ಮತ್ತೆ ಮಂತ್ರಿ ಸ್ಥಾನ, ಸಿಎಂ ಏನು ಹೇಳ್ತಾರೋ ಅದೇ ಫೈನಲ್ ಎಂದ ಸಿಪಿ ಯೋಗೇಶ್ವರ್

ಸಚಿವ ಸಂಪುಟ ವಿಸ್ತರಣೆ ವಿಚಾರ ಮತ್ತು  ಮತ್ತೆ ಮಂತ್ರಿ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ  ಎಂಎಲ್ಸಿ ಸಿಪಿ ಯೋಗೇಶ್ವರ್ ಅವರು ಮುಖ್ಯಮಂತ್ರಿಗಳು ಏನು ಹೇಳ್ತಾರೋ ಅದೇ ಫೈನಲ್ ಸಂಕ್ರಾಂತಿ ನಂತರ ಬದಲಾವಣೆ ಮಾಡಬೇಕು ಅಂತಾ ಇತ್ತು. ಸಿಎಂ ಅವರಿಗೂ ಕೂಡ ಆಸೆ ಇದೆ. ಪರಿಪೂರ್ಣವಾಗಿ ಸಚಿವ ಸಂಪುಟ ಆಗಿಲ್ಲ ಅನ್ನೋದು ಅವರಿಗೆ ಗೊತ್ತಿದೆ ಎಂದಿದ್ದಾರೆ.

CP Yogeshwar statement about  CM Basavaraj Bommai Cabinet Expansion gow

ರಾಮನಗರ (ಜ.15): ಸಚಿವ ಸಂಪುಟ ವಿಸ್ತರಣೆ ವಿಚಾರ ಮತ್ತು  ಮತ್ತೆ ಮಂತ್ರಿ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದಲ್ಲಿ ಮಾತನಾಡಿರುವ ಎಂಎಲ್ಸಿ ಸಿಪಿ ಯೋಗೇಶ್ವರ್ ಅವರು ಮುಖ್ಯಮಂತ್ರಿಗಳು ಏನು ಹೇಳ್ತಾರೋ ಅದೇ ಫೈನಲ್ ಸಂಕ್ರಾಂತಿ ನಂತರ ಬದಲಾವಣೆ ಮಾಡಬೇಕು ಅಂತಾ ಇತ್ತು. ಸಿಎಂ ಅವರಿಗೂ ಕೂಡ ಆಸೆ ಇದೆ. ಪರಿಪೂರ್ಣವಾಗಿ ಸಚಿವ ಸಂಪುಟ ಆಗಿಲ್ಲ ಅನ್ನೋದು ಅವರಿಗೆ ಗೊತ್ತಿದೆ. ಬಹಳ ದಿನಗಳಿಂದ ಪ್ರಯತ್ನ ನಡೀತಿತ್ತು. ಅಂತಿಮ ಪ್ರಯತ್ನ ನಡೀತಿದೆ. ನೋಡೋಣ ಅದು ಪಕ್ಷದ ವರಷ್ಠರಿಗೆ ಬಿಟ್ಟ ತೀರ್ಮಾನ. ಸಂಕ್ರಾಂತಿ ನಂತರ ಪ್ರಾಕೃತಿಕವಾಗಿ ಬದಲಾವಣೆ ಆಗೋದು ಸಹಜ. ಎಲ್ಲಾ ಬದಲಾವಣೆಗಳೂ ಆಗಬೇಕು. ಪಕ್ಷದಲ್ಲಿ ಏನಾದರೂ ಒಂದಷ್ಟು ಬದಲಾವಣೆ ಆಗಬೇಕಿದೆ ಎಂದಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಸಚಿವ ಸ್ಥಾನ ಸಿಕ್ಕರೆ ಪಕ್ಷಕ್ಕೆ ಬಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ,  ಪಕ್ಷದಲ್ಲಿ ಎಲ್ಲಾ ವರಿಷ್ಠರಿಗೂ ಮನವಿ ಮಾಡಲಾಗಿದೆ. ಇಷ್ಟು ವರ್ಷಗಳ ಕಾಲ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಪಕ್ಷಕ್ಕೆ ಹಿನ್ನಡೆ ಆಗಿತ್ತು. ಇದೆಲ್ಲಾ ಪಕ್ಷದ ವರಿಷ್ಠರ ಗಮನಕ್ಕೆ ಹೋಗಿದೆ. ದೀಪದ ಕೆಳಗೆ ಕತ್ತಲು ಎಂಬಂತೆ ನಾವು ಯಾಕೆ ಬದಲಾವಣೆ ಮಾಡಬಾರದು ಎಂದು ಚಿಂತನೆ ಮಾಡಿದ್ದೆವು. ಬೆಂಗಳೂರು, ಬೆಂಗಳೂರು ಸುತ್ತಾ ಯಾಕೆ ಬಿಜೆಪಿ ಬೆಳೆದಿಲ್ಲ ಎಂಬುದರ  ಅರಿತು ಪಕ್ಷಕ್ಕೆ ಗೊತ್ತಾಗಿದೆ. ನಾನು ಹತ್ತಾರು ಸಲ ಪಕ್ಷದಲ್ಲಿ‌ಈ ಬಗ್ಗೆ ಆಕ್ಷೇಪಣೆ ಎತ್ತಿದ್ದೇನೆ. ಹೊಂದಾಣಿಕೆ ರಾಜಕೀಯ ಆಗ್ತಿದೆ ಎಂದು ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಹೊತ್ತು ನೀಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಸೀಟ್ ಗೆಲ್ಲುತ್ತೇವೆ. 

ಇನ್ನು ಅಮಿತ್ ಶಾ ಮಂಡ್ಯ ಭೇಟಿ ನಂತರ ಬಿಜೆಪಿ ಸಂಘಟನೆ ಹೆಚ್ಚಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಪಿವೈ ರಾಮನಗರದಲ್ಲೂ ಕೂಡ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಇನ್ನೂ ಕಾಲವಕಾಶ ಇದೆ. ರಾಮನಗರವನ್ನೂ ಸ್ಪರ್ಧಾತ್ಮಕವಾಗಿ ತೆಗೆದುಕೊಂಡಿದ್ದೇವೆ. ಜಿಲ್ಲೆಯಲ್ಲಿ ‌ಮೂರು ಸ್ಥಾನಗಳನ್ನು ನಾವು ಗೆದ್ದೆ ಗೆಲ್ಲುತ್ತೇವೆ ಎಂದಿದ್ದಾರೆ. 

ಸಂಸದೆ ಸುಮಲತಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ವರಿಷ್ಠರ ಮಟ್ಟದಲ್ಲಿ ಈ ಬಗ್ಗೆ ಮಾತನಾಡಿದ್ದೇವೆ. ಸುಮಲತಾ ಅವರನ್ನು ಪಕ್ಷಕ್ಕೆ  ಸೇರಿಸಿಕೊಳ್ಳಬೇಕೆಂದು ಈ ಭಾಗದ ಮುಖಂಡರೆಲ್ಲ ಮನವಿ ಮಾಡಿದ್ದೇವೆ. ಇನ್ನೇನು ತೀರ್ಮಾನ ಮಾಡಲಾಗುತ್ತದೆ. ಸುಮಲತಾ ಅವರಿಗೂ ನಮ್ಮ ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದೇವೆ.  ಕಾಂಗ್ರೆಸ್, ಜೆಡಿಎಸ್ ಪಕ್ಷದ ದ್ವಂದ ನಿಲುವಿನ ಬಗ್ಗೆ ಸುಮಲತಾ ಅವರಿಗೂ ಗೊತ್ತಿದೆ. ಬಿಜೆಪಿ ಅವಧಿಯಲ್ಲಿ ಮಂಡ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದೆ ಎಂದರು.

ಇನ್ನು  ಆಡಿಯೋ ಲೀಕ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ನಾನು ಅಧಿಕೃತವಾಗಿ ಎಲ್ಲೂ ಮಾತನಾಡಿಲ್ಲ. ಖಾಸಗಿಯಾಗಿ ಮಾತನಾಡಿರುವ ವಿಚಾರ ಇರಬಹುದು. ಅದು ನನ್ನದೇ ವಾಯ್ಸ್ ಎಂಬುದು ಅನ್ನೋದು ಗೊತ್ತಿಲ್ಲ. ವೈಯಕ್ತಿಕವಾಗಿ, ಸ್ವಾಭಾವಿಕವಾಗಿ ಮಾತನಾಡಿರೋದನ್ನು ಮಾಧ್ಯಮಗಳು ಬಿತ್ತರಿಸಿವೆ. ನನ್ನ ವಿಚಾರ ಮಾಧ್ಯಮದ ಮುಂದೆ ಹಿಂದೆ ಒಂದೇ ಇರುತ್ತದೆ. ಏನೇ ಇದ್ರೂ ನಾನು ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ್ದೇನೆ. ಗ್ರಾಮೀಣ ಭಾಷೆಗಳಲ್ಲಿ ಕೆಲವೊಂದು ವಿಚಾರಗಳನ್ನು‌ ಮಾತಾನಾಡಿದ್ದೇನೆ. ಏನೇ ಇದ್ರೂ ನನ್ನ ಮನಸ್ಸಿನಲ್ಲಿ ಬಿಜೆಪಿ‌ ಪಕ್ಷ ಸಂಘಟನೆ ಮಾಡೋದು ಅಷ್ಟೇ ಆ ದೃಷ್ಟಿಯಲ್ಲಿ ನಾನು ಮಾತನಾಡಿರಬಹುದು ಅಷ್ಟೇ. ಯಾವುದೇ ದುರುದ್ದೇಶದಿಂದ ಮಾತನಾಡಿಲ್ಲ ಎಂದರು.

ಸಿ.ಪಿ. ಯೋಗೇಶ್ವರದ್ದು ಎನ್ನಲಾದ ಆಡಿಯೋ ವೈರಲ್: ವಿಪಕ್ಷಗಳಿಂದ ಭಾರಿ ತರಾಟೆ

 ಸ್ವಪಕ್ಷದಲ್ಲೇ ಷಡ್ಯಂತ್ರ ವಿಚಾರಕ್ಕೆ ಸಂಬಂಧಿಸಿದ ಮಾತನಾಡಿದ ಯೋಗೆಶ್ವರ್  ನೋಡ್ರಿ ಇದು ರಾಜಕೀಯ ಎಲ್ಲಾ ಪಕ್ಷಗಳಲ್ಲೂ ಷಡ್ಯಂತ್ರಗಳು ಇರುತ್ತವೆ. ಚಾಣಕ್ಯನ ಕಾಲದಿಂದಲೂ ಇದೆಲ್ಲವೂ ನಡೆಯುತ್ತಿದೆ. ನಮ್ಮ ಉದ್ದೇಶ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡೋದು ಅಷ್ಟೇ. ಷಡ್ಯಂತ್ರ ಅನ್ನೋದು ರಾಜಕೀಯದಲ್ಲಿ ಕಾಮನ್ ಅದೆಲ್ಲದಕ್ಕೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಸಿಪಿ ಯೋಗೇಶ್ವರ್‌ ಆಡಿಯೋ: ಗೇಲಿ ಮಾಡಿದ ಕಾಂಗ್ರೆಸ್‌

ಇನ್ನು ಚನ್ನಪಟ್ಟಣ ಸಿಪಿ ಯೋಗೆಶ್ವರ್ ಅವರ ಕ್ಷೇತ್ರ ಅಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಿದ್ದಾರೆ. ನನ್ನ ಕ್ಷೇತ್ರಕ್ಕೆ ಬಂದ್ರೆ ನಾನು ಸ್ಪರ್ಧೆ ಮಾಡ್ತೇನೆ ಎಂಬ ಸಚಿವ ಅಶ್ವಥ್ ನಾರಾಯಣ ಹೇಳಿಕೆಗೆ ಹೌದು ಅವರು ಹೇಳಿರೋದು ಸತ್ಯ. ಕುಮಾರಸ್ವಾಮಿ ಒಂದು ರೀತಿ ವಲಸೆ ಹಕ್ಕಿ ಇದ್ದ ಹಾಗೆ. ಅವರಿಗೆ ಪರ್ಮನೆಂಟ್ ಕ್ಷೇತ್ರ ಅಂತಾ ಯಾವುದು ಇಲ್. ಅವರು ಕಮಿಟ್ಮೆಂಟ್ ರಾಜಕಾರಣ ಮಾಡೊದಿಲ್ಲ. ಅವರು ಚುನಾವಣೆ ವೇಳೆ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡ್ತಾರೆ. ಈ ಹಿಂದೆ ಸಾತನೂರು, ಕನಕಪುರ, ರಾಮನಗರ, ಚಿಕ್ಕಬಳ್ಳಾಪುರ, ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾಳೆ ಬೇಕಿದ್ರೆ ಮಂಡ್ಯದಲ್ಲೂ ಸ್ಪರ್ಧೆ ಮಾಡ್ತಾರೆ. ರಾಮನಗರದಲ್ಲಿ ಮಗನನ್ನು ಬೆಳೆಸಬೇಕು ಅಂತಾ ಚನ್ನಪಟ್ಟಣಕ್ಕೆ ಬಂದಿದ್ದಾರೆ. ನೋಡೊಣ ಮುಂದಿನ ದಿನಗಳಲ್ಲಿ ಏನು ಆಗುತ್ತದೆ ಅಂತಾ ಎಂದರು

Latest Videos
Follow Us:
Download App:
  • android
  • ios