ಪಕ್ಷದ ವರಿಷ್ಠರು, ಮುಖಂಡರು, ಕಾರ್ಯಕರ್ತರಿಗೆ ತಿಳಿಸದೇ ಹೊನ್ನಾಳಿ ಜೆಡಿಎಸ್‌ ಅಭ್ಯರ್ಥಿ ಬಿ.ಜಿ.ಶಿವಮೂರ್ತಿ ನಾಮಪತ್ರ ಹಿಂಪಡೆದದ್ದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಇದರಿಂದ ಬೇಸರಗೊಂಡು ವರಿಷ್ಠರು ಇವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ್‌ ದೇವರ ಹೊನ್ನಾಳಿ ತಿಳಿಸಿದ್ದಾರೆ.

 ಹೊನ್ನಾಳಿ (ಏ.27) : ಪಕ್ಷದ ವರಿಷ್ಠರು, ಮುಖಂಡರು, ಕಾರ್ಯಕರ್ತರಿಗೆ ತಿಳಿಸದೇ ಹೊನ್ನಾಳಿ ಜೆಡಿಎಸ್‌ ಅಭ್ಯರ್ಥಿ ಬಿ.ಜಿ.ಶಿವಮೂರ್ತಿ ನಾಮಪತ್ರ ಹಿಂಪಡೆದದ್ದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಇದರಿಂದ ಬೇಸರಗೊಂಡು ವರಿಷ್ಠರು ಇವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ್‌ ದೇವರ ಹೊನ್ನಾಳಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊನ್ನಾಳಿ ಕ್ಷೇತ್ರಕ್ಕೆ ರಾಜ್ಯ ನಾಯಕರು ರಾಜ್ಯದಲ್ಲೇ ಮೊದಲಿಗೆ ಟಿಕೆಟ್‌ ಘೋಷಣೆಮಾಡಿದ್ದರು. ಆದರೆ ಏಕಾಏಕಿ ನಾಮಪತ್ರ ಹಿಂಪಡೆದಿರುವುದು ತೀವ್ರ ನೋವಿನ ಸಂಗತಿ. ಇದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಜೆಡಿಎಸ್‌ ಕಾರ್ಯಕರ್ತರಿಗೆ ಅವಮಾನ ಮಾಡಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಚಿತ್ರದುರ್ಗ, ದಾವಣಗೆರೆಯಲ್ಲಿ ಕಿಚ್ಚನ ಹವಾ: ಸುದೀಪ್‌ ನೋಡಲು ಜನಸಾಗರ

ಜೆಡಿಎಸ್‌ ಅಭ್ಯರ್ಥಿ(JDS Candidate)ಯಾಗಿದ್ದ ಬಿ.ಜಿ.ಶಿವಮೂರ್ತಿ(BG Shivamurthy) ಹಾಗೂ ನಾಮಪತ್ರ ವಾಪಸ್‌ ಪಡೆಯುವದಕ್ಕೆ ಸಹಕಾರ ನೀಡಿದ ಜೆಡಿಎಸ್‌ ತಾಲೂಕು ಅಧ್ಯಕ್ಷ ವೀರೇಶ್‌ ಹನಗವಾಡಿ ಅವರನ್ನು ಜೆಡಿಎಸ್‌ ಜಿಲ್ಲಾಧ್ಯಕ್ಷರು, ಜೆಡಿಎಸ್‌ ಮುಖಂಡ ಮಾಜಿ ಶಾಸಕ ಶಿವಶಂಕರ್‌ ಆದೇಶದಂತೆ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದರು.

ತಾಲೂಕು ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಮಾತನಾಡಿ, ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮೋಸ ಮಾಡಿ ನಾಮಪತ್ರ ಹಿಂಪಡೆದಿರುವ ಬಿ.ಜಿ. ಶಿವಮೂರ್ತಿ ಅವರ ಹಿಂದೆ ಜಿಲ್ಲಾ ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಕುಮಾರ್‌ ಅವರ ಹುನ್ನಾರ ಇರುವುದರಿಂದ ಅವರನ್ನೂ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ರಾಜ್ಯ ಜೆಡಿಎಸ್‌ ವರಿಷ್ಠರಿಗೆ ಒತ್ತಾಯಪಡಿಸಿದರು. 

ಕಾಂಗ್ರೆಸ್‌- ಜೆಡಿಎಸ್‌ ಒಳ ಒಪ್ಪಂದದಿಂದ ಬಿಜೆಪಿ ಮಣಿಸಲು ಅಸಾಧ್ಯ: ಎಸ್‌.ಟಿ.ಸೋಮಶೇಖರ್‌

ನ್ಯಾಮತಿ ತಾಲೂಕು ಜೆಡಿಎಸ್‌ ಅಧ್ಯಕ್ಷ ವಿಜೇಂದ್ರ ಮಹೇಂದ್ರಕರ್‌, ಸುಭಾಷ್‌ ಬಳ್ಳೇಶ್ವರ್‌, ಬಸಣ್ಣ, ಹಾಲಸ್ವಾಮಿ ಚಿನ್ನಿಕಟ್ಟೆ, ಹನುಮಂತಪ್ಪ ಹಾಗೂ ಇತರರು ಇದ್ದರು.