ಸದ್ಯಕ್ಕೆ ಮದ್ಯದ ದರ ಏರಿಕೆ ಇಲ್ಲ, ಏರಿಕೆ ಮಾಡಿದರೆ ತಿಳಿಸುವೆ: ಅಬಕಾರಿ ಸಚಿವ ತಿಮ್ಮಾಪುರ

ಸಚಿವರಾದ ಮೇಲೆ ಮೊದಲ ಬಾರಿಗೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಅವರಿಗೆ ಭರ್ಜರಿ ಸ್ವಾಗತ ದೊರಕಿತು‌. ನಗರದ ಹೃದಯ ಭಾಗದಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ ಬಳಿಕ ಕಾಂಗ್ರೆಸ್ ಕಚೇರಿ ವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಸಚಿವರಿಗೆ ನೂರಾರು ಸಂಖ್ಯೆಯಲ್ಲಿ ಕೈ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.

Currently there is no increase in the price of alcohol says minister timmapur at  chitradurga rav

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜೂ.22) : ಸಚಿವರಾದ ಮೇಲೆ ಮೊದಲ ಬಾರಿಗೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಅವರಿಗೆ ಭರ್ಜರಿ ಸ್ವಾಗತ ದೊರಕಿತು‌. ನಗರದ ಹೃದಯ ಭಾಗದಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿ ಬಳಿಕ ಕಾಂಗ್ರೆಸ್ ಕಚೇರಿ ವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಸಚಿವರಿಗೆ ನೂರಾರು ಸಂಖ್ಯೆಯಲ್ಲಿ ಕೈ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಕಾಂಗ್ರೆಸ್ ಕಚೇರಿ ಬಳಿ ಸಚಿವರ ಮೇಲೆ ಹೂ ಮಳೆ ಸುರಿಸುವ ಮೂಲಕ ಪಕ್ಷದ ಕಚೇರಿಯ ಆತ್ಮೀಯ ಸ್ವಾಗತ ಕೋರಿದರು.

ಬಳಿಕ ಕೈ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಸಚಿವರು ಜಿಲ್ಲೆಯ ಆಗು ಹೋಗುಗಳ ಕುರಿತು ಚರ್ಚಿಸಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಘೋಷಣೆಗೂ ಮುನ್ನ ಮೆದುಳು ಇರಲಿಲ್ವಾ ಎಂಬ ಕೇಂದ್ರ ಸಚಿವ ಶೋಭಾ ಕರಂದ್ಲಾಜೆಗೆ, ಕಾಂಗ್ರೆಸ್ ನವರಿಗೆ ಅಲ್ಲ ಈ‌ ಹೇಳಿಕೆ ನೀಡಿದ ಶೋಭಾ ಅವರಿಗೆ ಮೆದುಳಿಲ್ಲ ಎಂದು ಟಂಗ್ ಕೊಟ್ಟರು. 600‌ ಭರವಸೆ ನೀಡಿ 50 ಭರವಸೆ ಪೂರೈಸದ ಅಯೋಗ್ಯ ಪಕ್ಷ ಬಿಜೆಪಿ. ನಾವು ಅಧಿಕಾರಕ್ಕೆ ಬಂದ ತಿಂಗಳಲ್ಲೇ ಯೋಜನೆ ತರುತ್ತಿದ್ದೇವೆ. ನಮ್ಮ ಸರ್ಕಾರದ ಬಗ್ಗೆ ಮಾತಾಡಲು ಬಿಜೆಪಿಗೆ ಯೋಗ್ಯತೆ ಇಲ್ಲ ಎಂದರು.

 

ದುಡ್ಡು ಕೊಡುತ್ತೇವೆಂದರೂ ಅಕ್ಕಿ ಕೊಡುತ್ತಿಲ್ಲ: ಕೇಂದ್ರದ ವಿರುದ್ಧ ಹರಿಹಾಯ್ದ ಸಚಿವ ತಿಮ್ಮಾಪುರ

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಹಿಟ್ಲರ್ ಧೋರಣೆ ಎಂದ ಕೇಂದ್ರ ಸಚಿವ ಜೋಶಿಗೆ ಉತ್ತರಿಸಿದ ಸಚಿವರು, ಕೇಂದ್ರ ಮಂತ್ರಿಗಳಿಗೆ ಅವ್ರ ಖಾತೆಯಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿಲ್ಲ. ಚಹಾ ಕುಡಿಯಲು ಮಾತ್ರ ಕೇಂದ್ರ ಮಂತ್ರಿಗಳು ಹೋಗುತ್ತಾರೆ. ಮೋದಿಯವರ ಹಿಟ್ಲರ್ ಧೋರಣೆ ಸರಿಮಾಡಿ, ನಮ್ಮ ಬಗ್ಗೆ ಮತಾಡಲಿ‌ ಎಂದು ಟಾಂಗ್ ನೀಡದರು. ಕಾಂಗ್ರೆಸ್ ಸ್ಕ್ಯಾಮ್ ಗಳ ಸರ್ಕಾರ ಎಂದ ಸಿ.ಟಿ.ರವಿ ಹೇಳಿಕೆಗೆ, ಸಿ.ಟಿ.ರವಿಗೆ ಏನು ಗೊತ್ತಿದೆ ಎಂದು ಸಚಿವ ತಿಪ್ಪಾಪುರ ವ್ಯಂಗ್ಯವಾಡಿದರು. ಸ್ಕ್ಯಾಮ್ ಗಳು ಬಿಜೆಪಿಯಲ್ಲಿದೆ, ಸ್ಕೀಮ್ ಗಳು ಕಾಂಗ್ರೆಸ್ ನಲ್ಲಿದೆ. 

ಕೇಂದ್ರದ ವಿರುದ್ಧ ಪ್ರತಿಭಟಿಸಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ ಎಂದ ಮಾಜಿ ಸಿಎಂ ಹೆಚ್ ಡಿಕೆಗೆ, ಪಾಪ ಕುಮಾರಸ್ವಾಮಿಗೆ ಬಡವರ ಬಗ್ಗೆ ಅವರಿಗೆ ಗೊತ್ತಿಲ್ಲ. ಮಾತಾಡಬೇಕೆಂದು ಅವರೆಲ್ಲಾ ಮಾತಾಡುತ್ತಿದ್ದಾರೆ. ಈ ಎಲ್ಲಾ ಗ್ಯಾರಂಟಿಗಳಿಂದ ಏನಾಗುತ್ತೇನೋ ಎಂಬಂತಾಗಿದೆ. ಜನ ನಮ್ಮನ್ನು ಓಡಿಸುತ್ತಾರೇನೋ ಎಂಬ ಭೀತಿ ಅವರಲ್ಲಿ ಮೂಡಿದೆ ಎಂದರು.

ಅಕ್ಕಿ ಕೊಡದ ಬಿಜೆಪಿಗೆ ಜನ ಸುಮ್ಮನೆ ಬಿಡೋದಿಲ್ಲ. ಅಮಿತ್ ಶಾ ಅವರನ್ನು ಸಿಎಂ ಸಿದ್ಧರಾಮಯ್ಯ ಭೇಟಿ ಆಗಿದ್ದಾರೆ. ಅಮಿತ್ ಶಾ ಭೇಟಿಯ ಫಲಿತಾಂಶ ಇನ್ನೂ ನಮಗೆ ಗೊತ್ತಾಗಿಲ್ಲ. ಕೇಂದ್ರ ಸರ್ಕಾರದ ನೀತಿಯಿಂದ ಅನ್ನಭಾಗ್ಯ ತಡವಾಗಿದೆ. ನಾವು ಸಮ್ಮನಿರಲ್ಲ, ಎಲ್ಲಿಂದಾದರೂ ಅಕ್ಕಿ ತಂದು ಕೊಡುತ್ತೇವೆ. ವಾಣಿಜ್ಯೋದ್ಯಮಿಗಳಿಂದ ಪ್ರತಿಭಟನೆ ಸರ್ಕಾರ ಗಮನಿಸುತ್ತಿದೆ. ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಸೂಕ್ತ ಕ್ರಮ.

ಕರ್ನಾಟಕದಲ್ಲಿ ಮದ್ಯದ ದರ ಹೆಚ್ಚಳ? ಸಚಿವ ತಿಮ್ಮಾಪುರ ಹೇಳಿದ್ದಿಷ್ಟು

ಸದ್ಯಕ್ಕೆ ಮದ್ಯದ ದರ ಏರಿಕೆ ಇಲ್ಲ, ಏರಿಕೆ ಮಾಡಿದರೆ ತಿಳಿಸುವೆ. ಸರ್ಕಾರಗಳು ಆರ್ಥಿಕತೆ ನಿಭಾಯಿಸುವ ಬಗ್ಗೆ ಚರ್ಚಿಸಿ ದರ ನಿಗದಿ ಕ್ರಮ. ಅಬಕಾರಿ ಇಲಾಖೆಯಲ್ಲಿ ಈವರೆಗೆ ಯಾವೊಂದು ವರ್ಗಾವಣೆ ಆಗಿಲ್ಲ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ವರ್ಗಾವಣೆ ದಂಧೆ ಎಂಬ ಆರೋಪಕ್ಕೆ ಉತ್ತರಿಸಲ್ಲ ಎಂದರು.

Latest Videos
Follow Us:
Download App:
  • android
  • ios