ಬೆಂಗಳೂರು[ಜ. 23]  ಆಪರೇಷನ್ ಕಮಲದ ಭೀತಿ ಹಾಗೂ ಕಾಂಗ್ರೆಸ್ ಶಾಸಕರ ಮಾರಾಮಾರಿ ಗೊಂದಲದ ನಡುವೆ  ದೋಸ್ತಿ ಸರ್ಕಾರ ಸಮನ್ವಯ ಸಮಿತಿ ಸಭೆ ನಡೆಯಲಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಂಡೆ ಬಿಜೆಪಿ ಎದುರಿಸಲು ಸಿದ್ಧವಾಗಿವೆ ಎನ್ನಲಾಗಿದ್ದು ಈ ಸಭೆಯಲ್ಲಿ ಸೀಟು ಹಂಚಿಕೆ ಅಂತಿಮ ರೂಪ ಪಡೆದುಕೊಳ್ಳಲಿದೆ. ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಮೊದಲು 12 ಸ್ಥಾನ ಬಿಟ್ಟುಕೊಡಲು ಕೇಳಿದ್ದರು, ನಂತರ 8 ಸ್ಥಾನ ಎಂದಿದ್ದರು. ಸಭೆಯಲ್ಲಿ ಶೇಕಡಾವಾರು ಲೆಕ್ಕ ಅಂತಿಮವಾಗಲಿದೆ.

ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ನಾಳೆ ಸಂಜೆ ಸಭೆ ಕರೆದಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಭಾಗವಹಿಸಲಿದ್ದಾರೆ. ಹಾಗಾದರೆ ಸಮನ್ವಯ ಸಮಿತಿಯಲ್ಲಿ ಏನು ಚರ್ಚೆ ಆಗಬಹುದು?

* ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಲೋಕಸಭಾ ಚುನಾವಣೆ ಸೀಟು ಹಂಚಿಕೆ

* ಲೋಕಸಭಾ ಚುನಾವಣೆ ಹಿನ್ನೆಲೆ ಇಟ್ಟುಕೊಂಡು ಜನಪ್ರಿಯ ಬಜೆಟ್ ಮಂಡನೆ

* ಶಾಸಕರ ನಡುವಿನ ಗಲಾಟೆ ಮತ್ತು ಆನಂದ್ ಸಿಂಗ್ ಹಾಗೂ ಗಣೇಶ್ ಮನವೊಲಿಕೆ

* ಅಸಮಾಧಾನಿತ ಶಾಸಕರ ಕ್ಷೇತ್ರಕ್ಕೆ ಅನುದಾನ ಹಂಚಿಕೆ