Asianet Suvarna News Asianet Suvarna News

ಕಾಂಗ್ರೆಸ್‌ ಸರ್ಕಾರವನ್ನು ಹಿಡಿತದಲ್ಲಿಡಲು ಹೋರಾಟ ಅಗತ್ಯ: ಕ್ಲಿಫ್ಟನ್ ರೊಜೋರಿಯೋ

ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ಕಾಯ್ದೆ ಮತ್ತು ಮತಾಂತರ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಬಿಜೆಪಿ ತಂದಿರುವ ಜನವಿರೋಧಿ ಕಾನೂನುಗಳನ್ನು ಕಾಂಗ್ರೆಸ್ ಸರ್ಕಾರ ಹಿಮ್ಮೆಟ್ಟಿಸುವತ್ತ ಗಮನಹರಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ ರೋಜೋರಿಯೋ 
 

CPI Leader Clifton Rojorio Slams Karnataka Congress Government grg
Author
First Published Dec 12, 2023, 11:15 PM IST

ಸಿಂಧನೂರು(ಡಿ.12):  ಬಿಜೆಪಿ ಮತ್ತು ಆರ್‌ಎಸ್ಎಸ್ ವಿರುದ್ಧದ ಸೈದ್ಧಾಂತಿಕ, ರಾಜಕೀಯ ಮತ್ತು ಸಾಂಸ್ಥಿಕ ಹೋರಾಟ ಮುಂದುವರಿಸುತ್ತಲೆ, ಕಾಂಗ್ರೆಸ್ ಸರ್ಕಾರವನ್ನು ಹಿಡಿತದಲ್ಲಿಡಲು ನಮ್ಮ ಪಕ್ಷ ಜನರ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟದ ಶಕ್ತಿಯಾಗಿ ಹೊರಹೊಮ್ಮಬೇಕಿದೆ ಎಂದು ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಜೋರಿಯೋ ಹೇಳಿದರು.

ನಗರದ ಎಪಿಎಂಸಿಯ ರೈತ ಭವನದಲ್ಲಿ ಇತ್ತೀಚೆಗೆ ನಡೆದ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ೨ನೇ ರಾಜ್ಯ ಸಮ್ಮೇಳನದ ಪ್ರತಿನಿಧಿಗಳ ಅಧಿವೇಶನದಲ್ಲಿ ರಾಜ್ಯ ಕಾರ್ಯದರ್ಶಿಯನ್ನಾಗಿ ಕ್ಲಿಫ್ಟನ್ ಡಿ ರೊಜೋರಿಯೊ ಎರಡನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಈ ವೇಳೆ ಅವರು ಮಾತನಾಡಿದರು.

ಮೋದಿ ಸರ್ಕಾರದಿಂದ ಫ್ಯಾಸಿಸಂ ದಾಳಿ: ದೀಪಂಕರ್ ಭಟ್ಟಾಚಾರ್ಯ

ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋಹತ್ಯೆ ಕಾಯ್ದೆ ಮತ್ತು ಮತಾಂತರ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಬಿಜೆಪಿ ತಂದಿರುವ ಜನವಿರೋಧಿ ಕಾನೂನುಗಳನ್ನು ಕಾಂಗ್ರೆಸ್ ಸರ್ಕಾರ ಹಿಮ್ಮೆಟ್ಟಿಸುವತ್ತ ಗಮನಹರಿಸಬೇಕು ಎಂದು ಕಾರ್ಯಕರ್ತರಿಗೆ ರೋಜೋರಿಯೋ ಕರೆ ನೀಡಿದರು.

ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಬೋಸರಾಜ

ಪಾಲಿಟ್ ಬ್ಯುರೋ ಸದಸ್ಯ ವಿ.ಶಂಕರ್, ವೀಕ್ಷಕರಾಗಿ ಸಮ್ಮೇಳನಕ್ಕೆ ಆಗಮಿಸಿದ್ದ ಕೇಂದ್ರ ಸಮಿತಿ ಸದಸ್ಯ ಚಂದ್ರಮೋಹನ್ ಮಾತನಾಡಿದರು. ಎರಡು ದಿನಗಳ ಕಾಲದ ಸಮ್ಮೇಳನದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ವಿಜಯನಗರ, ರಾಯಚೂರು, ಕೊಪ್ಪಳ, ಕೊಡಗು, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ಕೋಲಾರ, ಚಿತ್ರದುರ್ಗ, ಕಲಬುರಗಿ, ದಾವಣಗೆರೆ ಜಿಲ್ಲೆಗಳಿಂದ ೧೮೦ಕ್ಕೂ ಪ್ರತಿನಿಧಿಗಳು ಭಾಗವಹಿಸಿದ್ದರು. ಪಕ್ಷದ ದಸ್ತಾವೇಜುಗಳು ಹಾಗೂ ಮುಂದಿನ ಮೂರು ವರ್ಷಗಳಲ್ಲಿ ಮಾಡಬೇಕಾದ ಕೆಲಸಗಳ ಕುರಿತು ಚರ್ಚೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಸೌತ್ ಏಷಿಯಾ ಸಾಲಿಡಾರಿಟಿ ಗ್ರೂಪ್‌ನ ಕಲ್ಪನಾ, ಐಪ್ವಾ ರಾಷ್ಟ್ರಾಧ್ಯಕ್ಷೆ ರತಿರಾವ್, ಕೇಂದ್ರ ಸಮಿತಿ ಸದಸ್ಯೆ ಮೈತ್ರೇಯಿ ಕೃಷ್ಣನ್, ರಾಜ್ಯ ಸಮಿತಿ ಸದಸ್ಯರಾದ ಪಿಆರ್‌ಎಸ್‌ ಮಣಿ, ಪಿ.ಪಿ.ಅಪ್ಪಣ್ಣ, ನಿರ್ಮಲಾ.ಎಂ, ನಾಗರಾಜ್ ಪೂಜಾರ್, ಪರಸಪ್ಪ, ವಿಜಯ್ ದೊರೆರಾಜು, ಲೇಖಾ, ಮೋಹನ್ ಪ್ರಭಾಕರ, ಅಶೋಕಗೌಡ, ರಾಮಣ್ಣ ವಿಟ್ಲ, ಚನ್ನಯ್ಯ, ಅರಿಂದಮ್, ಸೇರಿದಂತೆ ಇನ್ನಿತರರಿದ್ದರು.

Follow Us:
Download App:
  • android
  • ios