Davanagere Election Results 2023: ದಾಖಲೆ ಜಯ: ಕಾಂಗ್ರೆಸ್‌ ಸಾಧನೆ ಖುಷಿ ನೀಡಿದೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರಬೇಕೆಂಬುದು ಜನರ ಆಸೆಯಾಗಿದ್ದು, ಅದರಂತೆ ಮತದಾರರು ತೀರ್ಪು ನೀಡಿದ್ದಾರೆ. ರಾಜ್ಯದ ಈ ಫಲಿತಾಂಶ ತಮಗೆ ಅತೀವ ಸಂತೋಷ ತಂದಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಪುನರಾಯ್ಕೆಯಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

davanagere election news 2023 Congress is happy with its achievement gvd

ದಾವಣಗೆರೆ (ಮೇ.14): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರಬೇಕೆಂಬುದು ಜನರ ಆಸೆಯಾಗಿದ್ದು, ಅದರಂತೆ ಮತದಾರರು ತೀರ್ಪು ನೀಡಿದ್ದಾರೆ. ರಾಜ್ಯದ ಈ ಫಲಿತಾಂಶ ತಮಗೆ ಅತೀವ ಸಂತೋಷ ತಂದಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಪುನರಾಯ್ಕೆಯಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು. ತಾಲೂಕಿನ ತೋಳಹುಣಸೆ ಶಿವಗಂಗೋತ್ರಿಯ ದಾವಿವಿ ಕ್ಯಾಂಪಸ್‌ನ ಮತ ಎಣಿಕೆ ಕೇಂದ್ರದಲ್ಲಿ ದಾವಣಗೆರೆ ದಕ್ಷಿಣದ ಬಿಜೆಪಿ ಅಭ್ಯರ್ಥಿ ಬಿ.ಜಿ.ಅಜಯಕುಮಾರ ವಿರುದ್ಧ ದಾಖಲೆಯ ಅಂತರದ ಜಯ ಸಾಧಿಸಿದ ನಂತರ ಚುನಾವಣಾಧಿಕಾರಿ, ಪಾಲಿಕೆ ಆಯುಕ್ತೆ ರೇಣುಕಾ ಅವರಿಂದ ಶಾಸಕರ ಪ್ರಮಾಣ ಪತ್ರ ಪಡೆದು, ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆಯ 6 ಕ್ಷೇತ್ರ ಸೇರಿ ರಾಜ್ಯದಲ್ಲಿ ದಾಖಲೆಯ ಜಯ ಕಂಡ ಕಾಂಗ್ರೆಸ್ಸಿನ ಸಾಧನೆ ಖುಷಿ ತಂದಿದೆ ಎಂದರು.

ಪಕ್ಷದ ಶಾಸಕರೆಲ್ಲಾ ಸೇರಿ, ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿ, ಅದನ್ನು ಪಕ್ಷದ ವರಿಷ್ಠರಿಗೆ ರವಾನಿಸುತ್ತೇವೆ. ಲಿಂಗಾಯತ ಮುಖ್ಯಮಂತ್ರಿ ಕುರಿತಂತೆ ಪಕ್ಷದ ವರಿಷ್ಠರ ಮುಂದೆ ಬೇಡಿಕೆ ಇಡಲಿದ್ದೇವೆ. ಹೈಕಮಾಂಡ್‌ ಒಪ್ಪಿದ ನಂತರ ಮುಖ್ಯಮಂತ್ರಿ ಯಾರೆಂಬುದು ಅಂತಿಮವಾಗಲಿದೆ. ನಾವು ಸದಾ ಜನರ ಮಧ್ಯೆ ಇದ್ದ ಕಾರಣಕ್ಕೆ ಜನರು ನಮ್ಮನ್ನು ಇಷ್ಟಪಡುತ್ತಾರೆ. ಇದಕ್ಕಾಗಿಯೇ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸತತವಾಗಿ ಪುನರಾಯ್ಕೆ ಮಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು. ಬಿಜೆಪಿಯ ದುರಾಡಳಿತ ತಡೆಯಲು ಕಾಂಗ್ರೆಸ್‌ ಪಕ್ಷ ಸಾಕಷ್ಟುಕಷ್ಟಪಟ್ಟಿತ್ತು. ಅದನ್ನು ರಾಜ್ಯದ ಜನತೆ ಮತ ಚಲಾಯಿಸಿ ತೋರಿಸಿದ್ದಾರೆ.

ಸೋದ​ರ​ ಕುಮಾ​ರ್‌ ಬಂಗಾ​ರ​ಪ್ಪಗೆ ಮಣ್ಣು​ಮು​ಕ್ಕಿ​ಸಿದ ಮಧು ಬಂಗಾ​ರಪ್ಪ

ಆದರೆ, ರಾಜ್ಯದ ಜನತೆ ಈಗ ಬಿಜೆಪಿ ಆಡಳಿತವನ್ನು ನೋಡಿ, ಬೇಸತ್ತಿದ್ದರು. ಬಿಜೆಪಿ ಆಡಳಿತದಿಂದ ರೋಸಿ ಹೋಗಿದ್ದ ಜನರು ಕಾಂಗ್ರೆಸ್‌ ಪಕ್ಷ ಆಯ್ಕೆ ಮಾಡಿದೆ. ಈ ಮೂಲಕ ನಮಗೆ ಸರ್ಕಾರ ರಚಿಸಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು. ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್‌.ವೀರಣ್ಣ ಮಾತನಾಡಿ, ಯಾವುದೇ ಜಾತಿ, ಮತ, ಧರ್ಮವನ್ನು ನೋಡದೇ, ಎಲ್ಲರೂ ಶಾಮನೂರು ಶಿವಶಂಕರಪ್ಪನವರಿಗೆ ಮತ ಹಾಕಿ, ದಾಖಲೆಯ ಗೆಲುವನ್ನೇ ನೀಡಿದ್ದಾರೆ. ವಿಧಾನಸಭೆಯಲ್ಲೇ ಅತ್ಯಂತ ಹಿರಿಯ ಶಾಸಕರಾಗಿ ಶಾಮನೂರು ಪುನರಾಯ್ಕೆಯಾಗಿದ್ದಾರೆ. 92 ವರ್ಷದ ಶಾಮನೂರು ಶಿವಶಂಕರಪ್ಪ 97 ವರ್ಷದವರೆಗೂ ವಿಧಾನಸಭೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಜಿಲ್ಲೆ ಪ್ರತಿನಿಧಿಸಲಿದ್ದಾರೆ ಎಂದರು.ಮುಖಂಡರಾದ ದಿನೇಶ ಕೆ.ಶೆಟ್ಟಿ, ಅಯೂಬ್‌ ಪೈಲ್ವಾನ್‌, ಮಲ್ಲಿಕಾರ್ಜುನ ಇಂಗಾಳೇಶ್ವರ, ಮುನಿ, ರಾಜೇಶ ಇತರರಿದ್ದರು.

ಬಿಜೆಪಿ ಅಭ್ಯರ್ಥಿ ದುರ್ಬಲ: ಬಿಜೆಪಿ ಅಭ್ಯರ್ಥಿ ಹಿಂದೆ ದಾವಣಗೆರೆಯಲ್ಲಿ ಮೇಯರ್‌ ಆಗಿದ್ದಾಗ ಯಾವುದೇ ಕೆಲಸ ಮಾಡಿರಲಿಲ್ಲ. ಕೇವಲ ತನ್ನ ಜಾಗಗಳಿಗೆ ಡೋರ್‌ ನಂಬರ್‌ ಕೊಟ್ಟಿದ್ದನ್ನು ಬಿಟ್ಟರೆ ಬೇರೇನನ್ನೂ ಮಾಡಲಿಲ್ಲ. ತಮ್ಮ ವಿರುದ್ಧ ಬಿಜೆಪಿ ಕಣಕ್ಕಿಳಿಸಿರುವುದು ದುರ್ಬಲ ಅಭ್ಯರ್ಥಿ ಎಂಬುದಾಗಿ ಅಂದೇ ಹೇಳಿದ್ದೆ. ಅದರಂತೆ ಚುನಾವಣೆಯಲ್ಲಿ ನಾನು ಯಾವುದೇ ಆಯಾಸ ಇಲ್ಲದಂತೆ ಗೆದ್ದಿದ್ದೇನೆ ಎಂದು ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಹೊಸಕೋಟೆಯಲ್ಲಿ 2ನೇ ಬಾರಿ ಗೆದ್ದು ಬೀಗಿದ ಶರತ್‌ ಬಚ್ಚೇಗೌಡ

ದಾವಣಗೆರೆ ಉತ್ತರ, ದಕ್ಷಿಣ ಸೇರಿ ಎಲ್ಲಾ 7 ಕ್ಷೇತ್ರದ ಗೆಲುವೇ ನಮ್ಮ ಗುರಿಯಾಗಿತ್ತು. ಅದರಂತೆ 6 ಕ್ಷೇತ್ರದಲ್ಲಿ ಗೆದ್ದಿದ್ದೇವೆ. ನಮ್ಮ ಲೆಕ್ಕಾಚಾರದಂತೆ ಅಪ್ಪಾಜಿ(ಶಾಮನೂರು), ತಮ್ಮ ಎಸ್ಸೆಸ್‌ ಮಲ್ಲಿಕಾರ್ಜುನ, ನಮ್ಮ ಹುಡುಗರಾದ ಶಿವಗಂಗಾ ಬಸವರಾಜ, ಕೆ.ಎಸ್‌.ಬಸವಂತಪ್ಪ, ಹಿರಿಯರಾದ ಡಿ.ಜಿ.ಶಾಂತನಗೌಡ, ಬಿ.ದೇವೇಂದ್ರಪ್ಪ ಗೆದ್ದಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಸರ್ಕಾರಕ್ಕೆ ಮತ್ತಷ್ಟುಬಲ ತರಲಿದ್ದಾರೆ. ನಗರ, ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವವೇ ನಡೆಯಲಿದೆ.
-ಎಸ್‌.ಎಸ್‌.ಗಣೇಶ್‌, ಶಾಮನೂರು ಪುತ್ರ

Latest Videos
Follow Us:
Download App:
  • android
  • ios