ನವದಹೆಲಿ (ನ.09): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚಿಂತನೆ ಬಿಜೆಪಿ ಮುಂದಿಲ್ಲ, ಪಕ್ಷದ ಸಂಸದೀಯ ಮಂಡಳಿ ಮುಂದೆ ಈ ವಿಚಾರ ಚರ್ಚೆಯಲ್ಲೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಆಡಳಿತ ವ್ಯವಸ್ಥೆ ಶಿಥಿಲ ಮಾಡುವ ದುರುದ್ದೇಶದಿಂದಲೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನವದೆಹಲಿಯಲ್ಲಿ  ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರ ಈಗ ಯಾಕೆ ಚರ್ಚೆಗೆ ಬರುತ್ತಿವೆಯೋ ಗೊತ್ತಿಲ್ಲ. ಪ್ರತಿಪಕ್ಷ ನಾಯಕ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದರು. 

ಸಿಎಂ ಭೇಟಿಗೂ ಮೊದಲೇ ಸಚಿವ ಸ್ಥಾನಕ್ಕಾಗಿ ದಿಲ್ಲಿಯಲ್ಲಿ ಲಾಬಿ ಶುರು! ..

ನಮ್ಮ ಪಕ್ಷದ ಮಾಹಿತಿ ಅವರಿಗೆ ಹೇಗೆ ಗೊತ್ತು ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬದಲಾವಣೆ ಸುದ್ದಿಗೆ ಹುಟ್ಟಿಗೆ ಕಾರಣವಾಗಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕರೆದು ಮಾತನಾಡಿದ್ದಾರೆ. ಆಂತಂರಿಕವಾಗಿ ಏನು ಎಚ್ಚರಿಕೆ ನೀಡಬೇಕೋ ಅದನ್ನು ನೀಡಲಾಗಿದೆ ಎಂದು ಸಿ.ಟಿ.ರವಿ ತಿಳಿಸಿದರು.