ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಜನ ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ ಎಂದ ಬಿಜೆಪಿ ಸಂಸದ

* ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಬಿಜೆಪಿ ಸಂಸದನ ಬಾಲಿಶ ಹೇಳಿಕೆ
* ಜನ ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ ಎಂದ ಬಿಜೆಪಿ ಸಂಸದ
* ಜಿಎಸ್‌ಟಿ ಬಗ್ಗೆಯೂ ಬೇಜವಾಬ್ದಾರಿಯುತ ಹೇಳಿಕೆ 

Davangere BJP MP gm siddeshwara irresponsible Statement on fuel price hike rbj

ದಾವಣಗೆರೆ, (ಜುಲೈ.10): ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ದಾವಣಗೆರೆ ಬಿಜೆಪಿ ಸಂಸದ ಜಿ.ಎಮ್. ಸಿದ್ದೇಶ್ವರ್ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.

ಪೆಟ್ರೋಲ್ ಬೆಲೆ ಏರಿಕೆಯಿಂದ ಜನರು ಸೈಕಲ್ ಏರುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಎಂಬ ಪ್ರಶ್ನೆಗೆ ಸಂಸದ ಜಿ.ಎಂ. ಸಿದ್ದೇಶ್ವರ್ ಹೀಗೆ ಪ್ರತಿಕ್ರಿಯೆ ನೀಡಿದ್ದು,ಸೈಕಲ್ ನಲ್ಲಿ ಓಡಾಡಿದ್ರೆ ಒಳ್ಳೆಯ ವ್ಯಾಯಮ ಆಗುತ್ತೆ ಎಂದು ಬಾಲಿಶ ಹೇಳಿಕೆ ನೀಡಿದರು.

ಪೆಟ್ರೋಲ್‌ 35, ಡೀಸೆಲ್‌ 16 ಪೈಸೆ ಏರಿಕೆ: ಮತ್ತಷ್ಟು ಕಡೆ 100 ರು ದಾಟಿದ ದರ!

ಇಂಧನ ಬ್ಯಾರಲ್ ರೇಟ್ ಜಾಸ್ತಿ ಇದೆ, ಪೆಟ್ರೋಲ್ ಬೆಲೆ ಜಾಸ್ತಿ ಆಗಿದೆ. ಪೆಟ್ರೋಲ್ ರೇಟ್ ಜಾಸ್ತಿ ಆದ್ರೆ ಏನ್ ಮಾಡೋಕೆ ಆಗುತ್ತೆ? ಅದನ್ನೆಲ್ಲ ಮೋದಿ ನೋಡಿಕೊಳ್ಳುತ್ತಾರೆ.  ಜನ ಸೈಕಲ್​ನಲ್ಲಿ ಓಡಾಡಿದ್ರೆ ಏನ್ ಆಗುತ್ತೆ. ಒಳ್ಳೆಯ ವ್ಯಾಯಾಮ ಆಗುತ್ತೆ ಎಂದರು.

ಇನ್ನು ಇದೇ ವೇಳೆ ಜಿಎಸ್​ಟಿ ಪಾಲು ಕರ್ನಾಟಕ ರಾಜ್ಯಕ್ಕೆ ಸಿಗುತ್ತಿಲ್ಲ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಜಿಎಸ್​ಟಿ ಪಾಲಿನ ಬಗ್ಗೆ ನಮಗೇನೂ ಗೊತ್ತಿಲ್ಲ. ಈ ಬಗ್ಗೆ ಹಣಕಾಸು ಸಚಿರನ್ನೇ ಕೇಳಿ ಎಂದು ಬೇಜವಾಬ್ದಾರಿಯುತ ಉತ್ತರ ನೀಡಿದರು.

Latest Videos
Follow Us:
Download App:
  • android
  • ios