: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಸಿ.ಟಿ. ರವಿ ಅವರು ನೀರಿನಿಂದ ಹೊರ ತೆಗೆದ ಮೀನಿನಂತೆ ಆಗಿದ್ದಾರೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಚಿಕ್ಕಮಗಳೂರು, (ಮೇ 30) : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಸಿ.ಟಿ. ರವಿ ಅವರು ನೀರಿನಿಂದ ಹೊರ ತೆಗೆದ ಮೀನಿನಂತೆ ಆಗಿದ್ದಾರೆ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಕಳೆದುಕೊಂಡಿದ್ದರಿಂದ ಅವರು ವಿಲವಿಲ ಒದ್ದಾಡುತ್ತಿದ್ದಾರೆ. 10 ವರ್ಷಗಳಿಂದ ಅಂಡಾ-ಬಂಡಾ ಅಧಿಕಾರದಲ್ಲಿ ಇದ್ದರು. ಆಕಾಶದ ಮೇಲೆ ಹಾರಾಡುತ್ತಿದ್ದರು. ಭೂಮಿ ಮೇಲೆ ನಡೆಯುತ್ತಿರಲಿಲ್ಲ. ಬಡವರ, ದೀನ ದಲಿತರ, ಅಲ್ಪಸಂಖ್ಯಾತರ ಬಗ್ಗೆ ನೆನಪು ಇರಲಿಲ್ಲ ಎಂದರು.

ನನಗೆ ಪತ್ರ ಬರೆದಿದ್ದಾರೆ, ಅವರ ಪತ್ರದ ಬಗ್ಗೆ ಖುಷಿ ಇದೆ. 19 ವರ್ಷಗಳ ಬಳಿಕ ಜನರ ಬಗ್ಗೆ ಕಾಳಜಿ ಬಂದಿರೋದು ಸಂತೋಷ ಎಂದ ಅವರು, ಅವರಿಗೆ ಸಾಮಾನ್ಯ ಜ್ಞಾನ ಇಲ್ಲ, ಜಿಲ್ಲಾ ಡಳಿತವನ್ನು ದುರ್ಬಳಕೆ ಮಾಡಿಕೊಂಡು, ಚುನಾವಣೆ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರಿಗೆ ಕರೆದು ಹೆದರಿಸಿದ್ದಾರೆ. ನಾವು ಆ ರೀತಿ ಹೆದರಿಕೆ ಹಾಕಿದೀನಾ, ಅವರಿಗೆ ಓಟ್‌ ಹಾಕಿದವರಿಗೆ ದೂರವಾಣಿಯಲ್ಲಿ ಮಾತನಾಡಿದಿನಾ ಎಂದು ಪ್ರಶ್ನಿಸಿದರು.

ಅಭಿವೃದ್ಧಿ ಕೆಲಸ ಚೆನ್ನಾಗಿದ್ರೆ ಯಾರೇ ಕಂಟ್ರಾಕ್ಟರ್‌ ಆಗಿದ್ರು ನನ್ನ ತಕರಾರಿಲ್ಲ. ಕಾಮಗಾರಿ ಚೆನ್ನಾಗಿಲ್ಲ ಅಂದ್ರೆ ಸಂಬಂಧಿಕರೇ ಆದರೂ ಒಪ್ಪಲ್ಲ. ಎಷ್ಟೇ ದೊಡ್ಡ ವ್ಯಕ್ತಿಯಾದ್ರು ಬಿಡಲ್ಲ, ಅದಕ್ಕೆ ಅಧಿಕಾರಿಗಳು ಉತ್ತರ ನೀಡುತ್ತಾರೆ ಎಂದರು.

ಸಿದ್ದರಾಮಯ್ಯ ಸಿಎಂ ಆಗ್ತಿದ್ದಂತೆ ಅರ್ಬನ್ ನಕ್ಸಲ್ ಚಟುವಟಿಕೆ ಆರಂಭ: ಸಿಟಿ ರವಿ