ಬೆಂಗಳೂರು (ಫೆಬ್ರವರಿ 05); ಬಹು ನಿರೀಕ್ಷೆಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ (ಗುರುವಾರ) ನಡೆಯಲಿದ್ದು,  13 ಶಾಸಕರಿಗೆ ಸಚಿವ ಸ್ಥಾನ ನೀಡುವುದು ಗ್ಯಾರಂಟಿ ಎಂದು ಬಿಎಸ್​ವೈ ಈಗಾಗಲೇ ತಿಳಿಸಿದ್ದಾರೆ. 

"

ಆದರೆ, ಆ 13 ಜನ ಯಾರು ಎಂಬುದು ಮಾತ್ರ ಈವರೆಗೆ ಫೈನಲ್ ಆಗಿಲ್ಲ.  10 ನೂತನ ಶಾಸಕರು ಸಂಪುಟಕ್ಕೆ ಸೇರುವುದು ಪಕ್ಕಾ ಆಗಿದೆ. ಸಿ.ಪಿ. ಯೋಗೇಶ್ವರ್ ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆಯಾದರೂ ಕೊನೆ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ಭಯ ಎಲ್ಲರಲ್ಲೂ ಇದೆ.

10+3 ಅಡಿಯಲ್ಲಿ ಸಂಪುಟ ವಿಸ್ತರಣೆ: ಗೆದ್ದ ಓರ್ವ ಶಾಸಕನಿಗಿಲ್ಲ ಮಂತ್ರಿಗಿರಿ.!

ಆದ್ರೆ, ಯಾರಿಗೆ ಸಚಿವ ಸ್ಥಾನ ಎನ್ನುವುದು ಅಧಿಕೃತ ಘೋಷಣೆ ಮಾಡಿಲ್ಲವಾದರೂ, ಯಾರಿಗೆಲ್ಲ ಸಚಿವ ಸ್ಥಾನ ಸಿಗುತ್ತೆ ಎನ್ನುವುದು ಫಿಕ್ಸ್ ಆಗಿದೆ. ಹೇಗೆಂದರೆ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಭಾವೀ ಸಚಿವರಿಗೆ ಸರ್ಕಾರಿ ಕಾರು ಅಲರ್ಟ್ ಮಾಡಲಾಗಿದೆ. 

ನೂತನ ಸಚಿವರಿಗಾಗಿ ಕುಮಾರಕೃಪ ಗೆಸ್ಟ್ ಹೌಸ್ ನಲ್ಲಿ ಕಾರು ರೆಡಿ ನಿಂತಿವೆ. ಹಾಗಾದ್ರೆ ಯಾರಿಗೆಲ್ಲ ಕಾರು ಸಿಕ್ಕಿದೆ ಎನ್ನುವ ವಿವರ ಈ ಕೆಳಗಿನಂತಿವೆ.

1.ರಮೇಶ್ ಜಾರಕಿಹೊಳಿ- (ಇನ್ನೋವಾ ಕ್ರಿಸ್ಟ) KA-01, G-6184
2.ಬೈರತಿ ಬಸವರಾಜ್-  (ಇನ್ನೋವಾ ಕ್ರಿಸ್ಟ)  KA-01, G-6178 
3. ನಾರಾಯಣಗೌಡ- (ಇನ್ನೋವಾ ಕ್ರಿಸ್ಟ) KA-41, G-2727
4.ಡಾ.ಕೆ.ಸುಧಾಕರ್-  (ಇನ್ನೋವಾ ಕ್ರಿಸ್ಟ) KA-03, G-8910
5.ಬಿ.ಸಿ,ಪಾಟೀಲ್-(ಇನ್ನೋವಾ ಕ್ರಿಸ್ಟ) KA-43, G-0009
6. ಆನಂದ್ ಸಿಂಗ್-(ಇನ್ನೋವಾ ಕ್ರಿಸ್ಟ) KA-01, G-4999
7. ಎಸ್‌.ಟಿ.ಸೋಮಶೇಖರ್-(ಇನ್ನೋವಾ)  KA-05, G-0009
8. ಶಿವರಾಮ್ ಹೆಬ್ಬಾರ್-(ಇನ್ನೋವಾ)  KA-01, G-6000

ಇದನ್ನೂ ನೋಡಿ: 10 ಮಂದಿಗೆ ಮಾತ್ರ ಸಚಿವಗಿರಿ

"