Asianet Suvarna News Asianet Suvarna News

Mehangai Par Halla Bol: ಬೆಲೆಯೇರಿಕೆ ವಿರುದ್ಧ ಇಂದು ಕಾಂಗ್ರೆಸ್‌ ಮಹಾರ್‍ಯಾಲಿ

ದಿಲ್ಲಿ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ, ರಾಹುಲ್‌ ನೇತೃತ್ವ, ರಾಜ್ಯ ನಾಯಕರು ಭಾಗಿ

Congress Will Be Held Protest Against Central Government in Delhi grg
Author
First Published Sep 4, 2022, 6:40 AM IST

ನವದೆಹಲಿ(ಸೆ.04):  ಆಡಳಿತಾರೂಢ ಬಿಜೆಪಿಯ ವಿರುದ್ಧ ಎಲ್ಲಾ ವಿಧಗಳಲ್ಲೂ ದಾಳಿ ನಡೆಸಲು ತೀರ್ಮಾನಿಸಿರುವ ಕಾಂಗ್ರೆಸ್‌ ಪಕ್ಷವು ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಮತ್ತು ಅಗತ್ಯವಸ್ತುಗಳ ಮೇಲಿನ ಜಿಎಸ್‌ಟಿ ಹೇರಿಕೆಯನ್ನು ಖಂಡಿಸಿ ಭಾನುವಾರ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ. ಹೋರಾಟಕ್ಕೆ ‘ಮಹಂಗಾಯಿ ಪರ್‌ ಹಲ್ಲಾ ಬೋಲ್‌’ (ಬೆಲೆ ಏರಿಕೆ ಮೇಲೆ ದಾಳಿ) ಎಂದು ಹೆಸರಿಡಲಾಗಿದ್ದು, ಪಕ್ಷ ಬಲಪ್ರದರ್ಶನ ನಡೆಸಲಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಕಾರಣ ವಿದೇಶದಲ್ಲಿರುವುದರಿಂದ ಅವರು ಭಾಗವಹಿಸುವುದಿಲ್ಲ. ಸೋನಿಯಾ ಜತೆ ವಿದೇಶಕ್ಕೆ ತೆರಳಿದ್ದ ರಾಹುಲ್‌ ಗಾಂಧಿ ಶನಿವಾರ ಭಾರತಕ್ಕೆ ಮರಳಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ, ದಿಲ್ಲಿ ಸುತ್ತಮುತ್ತಲಿನ ರಾಜ್ಯಗಳು ಸೇರಿ ದೇಶದ ಎಲ್ಲ ರಾಜ್ಯಗಳ ಕಾಂಗ್ರೆಸ್‌ ಮುಖಂಡರು ಹಾಗೂ ಲಕ್ಷಾಂತರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

ಮಂಗಳೂರಿನಲ್ಲಿ ನಾಯಕರಿಗೆ ಮೋದಿ ಟಾಸ್ಕ್, ಟಾರ್ಗೆಟ್ ರೀಚ್ ಆಗಲು ಪಣತೊಟ್ಟ ಯಡಿಯೂರಪ್ಪ

‘ಈ ಸರ್ಕಾರ ಜನರ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದಷ್ಟುಸಂವೇದನಾರಹಿತವಾಗಿದೆ. ಕಾಂಗ್ರೆಸ್‌ ಅಧಿಕಾರ ತ್ಯಜಿಸಿದಾಗ 2014ರಲ್ಲಿ ಇದ್ದ ದರಗಳು ಹಾಘೂ 2022ರ ದರಗಳನ್ನು ನೋಡಿ. ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟಿದೆ. ಜನರ ನೋವನ್ನು ನಾವು ಬಹಿರಂಗವಾಗಿ ನೋಡಬಹುದು. ಇದಕ್ಕೆ ಮೋದಿ ಸರ್ಕಾರದ ತಪ್ಪು ನೀತಿಯೇ ಕಾರಣ. ಜವಾಬ್ದಾರಿಯುತ ಪಕ್ಷವಾಗಿ ನಾವು ಬೆಲೆ ಏರಿಕೆ ವಿರುದ್ಧ ಬೀದಿಗೆ ಇಳಿಯತ್ತಿದ್ದೇವೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಈ ಮೊದಲು ಆ.28ಕ್ಕೆ ರಾರ‍ಯಲಿಯನ್ನು ಕಾಂಗ್ರೆಸ್‌ ಆಯೋಜಿಸಿತ್ತು. ಆದರೆ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಅನಾರೋಗ್ಯ ಉಂಟಾಗಿದ್ದರಿಂದ ಹಾಗೂ ದಿಲ್ಲಿಯಲ್ಲಿ ಕೋವಿಡ್‌ ತೀವ್ರವಾಗಿದ್ದ ಕಾರಣ ಸೆ.4ಕ್ಕೆ ಮುಂದೂಡಿತ್ತು. ಇದಕ್ಕೂ ಮೊದಲು ಆ.5ರಂದು ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ಸಿಗರು ದಿಲ್ಲಿಯಲ್ಲಿ ಕಪ್ಪುಬಟ್ಟೆಧರಿಸಿ ಬೃಹತ್‌ ಪ್ರತಿಭಟನೆ ನಡೆಸಿದ್ದರು.

ಪಳನಿಸ್ವಾಮಿಯೇ AIADMK ಬಾಸ್‌: ಮದ್ರಾಸ್‌ ಹೈಕೋರ್ಟ್‌ ತೀರ್ಪಿನಿಂದ ಓಪಿಎಸ್‌ಗೆ ಹಿನ್ನೆಡೆ

ಇದಾದ ಬಳಿಕ ಸೆ.7ರಿಂದ ಬೆಲೆ ಏರಿಕೆಯ ವಿರುದ್ಧ ಜನರಿಗೆ ಅರಿವು ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್‌ ಬೃಹತ್‌ ಪಾದಯಾತ್ರೆ ಸಹ ಹಮ್ಮಿಕೊಂಡಿದೆ. ಈ ಮೂಲಕ ಸರ್ಕಾರದ ವಿರುದ್ಧ ಬೃಹತ್‌ ಮಟ್ಟದಲ್ಲಿ ದಾಳಿ ನಡೆಸಲು ಕಾಂಗ್ರೆಸ್‌ ಒಂದೇ ತಿಂಗಳಲ್ಲಿ 2 ಕಾರ್ಯಕ್ರಮಗಳನ್ನು ಏರ್ಪಡಿಸಿದೆ.

ಹಲ್ಲಾ ಬೋಲ್‌!

- ಬೆಲೆ ಏರಿಕೆ, ನಿರುದ್ಯೋಗ, ಜಿಎಸ್‌ಟಿ ಹೇರಿಕೆಗೆ ಕಾಂಗ್ರೆಸ್‌ ವಿರೋಧ
- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಬೃಹತ್‌ ಪ್ರತಿಭಟನೆ
- ಆಗಸ್ಟ್‌ 28ರಂದು ನಡೆಯಬೇಕಿದ್ದ ಪ್ರತಿಭಟನೆ ಇಂದು ಆಯೋಜನೆ
- ‘ಮಹಂಗಾಯಿ ಪರ್‌ ಹಲ್ಲಾ ಬೋಲ್‌’ ಹೆಸರಿನಲ್ಲಿ ಭಾರೀ ಹೋರಾಟ
- ಅನಾರೋಗ್ಯ ಹಿನ್ನೆಲೆಯಲ್ಲಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಗೈರು
 

Follow Us:
Download App:
  • android
  • ios