ಪರಿಷತ್ ಚುನಾವಣೆ: ಜೆಡಿಎಸ್‌ನಿಂದ ಬಿಟ್ಟು ಬಿಜೆಪಿಯಿಂದ ಗೆದ್ದ ಪುಟ್ಟಣ್ಣ..!

ಆರ್‌ಆರ್‌ ನಗರ ಹಾಗೂ ಶಿರಾ ವಿಧಾನಸಭಾ ಉಪಚುಣಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನು ವಿಧಾನಪರಿಷತ್ ಚುನಾವಣೆಯಲ್ಲೂ ಬಿಜೆಪಿ ವಿಜಯಪತಾಕೆ ಹಾರಿಸಿದೆ.

council elections JDS Candidate puttanna wins From bangaluru teachers constituency rbj

ಬೆಂಗಳೂರು, (ನ.10): ವಿಧಾನಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ  ಚುನಾವಣಾಯಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಜಯಭೇರಿ ಬಾರಿಸಿದ್ಧಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ  ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ 2200 ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪುಟ್ಟಣ್ಣ ಸತತ ನಾಲ್ಕನೇ ಬಾರಿಗೆ ಜಯ ಸಾಧಿಸಿದ್ದಾರೆ. ಇನ್ನು ಪುಟ್ಟಣ್ಣ ಅವರ ಗೆಲುವಿನ ಬಗ್ಗೆ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ರಾಜ್ಯದಲ್ಲಿ ಮತ್ತೆರೆಡು ಬೈ ಎಲೆಕ್ಷನ್: ವಿಜಯೇಂದ್ರಗೆ ಫುಲ್ ಡಿಮ್ಯಾಂಡ್

ಈಗಾಗಲೇ ಜೆಡಿಎಸ್‌ನಿಂದ ಮೂರು ಬಾರಿ ಗೆದ್ದಿದ್ದ ಪುಟ್ಟಣ್ಣ ಅವರು ರಾಜಕೀಯ ಬದಲಾವಣೆ ನಂತರ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಬಿಜೆಪಿಯಿಂದ ಸ್ಪರ್ಧಿಸಿ ನಾಲ್ಕನೇ ಭಾರಿ ಗೆಲುವು ಸಾಧಿಸಿದ್ದಾರೆ.

ಪುಟ್ಟಣ್ಣ ಪ್ರತಿಕ್ರಿಯೆ
ಮಾನ್ಯ ಮೋದಿ, ಅಮಿತ್ ಶಾ, ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿಯ ಎಲ್ಲ ನಾಯಕರು, ಕಾರ್ಯಕರ್ತರಿಗೆ ಮತ್ತು ನನ್ನ ಶಿಕ್ಷಕ ವೃಂದಕ್ಕೆ ವಿಶೇಷ ಅಭಿನಂದನೆಗಳು ಎಂದಿದ್ದಾರೆ.

ಶಿಕ್ಷಕ ವೃಂದದ ಪರ ನಾನು ಹೋರಾಟ‌ ಮುಂದುವರೆಸ್ತೇನೆ. ಮುಂದಿನ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳು ಮತ್ತು ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios