Asianet Suvarna News Asianet Suvarna News

ಉಪ ಚುನಾವಣೆ : ' ಬಿಜೆಪಿ ಅಭ್ಯರ್ಥಿ ಗೆಲ್ಲುವುದಿಲ್ಲ ಎನ್ನುವುದು ಪಕ್ಕಾ '

  • ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ್‌ ಮಾನೆ ಹಾನಗಲ್‌ ಕ್ಷೇತ್ರದ ಮನೆಯ ಮಗ ಎನಿಸಿದ್ದಾರೆ
  • ಪ್ರತಿಯೊಂದು ಗ್ರಾಮಗಳಲ್ಲಿಯೂ ಅವರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ
Congress Will win in Hanagal By Election snr
Author
Bengaluru, First Published Oct 25, 2021, 6:48 AM IST
  • Facebook
  • Twitter
  • Whatsapp

 ಹಾನಗಲ್ಲ (ಅ.25):  ಕಾಂಗ್ರೆಸ್‌ (Congress) ಅಭ್ಯರ್ಥಿ ಶ್ರೀನಿವಾಸ್‌ ಮಾನೆ (Shrinivas mane) ಹಾನಗಲ್‌ ಕ್ಷೇತ್ರದ ಮನೆಯ ಮಗ ಎನಿಸಿದ್ದಾರೆ. ಪ್ರತಿಯೊಂದು ಗ್ರಾಮಗಳಲ್ಲಿಯೂ ಅವರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇಲ್ಲಿ ಬಿಜೆಪಿ (bjp) ಅಭ್ಯರ್ಥಿ ಗೆಲ್ಲುವುದಿಲ್ಲ ಎನ್ನುವುದು ಕನ್ಫಮ್‌ ಆಗಿದ್ದರಿಂದಲೇ ಸಿಎಂ ತಮ್ಮ ಮಂತ್ರಿ ಮಂಡಲದೊಂದಿಗೆ ಠಿಕಾಣಿ ಹೂಡಿದ್ದಾರೆ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ (Santhosh Lad) ಹೇಳಿದರು.

ಹಾನಗಲ್‌ ಉಪ ಚುನಾವಣೆ (By Election) ಹಿನ್ನೆಲೆಯಲ್ಲಿ ಕ್ಷೇತ್ರದ ಆಡೂರು, ಶೀಗಿಹಳ್ಳಿ,  ಸಿಂಗಾಪುರ, ಹೇರೂರು, ಕಲಕೇರಿ, ಶಂಕರಿಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ, ಮನೆಗಳಿಗೆ ತೆರಳಿ ಮತಯಾಚಿಸಿ ಮಾತನಾಡಿದರು.

ಸಿಂದಗಿ ಸಮರ ಗೆಲ್ಲಲು ಸಿಎಂ ಬೊಮ್ಮಾಯಿ ರಣತಂತ್ರ..!

ಶ್ರೀನಿವಾಸ್‌ ಮಾನೆ (shrinivas mane) ಅವರು ಕಾಲೇಜು ದಿನಗಳಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದಾರೆ. ಅವರಲ್ಲಿ ಮಾನವೀಯತೆಗೆ ತುಡಿಯುವ ಮನಸ್ಸಿದೆ. ಬಡವರ ಕಷ್ಟ-ಕಾರ್ಪಣ್ಯಗಳಿಗೆ ಕರಗುವ ಅವರು ಮೊದಲಿನಿಂದಲೂ ಕೈಲಾದಷ್ಟುನೆರವು ನೀಡುವ ಮೂಲಕ ಜನಾನುರಾಗಿಯಾಗಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ (BJP) ಗೊಂದಲ ಮೂಡಿಸಿದ್ದರಿಂದ ಶ್ರೀನಿವಾಸ್‌ ಮಾನೆ (Shirinivas Mane) ಅಲ್ಪ ಮತಗಳಿಂದ ಪರಾಭವಗೊಂಡಿದ್ದರು. ಪರಾಭವಗೊಂಡರೂ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ವಿಶೇಷವಾಗಿ ಜನ ಕಷ್ಟದ ದಿನ ದೂಡುತ್ತಿದ್ದಾಗ ಅವರ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ ಎಂದರು.

ಯಾವುದೇ ಗ್ರಾಮಗಳಿಗೆ ಭೇಟಿ ನೀಡಿ ಮತಯಾಚಿಸಿದ ಸಂದರ್ಭದಲ್ಲಿ ಮಾನೆ ಅವರ ಬಗೆಗೆ ಜನರೇ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಬಿಜೆಪಿ (BJP) ಅಭ್ಯರ್ಥಿಯ ಮುಖ ಪರಿಚಯವೂ ನಮಗಿಲ್ಲ. ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ. ನಾವು ತೊಂದರೆಗೀಡಾದಾಗ ಯಾವೊಬ್ಬ ಬಿಜೆಪಿ (BJP) ನಾಯಕರೂ ನೆರವಿಗೆ ದೌಡಾಯಿಸಿಲ್ಲ. ಹೀಗಿರುವಾಗ ನಮ್ಮ ನೆರವಿಗೆ ಮುಂದಾಗಿದ್ದು ಮಾನೆ. ಈಗ ನಾವು ಅವರ ಕೈ ಹಿಡಿಯಬೇಕಿರುವುದು ನಮ್ಮ ಧರ್ಮ. ಯಾವುದೇ ಕಾರಣಕ್ಕೂ ಅವರ ಕೈ ಬಿಡುವುದಿಲ್ಲ. ಅವರ ನಾಯಕತ್ವ ನಮಗೆ ಬೇಕಿದೆ. ಅವರು ಚುನಾವಣೆಯಲ್ಲಿ (Election) ಗೆಲ್ಲುವುದು ಖಚಿತ ಎಂದು ಜನರೇ ಹೇಳುತ್ತಿದ್ದಾರೆ ಎಂದು ಸಂತೋಷ್‌ ಲಾಡ್‌ ಹೇಳಿದರು.

ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ್‌, ತಾಪಂ ಮಾಜಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಪ್ರಮುಖರಾದ ನಾಗಪ್ಪ ಪೋಲೇಶಿ, ವನಜಾಕ್ಷಿ ಪಾಟೀಲ, ಸಿದ್ದರಾಮಗೌಡ ಪಾಟೀಲ, ಹೇಮನಗೌಡ ಪಾಟೀಲ, ಶಿವಾಜಿ ತಹಸೀಲ್ದಾರ್‌, ನಿಂಗಪ್ಪ ಮೂಕಜ್ಜನವರ, ಶರಣ ಬಳಿಗಾರ, ಸಂತೋಷ್‌ ಹೋತನಹಳ್ಳಿ, ಗುಡ್ಡಪ್ಪ ಪೋಲೇಶಿ ಇದ್ದರು.

Follow Us:
Download App:
  • android
  • ios