ಬೆಂಗಳೂರು, [ಫೆ.02]: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಚಿತ್ರ ಅಥವ ಹೆಸರಿನ ಜೊತೆ 'ಮಿಣಿ ಮಿಣಿ' ಶಬ್ದ ಬಳಸಿ ಅಪಹಾಸ್ಯ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡಿದೆ. 

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು  'ಮಿಣಿ ಮಿಣಿ ಪೌಡರ್' ಎಂದು ಹೇಳಿಕೆ ನೀಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ  ಭಾರೀ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲದೇ ಎಚ್ ಡಿಕೆ ಫೋಟೋ ಹಾಗೂ ವಿಡಿಯೋಗಳೊಂದಿಗೆ ಫುಲ್ ಟ್ರೋಲ್ ಆಗುತ್ತಿದೆ.

ಮಿಣಿ ಮಿಣಿ ಪೌಡರ್‌ಗೆ ಸಿಡಿಮಿಡಿ: ಕೋರ್ಟ್ ಮೆಟ್ಟಿಲೇರಿದ ದೇವೇಗೌಡರ ಕುಡಿ!

ಇದರಿಂದ ನೊಂದುಕೊಂಡಿರುವ ಕುಮಾರಸ್ವಾಮಿ,  'ಮಿಣಿ ಮಿಣಿ ಪೌಡರ್' ಪದ ಬಳಕೆಗೆ ನಿರ್ಬಂಧ ಹೇರಬೇಕೆಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಮೂಲಕ ಮನವಿ ಮಾಡಿಕೊಂಡಿದ್ದರು.

ಕುಮಾರಸ್ವಾಮಿ ಪರ ವಕೀಲ ಇಸ್ಮಾಯಿಲ್ ಸಲ್ಲಿಸಿದ್ ಅರ್ಜಿಯನ್ನು ಪರಿಗಣಿಸಿದ ಕೋರ್ಟ್, ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಚಿತ್ರ ಅಥವ ಹೆಸರಿನ ಜೊತೆ 'ಮಿಣಿ ಮಿಣಿ' ಶಬ್ದ ಬಳಸಬಾರದು ಎಂದು ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಪತ್ರಿಕೆ, ಟಿ.ವಿ ಚಾನೆಲ್‌, ಸಾಮಾಜಿಕ ಜಾಲತಾಣ ಸೇರಿ ಯಾವುದೇ ಮಾಧ್ಯಮಗಳಲ್ಲಿ ಮಿಣಿ ಮಿಣಿ ಪದವನ್ನು ಕುಮಾರಸ್ವಾಮಿ ಚಿತ್ರ ಅಥವಾ ವಿಡಿಯೋದೊಂದಿಗೆ ಸೇರಿಸಿ ಪ್ರಕಟಣೆ ಅಥವಾ ಪ್ರಸಾರ ಮಾಡಬಾರದು ಕೋರ್ಟ್ ಸೂಚಿಸಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬಳಿಕ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಯೊಂದನ್ನು ನೀಡಿದ್ದರು. ಆಗ ಬಳಕೆ ಮಾಡಿದ 'ಮಿಣಿ ಮಿಣಿ' ಪದ ಭಾರಿ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಟ್ರೋಲ್ ಗಳು  ಹರಿದಾಡುತ್ತಿವೆ.