ಬಿಜೆಪಿಯು ತನ್ನ ಸಾಧನೆಗಳಿಂದಲ್ಲ, ಬದಲಾಗಿ ಜನರ ಗಮನವನ್ನು ಬೇರೆಡೆ ಹರಿಸಿ ಮತ್ತು ವಿಷಯಗಳನ್ನು ತಿರುಚುವ ಮೂಲಕ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿತ್ತು. ಹೀಗಾಗಿ ಏನನ್ನೂ ತಿರುಚಲು ಬಿಜೆಪಿಗೆ ಸಾಧ್ಯವಾಗದ ರೀತಿಯಲ್ಲಿ ಕರ್ನಾಟಕದಲ್ಲಿ ನಾವು ಬಿಜೆಪಿಯನ್ನು ಎದುರಿಸಿ ಗೆಲುವು ಸಾಧಿಸಿದೆವು. ಬೇರೆಡೆ ಗಮನ ಹರಿಸುವ ಬಿಜೆಪಿಯ ಯೋಜನೆಯನ್ನು ಎದುರಿಸುವುದು ಹೇಗೆ ಎಂದು ಕರ್ನಾಟಕ ಚುನಾವಣೆಯಿಂದ ನಾವು ಪಾಠ ಕಲಿತಿದ್ದೇವೆ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 

ನವದೆಹಲಿ(ಸೆ.25): ಜನರ ಗಮನವನ್ನು ಬೇರೆಡೆ ಹರಿಸಿ ಚುನಾವಣೆ ಗೆಲ್ಲುವ ಬಿಜೆಪಿಯ ತಂತ್ರವನ್ನು ಹೇಗೆ ಎದುರಿಸಬೇಕೆಂಬ ಪಾಠವನ್ನು ಕರ್ನಾಟಕ ಚುನಾವಣೆಯಲ್ಲಿ ನಾವು ಕಲಿತಿದ್ದೇವೆ. ಮುಂದಿನ ಪಂಚರಾಜ್ಯ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್‌, ‘ಬಿಜೆಪಿಯು ತನ್ನ ಸಾಧನೆಗಳಿಂದಲ್ಲ, ಬದಲಾಗಿ ಜನರ ಗಮನವನ್ನು ಬೇರೆಡೆ ಹರಿಸಿ ಮತ್ತು ವಿಷಯಗಳನ್ನು ತಿರುಚುವ ಮೂಲಕ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿತ್ತು. ಹೀಗಾಗಿ ಏನನ್ನೂ ತಿರುಚಲು ಬಿಜೆಪಿಗೆ ಸಾಧ್ಯವಾಗದ ರೀತಿಯಲ್ಲಿ ಕರ್ನಾಟಕದಲ್ಲಿ ನಾವು ಬಿಜೆಪಿಯನ್ನು ಎದುರಿಸಿ ಗೆಲುವು ಸಾಧಿಸಿದೆವು. ಬೇರೆಡೆ ಗಮನ ಹರಿಸುವ ಬಿಜೆಪಿಯ ಯೋಜನೆಯನ್ನು ಎದುರಿಸುವುದು ಹೇಗೆ ಎಂದು ಕರ್ನಾಟಕ ಚುನಾವಣೆಯಿಂದ ನಾವು ಪಾಠ ಕಲಿತಿದ್ದೇವೆ‘ ಎಂದರು.

ಚಕ್ರವಿದ್ದರೂ ನಾಟಕ ಮಾಡಿದ್ದೇಕೆ? ಸೂಟ್‌ಕೇಸ್ ಹೊತ್ತು ಕೂಲಿಯಾದ ರಾಹುಲ್ ಗಾಂಧಿ ಟ್ರೋಲ್!

ಅಲ್ಲದೇ ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಜಯ ಖಚಿತವಾಗಿದೆ ಮತ್ತು ರಾಜಸ್ಥಾನದಲ್ಲಿ ಅತ್ಯಂತದ ಸಮೀಪದ ಸ್ಪರ್ಧೆ ಇದ್ದು, ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ನಡೆಯಲಿರುವ ಎಲ್ಲ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. 2024ರ ಲೋಸಕಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಆಘಾತ ಎದುರಿಸಲಿದೆ ಎಂದರು.

ಅಲ್ಲದೇ ಜಾತಿಗಣತಿಯಿಂದ ಪ್ರಸ್ತುತ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಹರಿಸಲು ಬಿಜೆಪಿಯು ಒಂದು ರಾಷ್ಟ್ರ ಒಂದು ಚುನಾವಣೆ ಮತ್ತು ಇಂಡಿಯಾ ಹೆಸರು ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಅಲ್ಲದೇ ಇದಕ್ಕಾಗಿಯೇ ಬಿಜೆಪಿ ಸಂಸದ ರಮೇಶ್‌ ಬಿದೂರಿ ಮತ್ತು ಕಾಂಗ್ರೆಸ್‌ ಸಂಸದ ದಾನಿಶ್‌ ಅಲಿ ಅವರ ವಾಗ್ವಾದದ ವಿವಾದ ತಂದಿದ್ದಾರೆ. ಇದು ಗೊಂದಲಗಳನ್ನು ಸೃಷ್ಟಿಸುವ ಬಿಜೆಪಿಯ ತಂತ್ರವಾಗಿದೆ ಎಂದು ಕಿಡಿಕಾರಿದರು.