*  ಮುಂದಿನ ಚುನಾವಣೆಗೆ ನಿರುದ್ಯೋಗಿಗಳಿಗೆ ಪ್ರತ್ಯೇಕ ಪ್ರಣಾಳಿಕೆ*  ರಾಹುಲ್‌ ಗಾಂಧಿ ಭಾಷಣ ಪ್ರಚಾರ ಮಾಡಿ*  ರಾಹುಲ್‌ ಗಾಂಧಿಯನ್ನು ಪ್ರಧಾನಮಂತ್ರಿ ಮಾಡುವುದೇ ನಮ್ಮ ಗುರಿ 

ಬೆಂಗಳೂರು(ಫೆ.11): ಮುಂದಿನ ವಿಧಾನಸಭೆ ಚುನಾವಣೆ(Assembly Elections) ವೇಳೆ ರಾಜ್ಯದ ನಿರುದ್ಯೋಗಿ ಯುವಕರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಘೋಷಿಸಿದ್ದಾರೆ.

ಇದೇ ವೇಳೆ ಶೀಘ್ರದಲ್ಲೇ ಯುವ ಕಾಂಗ್ರೆಸ್‌(Youth Congress) ವತಿಯಿಂದ ಪ್ರತಿ ಹಳ್ಳಿಗಳಲ್ಲಿ ನಿರುದ್ಯೋಗಿಗಳ ಜಾಥಾ ಮಾಡಿ ಅವರಿಗೆ ಧೈರ್ಯ ತುಂಬಬೇಕು ಎಂದು ಯುವ ಕಾಂಗ್ರೆಸ್‌ಗೆ(Congress) ಕರೆ ನೀಡಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ(Bengaluru) ಮಾತನಾಡಿ, ರಾಜ್ಯದಲ್ಲಿ(Karnataka) ನಿರುದ್ಯೋಗ ಸಮಸ್ಯೆ(Unemployment Problem) ಹೆಚ್ಚಾಗಿದೆ. ಎಲ್ಲಾ ವಯೋಮಾನದವರು ನಿರುದ್ಯೋಗದಿಂದ ಬೀದಿಗೆ ಬೀಳುವಂತಾಗಿದೆ. ಈ ಬಗ್ಗೆ ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಹೀಗಾಗಿ ಮುಂದಿನ ಚುನಾವಣೆಗೆ ನಿರುದ್ಯೋಗಿ ಯುವಕರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡುತ್ತೇವೆ. ಜತೆಗೆ ಯುವಕರಿಗೆ ಧೈರ್ಯ ತುಂಬಲು ಪ್ರತಿ ಹಳ್ಳಿಗಳಲ್ಲೂ ನಿರುದ್ಯೋಗಿಗಳ ಜಾಥಾ ನಡೆಸುತ್ತೇವೆ ಎಂದು ಹೇಳಿದರು.

Karnataka Politics: ಸಿದ್ದು, ಡಿಕೆಶಿ ಇಬ್ಬರಿಗೂ ಸಿಎಂ ಆಗುವ ಹುಚ್ಚು: ಕುಮಾರಸ್ವಾಮಿ

ರಾಹುಲ್‌ ಗಾಂಧಿ ಭಾಷಣ ಪ್ರಚಾರ ಮಾಡಿ:

ಜತೆಗೆ ರಾಹುಲ್‌ ಗಾಂಧಿ(Rahul Gandhi) ಅವರು ಸಂಸತ್‌ನಲ್ಲಿ ಅತ್ಯುತ್ತಮ ಭಾಷಣ ಮಾಡಿದ್ದಾರೆ. ಆ ಭಾಷಣವನ್ನು ಪುಸ್ತಕ ಮಾಡಿಸಿ ಅದನ್ನು ಪ್ರಚಾರ ಮಾಡಿ ಅದರ ಮೇಲೆ ಎಲ್ಲೆಡೆ ಚರ್ಚೆ ಆರಂಭಿಸಬೇಕು. ಇದನ್ನು ವರ್ಚುವಲ್‌ ಮೂಲಕವಾದರೂ ಮಾಡಬಹುದು. ಈ ದೇಶದಲ್ಲಿ ಉದ್ಭವಿಸಿರುವ ಪರಿಸ್ಥಿತಿ, ನೆಹರೂ ಅವರಿದ್ದಾಗ ದೇಶವನ್ನು ಹೇಗೆ ಕಟ್ಟಲಾಯಿತು? 75 ವರ್ಷಗಳ ಇತಿಹಾಸವೇನು? ಕಳೆದ ಏಳೂವರೆ ವರ್ಷಗಳ ಇತಿಹಾಸವೇನು? ಎಂಬ ಬಗ್ಗೆ ಚರ್ಚೆ ಆರಂಭಿಸಬೇಕು ಎಂದು ಕರೆ ನೀಡಿದರು.

ಅಧಿಕಾರಕ್ಕೆ ಬಂದರೆ ಎನ್‌ಇಪಿ ಸುಡುತ್ತೇವೆ:

ಬಿಜೆಪಿಯವರು(BJP) ಯುವಕರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿದ್ದಾರೆ. ತಮ್ಮದೇ ವಿದ್ಯಾಸಂಸ್ಥೆಗಳ ಮೂಲಕ ಯುವಕರ ತಲೆಯಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕವೇ ಅದನ್ನೇ ಮಾಡಲು ಹೊರಟಿದ್ದಾರೆ. ಇದು ನಾಗಪುರ ಶಿಕ್ಷಣ ನೀತಿ. 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಆ ಶಿಕ್ಷಣ ನೀತಿಯನ್ನು ಸುಡುತ್ತೇವೆ. ನಮ್ಮ ಗುರಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದು ಹಾಗೂ 2024ಕ್ಕೆ ರಾಹುಲ್‌ ಗಾಂಧಿಯನ್ನು ಪ್ರಧಾನಮಂತ್ರಿ(Prime Minister) ಮಾಡುವುದು ಎಂದು ಹೇಳಿದರು.

ಶಾಂತಿ ಕದಡಲು ಯತ್ನ: ಡಿಕೆಶಿ ವಿರುದ್ಧ ಬಿಜೆಪಿ ದೂರು

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ(Social Media) ಜನರ ನಡುವೆ ದ್ವೇಷ ಉಂಟು ಮಾಡುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಸುಳ್ಳು ಸುದ್ದಿಗಳನ್ನು ಪೋಸ್ಟ್‌ ಮಾಡುತ್ತಿರುವ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ(BJP) ಕಾನೂನು ಪ್ರಕೋಷ್ಠದಿಂದ ಬುಧವಾರ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌(Praveen Sood) ಅವರಿಗೆ ದೂರು ನೀಡಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಹಿಂಸೆ, ದ್ವೇಷ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಮಾದರಿಯ ವಿಷಯಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

Karnataka Politics: ಡಿಕೆಶಿ ಮನೆಗೆ ಹೋಗಬಾರದಿತ್ತು, ಈಗ ಅರಿವಾಗಿದೆ: ಆನಂದ್‌ ಸಿಂಗ್‌

ರಾಜ್ಯ ಬಿಜೆಪಿ ಕೋಶಾಧ್ಯಕ್ಷರಾದ ಸುಬ್ಬನರಸಿಂಹ, ಬೆಂಗಳೂರು ದಕ್ಷಿಣ ಜಿಲ್ಲೆ ಕಾನೂನು ಪ್ರಕೋಷ್ಠದ ಸಂಚಾಲಕ ಯಶವಂತ್‌ ಮತ್ತು ಸಾಮಾಜಿಕ ಜಾಲತಾಣದ ರಾಜ್ಯ ಸಂಚಾಲಕ ವಿನೋದ್‌ ಕೃಷ್ಣಮೂರ್ತಿ ಈ ವೇಳೆ ಉಪಸ್ಥಿತರಿದ್ದರು.

ತಾರಕಕ್ಕೇರಿದ ಹಿಜಾಬ್ ವಿವಾದ, ಬೆಂಕಿಗೆ ತುಪ್ಪ ಸುರಿದ ಡಿಕೆಶಿ ಟ್ವೀಟ್

ಶಿವಮೊಗ್ಗ: ಉಡುಪಿಯ(Udupi) ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್(Hijab)- ಕೇಸರಿ ಶಾಲು ಗಲಾಟೆ ಇದೀಗ ಇತರ ಜಿಲ್ಲೆಗಳಿಗೂ ವ್ಯಾಪಿಸಿದ್ದು, ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಸಾಧ್ಯವಾಗದಂತಾಗಿದೆ. ವಿದ್ಯಾರ್ಥಿಗಳು ಅನ್ಯಕೋಮಿನ ವಿದ್ಯಾರ್ಥಿಗಳ ವಿರುದ್ಧ ಕಿಡಿ ಕಾರುತ್ತಿದ್ದು, ಕಲ್ಲು ತೂರಾಟ ಸಾಮಾನ್ಯವಾಗಿದೆ. ಈ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ರಾಜ್ಯಾದ್ಯಂತ(Karnataka) ಕಾಲೇಜುಗಳಿಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ.

ಇನ್ನು ಈ ವಿವಾದದ ನಡುವೆಯೇ ಶಿವಮೊಗ್ಗದ(Shivamogga) ಕಾಲೇಜೊಂದರಲ್ಲಿ ರಾಷ್ಟ್ರಧ್ವಜ(National Flag) ಹಾರಿಸುವ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜ(Saffron flag) ಹಾರಿದ ವಿಚಾರ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಹೌದು ಕಾಲೇಜಿನ ಎದುರು ಇದ್ದ ಧ್ವಜಸ್ತಂಭವೊಂದಕ್ಕೆ ಕೇಸರಿ ಬಾವುಟ ಏರಿಸಿ ಹಾರಿಸಲು ವಿದ್ಯಾರ್ಥಿಯೋರ್ವ ಯತ್ನಿಸಿದ್ದು, ಮಂಗಳವಾರ ಶಿವಮೊಗ್ಗದಲ್ಲಿ ನಡೆದ ಹಿಜಾಬ್‌- ಕೇಸರಿ ಶಾಲು ವಿವಾದದ ಘಟನೆಯ ಸಂಘರ್ಷಕ್ಕೆ ಮೂಲ ಕಾರಣವಾಯಿತು.