರಿಗೆ ಗುಂಡಿ ತೋಡಿದರು. ನಿಜವಾದ ಮೀರ್ ಸಾದಿಕ್ ಇದ್ದರೆ ಅದು ಡಿ.ಕೆ.ಶಿವಕುಮಾರ್ ಎಂದು ಟಾಂಗ್ ಕೊಟ್ಟರು.