ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಬಂದ ನಂತರ ಗೋಹತ್ಯೆ ತಡೆಗಟ್ಟಲಾಗಿದೆ: ಅರುಣ ಸಿಂಗ್
ಹಿಂದೂ ಹೆಸರಿಗೆ ಅವಹೇಳನ ಮಾತುಗಳನ್ನು ಹೇಳಿರುವುದರಿಂದ ಭಾರತೀಯ ಬಹುಸಂಖ್ಯಾತ ಹಿಂದುಗಳಿಗೆ ನೋವಾಗಿದೆ. ಮುಂಬರುವ 2023ರ ಚುನಾವಣೆಯಲ್ಲಿ ಕಾಂಗ್ರೆಸಿಗರಿಗೆ ತಕ್ಕ ಪಾಠ ನೀಡಬೇಕು ಎಂದು ಕರೆ ನೀಡಿದ ಅರುಣ ಸಿಂಗ್
ಇಂಡಿ(ನ.09): ಹಿಂದೂ ಪದದ ಬಗ್ಗೆ ಕೀಳಾಗಿ ಮಾತನಾಡುವ ಕಾಂಗ್ರೆಸ್ಸಿಗರಿಗೆ ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಬಂದಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹೇಳಿದರು.
ಪಟ್ಟಣದ ಧನಶೆಟ್ಟಿಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡ ಕಾರ್ಯಕರ್ತರ ಸಂಕಲ್ಪಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸತೀಶ ಜಾರಕಿಹೊಳಿ, ಸಿದ್ದರಾಮಯ್ಯ ಇತರೆ ಕಾಂಗ್ರೆಸ್ ಮುಖಂಡರು ಹಿಂದುತ್ವದ ವಿರೋಧಿಯಾಗಿ ಅನೇಕ ಬಾರಿ ಮಾತನಾಡಿದ್ದಾರೆ. ಹಿಂದೂ ಎಂಬುವುದು ಪ್ರಾಚೀನ ಕಾಲದಿಂದ ಹೆಸರು ಬಂದಿದೆ. ಅದು ಜಾತಿ ಸೂಚಕ ಶಬ್ದವಲ್ಲ. ಹಿಂದೂ ಹೆಸರಿಗೆ ಅವಹೇಳನ ಮಾತುಗಳನ್ನು ಹೇಳಿರುವುದರಿಂದ ಭಾರತೀಯ ಬಹುಸಂಖ್ಯಾತ ಹಿಂದುಗಳಿಗೆ ನೋವಾಗಿದೆ. ಮುಂಬರುವ 2023ರ ಚುನಾವಣೆಯಲ್ಲಿ ಕಾಂಗ್ರೆಸಿಗರಿಗೆ ತಕ್ಕ ಪಾಠ ನೀಡಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಬಂದ ನಂತರ ಗೋಹತ್ಯೆ ತಡೆಗಟ್ಟಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಜನಧನ ಯೋಜನೆ, ಕಿಸಾನ್ ಸಮ್ಮಾನ್, ಹರ್ ಘರ್ ಜಲ ಯೋಜನೆ ಮೂಲಕ ದೇಶದ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿದೆ. ಅನೇಕ ಜನಪರ, ದೀನದುರ್ಬಲರ, ಬಡವರ ಪರ ಯೋಜನೆಗಳನ್ನು ಜಾರಿಗೆ ತಂದಿರುವುದು ಬಿಜೆಪಿ ಸರ್ಕಾರ. 70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಕನಿಷ್ಠ ದೇಶದ ಜನತೆಗೆ ಕುಡಿಯುವ ನೀರು ಕೊಡುವಲ್ಲಿ ವಿಫಲವಾಗಿದೆ. ಎಸ್ಟಿ, ಎಸ್ಟಿಜನಾಂಗ ಶ್ರೇಯೋಭಿವೃದ್ಧಿಗಾಗಿ ಶೇ.15 ಇರುವ ಮೀಸಲಾತಿಯನ್ನು ಶೇ.17 ಹಾಗೂ ಎಸ್ಟಿ ಸಮುದಾಯಕ್ಕೆ ಇರುವ ಶೇ.4 ಮೀಸಲಾತಿಯನ್ನು 7ಕ್ಕೆ ಹೆಚ್ಚಿಸಿರುವುದು ಬಿಜೆಪಿ ಸರ್ಕಾರದ ದಿಟ್ಟನಿರ್ಧಾರವಾಗಿದೆ. ಇಂತಹ ಬಿಜೆಪಿ ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳು ಕಾರ್ಯಕರ್ತರು ಭೂತಮಟ್ಟದಲ್ಲಿ ಜನಸಮುದಾಯಕ್ಕೆ ತಿಳಿಸಿ ಮುಂಬರುವ ಚುನಾವಣೆಯಲ್ಲಿ 150 ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.
ಬಿಜೆಪಿಯಲ್ಲಿ ಯಡಿಯೂರಪ್ಪರನ್ನ ನಿರ್ಲಕ್ಷ್ಯ ಮಾಡಲಾಗ್ತಿದ್ಯಾ: ಅರುಣ್ ಸಿಂಗ್ ಹೇಳಿದ್ದಿಷ್ಟು
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು, ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮಿಷನ್ 150 ಗೆಲ್ಲುವ ಗುರಿ ಹೊಂದಲಾಗಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ಇಂಡಿಯಿಂದಲೇ ಬಿಜೆಪಿ ಬಾವುಟ್ ಹಾರಿಸಿ ಮಿಷನ್ 150ಯಲ್ಲಿ ಇಂಡಿಯೂ ಇರಬೇಕು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, 2023 ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಪ್ರತಿಷ್ಠಾಪನೆ ಮಾಡುವುದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಪಟ್ಟಿಯನ್ನು ಮನೆಮನೆಗೆ ಹೋಗಿ ತಿಳಿಸಿ,ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಕಾರ್ಯಕರ್ತರು, ಮುಖಂಡರು ಮಾಡಬೇಕು ಎಂದು ಕೋರಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧ್ಯಕ್ಷ ಆರ್.ಎಸ್.ಕೋಚಬಾಳ ಮಾತನಾಡಿದರು.
ಮಾಜಿ ಸಚಿವ ಎಸ್.ಕೆ ಬೆಳ್ಳಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಚಂದ್ರಶೇಖರ ಕವಟಗಿ, ವಿವೇಕ ಡಬ್ಬಿ, ಪ್ರಕಾಶ ಅಕ್ಕಲಕೋಟ, ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಶಂಕರಗೌಡ ಪಾಟೀಲ ಡೋಮನಾಳ, ಸುರೇಶಗೌಡ ಬಿರಾದಾರ, ಅನೀಲ ಜಮಾದಾರ, ಮುತ್ತು ದೇಸಾಯಿ, ಮಲ್ಲಿಕಾರ್ಜನ ಜೋಗುರ, ಶ್ರೀಶೈಲಗೌಡ ಬಿರದಾರ, ಸಿದ್ದಲಿಂಗ ಹಂಜಗಿ, ರಾಜಕುಮಾರ ಸಗಾಯಿ, ರವಿ ವಗ್ಗೆ, ಭೀಮಸಿಂಗ ರಾಠೋಡ, ಯಲ್ಲಪ್ಪ ಹದರಿ, ಪುರಸಭೆ ಅಧ್ಯಕ್ಷ ಬನ್ನೇಮ್ಮ ಹದರಿ, ವಿಜಯಲಕ್ಷ್ಮೇ ರೂಗಿಮಠ ಇದ್ದರು.
ಯಡಿಯೂರಪ್ಪ ರಾಜ್ಯದ ಜನಪ್ರಿಯ ನಾಯಕ: ಅರುಣ್ ಸಿಂಗ್
ಅನೀಲಗೌಡ ಬಿರಾದಾರ, ಅನಸುಯಾ ಮದರಿ, ಸುನಂದಾ ಬಂಡಿವಡ್ಡರ, ಬೌರಮ್ಮ ಮುಳಜಿ, ಬುದ್ದುಗೌಡ ಪಾಟೀಲ, ಅಶೋಕಗೌಡ ಬಿರಾದಾರ, ವೆಂಕಟೇಶ ಕುಲಕರ್ಣಿ, ಸುನಂದಾ ವಾಲಿಕಾರ, ರವಿ ವಗ್ಗೆ, ವಿಜಯಕುಮಾರ ಮೂರಮನ, ದೇವೆಂದ್ರ ಕುಂಬಾರ, ಗಣಪತಿ ಬಾಣಿಕೋಲ, ರಾಜಶೇಖರ ಯರಗಲ್ಲ, ಶಾಂತು ಕಂಬಾರ, ಮಚೆಂದ್ರ ಕದಮ, ಸಚಿನ ಬೊಳೆಗಾಂವ, ದತ್ತಾ ಬಂಡೆನವರ, ರಾಮಂಸಿಂಗ ಕನ್ನೊಳ್ಳಿ , ಶಾಂತು ಬಿರಾದಾರ, ಶ್ರೀಶೈಲ ಮದರಿ, ದಯಾನಂದ ಹುಬ್ಬಳ್ಳಿ ಇದ್ದರು.
ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಹಿಂದುತ್ವದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವುದು ಸರಿಯಾದ ಕ್ರಮವಲ್ಲ. ಹಿಂದೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ಅವಧಿಯಲ್ಲಿ ಸಾಕಷ್ಟುಹಿಂದುಗಳ ಕೊಲೆಯಾಗಿವೆ. ಇದರಿಂದ ನಮ್ಮ ಸರ್ಕಾರ ಪಿಎಫ್‌ಐ ಸಂಘಟನೆ ಬ್ಯಾನ್ ಮಾಡಿದೆ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವುದು ಕಾಂಗ್ರೆಸ್ ಸಂಸ್ಕೃತಿ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ ಸಿಂಗ್ ತಿಳಿಸಿದ್ದಾರೆ.