ಬೆಂಗಳೂರು (ಫೆ.5): ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ನಾಳೆ (ಗುರುವಾರ) ಮುಹೂರ್ತ ನಿಗದಿಯಾಗಿದೆ. ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಕ್ಷಣಗಳಣನೇ ಆರಂಭವಾಗಿದೆ.

"

ಆದರೂ ಸಂಪುಟ ವಿಸ್ತರಣೆ ಕಸರತ್ತು ಪೂರ್ಣಗೊಂಡಿಲ್ಲ. ಪಕ್ಷಾಂತರ ಮಾಡಿದವರೆಲ್ಲರೂ ಸಚಿವ ಸ್ಥಾನಕ್ಕಾಗಿ ಭಾರೀ ಲಾಭಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಮೂಲ ಬಿಜೆಪಿಗರೂ ಕೂಡ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದ್ದಾರೆ.

ಸಂಪುಟ ವಿಸ್ತರಣೆಯ ಬ್ರೇಕಿಂಗ್: ಭಾವೀ ಸಚಿವರಿಗೆ ರೆಡಿಯಾಗಿ ನಿಂತಿವೆ ಕಾರುಗಳು

 ಮಂತ್ರಿಗಿರಿಗಾಗಿ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಮನೆಗೆ ನಿತ್ಯ ಹಲವು ಬಿಜೆಪಿ ಶಾಸಕರು ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ ಬಿಎಸ್​ವೈ ಮಗ ಬಿ.ವೈ. ವಿಜಯೇಂದ್ರ ಮನೆಗೆ ಸಚಿವ ಸ್ಥಾನ ಆಕಾಂಕ್ಷಿಗಳು ಭೇಟಿ ನೀಡಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

ವಿಜಯೇಂದ್ರ ಮನೆಯಲ್ಲಿ ರಾಜಕೀಯ ಚರ್ಚೆ ಗರಿಗೆದರಿದೆ. ಸಿಎಂ ಮನೆಯಿಂದ ಒಂದೇ ಕಾರಿನಲ್ಲಿ ಸಿಪಿ ಯೋಗೆಶ್ವರ್ ಹಾಗೂ ವಿಜಯೆಂದ್ರ ಆಗಮಿಸಿದರು. ಇದರ ಜೊತೆ ಬಿಜೆಪಿ ಶಾಸಕ ಶಂಕರಗೌಡ ಪಾಟೀಲ್, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್, ಶಾಸಕ ಶಿವರಾಜ್ ಪಾಟೀಲ್, ಎಂಟಿಬಿ ನಾಗರಾಜ್ ಸೇರಿದಂತೆ ಹಲವರು ವಿಜಯೇಂದ್ರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಬಪ್ಪರೇ..! ಅಪ್ಪನ ಸರ್ಕಾರ ಉಳಿವಿಗೆ ಹೆಗಲು ಕೊಟ್ಟ ಮಕ್ಕಳು, ತಂದೆಗೆ ಗೆಲುವಿನ ಉಡುಗೊರೆ

ಅಷ್ಟೇ ಅಲ್ಲದೇ ರೇಣುಕಾಚಾರ್ಯ, ಎಂಟಿಬಿ ನಾಗರಾಜ್ ಸೇರಿದಂತೆ ಹಲವು ಬಿಜೆಪಿ ನಾಯಕರು ವಿಜಯೇಂದ್ರ ಮನೆ ಭೇಟಿ ನೀಡಿ ಸಚಿವ ಸ್ಥಾನದ ಬಗ್ಗೆ ಚರ್ಚೆ ನಡೆಸಿದರು.

ಈ ಮೊದಲು ಸಂಪುಟ ವಿಸ್ತರಣೆ ಪಟ್ಟಿಗೆ  ಗ್ರೀನ್ ಸಿಗ್ನಲ್ ಪಡೆಯಲು ಸ್ವತಃ ಯಡಿಯೂರಪ್ಪ ಅವರೇ ಹೈಕಮಾಂಡ್‌ ಭೇಟಿಗೆ ದೆಹಲಿಗೆ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಎಸ್​ವೈ ಮಗ ವಿಜಯೇಂದ್ರ ಅವರಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಆದಾಗ್ಯೂ, ರಾಜ್ಯ ಸರ್ಕಾರ ನಡೆಸಿದ ಸಾಕಷ್ಟು ಸಭೆಗಳಲ್ಲಿ ಅವರು ಪಾಲ್ಗೊಂಡ ಉದಹಾರಣೆಗಳು ಇವೆ.  

ರಾಜ್ಯದ ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ  ಮಾಡುತ್ತಿದ್ದಾರೆ ಎಂದು ಕೆಲ ಬಿಜೆಪಿ ನಾಯಕರು ಹೈಕಮಾಂಡ್​ಗೆ ಈ ಮೊದಲು ದೂರು ನೀಡಿದ್ದರು. ಸಂಪುಟ ವಿಸ್ತರಣೆಯಲ್ಲೂ ವಿಜಯೇಂದ್ರ ಪ್ರಾತ್ರವೇನು ಎನ್ನುವುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.