ಮೋದಿ ಸರ್ಕಾರದಿಂದ ಫ್ಯಾಸಿಸಂ ದಾಳಿ: ದೀಪಂಕರ್ ಭಟ್ಟಾಚಾರ್ಯ

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಈ ದೇಶ ಹಿಂದೂರಾಷ್ಟ್ರ ಏನಾದರೂ ಆದರೆ ಅಂತಹ ದುರಂತ ಬೇರೊಂದಿಲ್ಲ ಎಂದು ಹೇಳಿದ್ದಾರೆ. ಆದರೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ಮತ್ತು ಆರ್‌ಎಸ್ಎಸ್ ದೇಶವನ್ನು ಹಿಂದೂರಾಷ್ಟ್ರ ಮಾಡಲು ಹೊರಟಿವೆ. ಸಮಾಜವನ್ನು ಒಂದು ಗೂಡಿಸುವುದಕ್ಕಿಂತ ವಿಭಜಿಸುವ ಕೃತ್ಯ ಯಥೇಚ್ಛವಾಗಿ ನಡೆಯುತ್ತಿದೆ ಎಂದ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ
 

Dipankar Bhattacharya Slams PM Narendra Modi Government grg

ಸಿಂಧನೂರು(ಡಿ.10):  ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದೇಶದ ಜನರ ಮೇಲೆ ಫ್ಯಾಸಿಸಂ ದಾಳಿ ನಡೆಸುತ್ತಿದೆ. ಇದಕ್ಕೆ ಧೃತಿಗೆಡದೆ ಸಮರ್ಥವಾಗಿ ಪ್ರತಿರೋಧ ಒಡ್ಡುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯ ಉಳಿಸಲು ಸಾರ್ವಜನಿಕರು ಪಣತೊಡಬೇಕಿದೆ ಎಂದು ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಹೇಳಿದರು. ಸ್ಥಳೀಯ ಟೌನ್ ಹಾಲ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ೨ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಈ ದೇಶ ಹಿಂದೂರಾಷ್ಟ್ರ ಏನಾದರೂ ಆದರೆ ಅಂತಹ ದುರಂತ ಬೇರೊಂದಿಲ್ಲ ಎಂದು ಹೇಳಿದ್ದಾರೆ. ಆದರೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ಮತ್ತು ಆರ್‌ಎಸ್ಎಸ್ ದೇಶವನ್ನು ಹಿಂದೂರಾಷ್ಟ್ರ ಮಾಡಲು ಹೊರಟಿವೆ. ಸಮಾಜವನ್ನು ಒಂದು ಗೂಡಿಸುವುದಕ್ಕಿಂತ ವಿಭಜಿಸುವ ಕೃತ್ಯ ಯಥೇಚ್ಛವಾಗಿ ನಡೆಯುತ್ತಿದೆ ಎಂದರು.

ವರ್ಗಾವಣೆಗಾಗಿ ಹಣ ಪಡೆದಿದ್ದರೆ ದಾಖಲೆ ತೋರಿಸಲಿ: ಯತೀಂದ್ರ ಸಿದ್ದರಾಮಯ್ಯ

ಎರಡು ನೂರು ವರ್ಷ ದೇಶ ಆಳಿದ ಬ್ರಿಟೀಷರನ್ನು ತ್ಯಾಗ, ಬಲಿದಾನಗಳ ಮೂಲಕ ಈ ದೇಶದ ಸ್ವಾತಂತ್ರ್ಯ ಸೇನಾನಿಗಳು ತೊಲಗಿಸಿದ್ದಾರೆ. ಆದರೆ, ಇಂದು ದೇಶದ ಆಡಳಿತ ಚುಕ್ಕಾಣಿ ಹಿಡಿದವರು ಸಾಮ್ರಾಜ್ಯ ಶಾಹಿಗಳೊಂದಿಗೆ ಶಾಮೀಲಾಗುವ ಮೂಲಕ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಆಪಾದಿಸಿದರು.

ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಜಾರಿಯೋ, ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ, ಐಪ್ವಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ರತಿರಾವ್ ಮಾತನಾಡಿದರು.
ಈ ವೇಳೆ ಸಿಪಿಐ (ಎಂಎಲ್) ಲಿಬರೇಶನ್ ಪಾಲಿಟ್ ಬ್ಯುರೋ ಸದಸ್ಯ ವಿ.ಶಂಕರ್, ರಾಜ್ಯ ಸಮಿತಿ ಸದಸ್ಯರಾದ ಪಿ.ಆರ್.ಎಸ್ ಮಣಿ, ಪಿ.ಪಿ.ಅಪ್ಪಣ್ಣ, ನಿರ್ಮಲಾ.ಎಂ. ಸೇರಿದಂತೆ ಇನ್ನಿತರರಿದ್ದರು. ನಾಗರಾಜ್ ಪೂಜಾರ್ ಸಮಾವೇಶ ನಿರ್ವಹಿಸಿದರು.

Latest Videos
Follow Us:
Download App:
  • android
  • ios