ಕುತೂಹಲ ಕೆರಳಿಸಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಬಗ್ಗೆ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಟಿಕೆಟ್‌ನಿಂದ ವಂಚಿತರಾಗಿರುವ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಅವರ ನಡೆ ಕುತೂಹಲ ಮೂಡಿಸಿದೆ.

ಶಿವಮೊಗ್ಗ (ಏ.15) ಕುತೂಹಲ ಕೆರಳಿಸಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಬಗ್ಗೆ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಟಿಕೆಟ್‌ನಿಂದ ವಂಚಿತರಾಗಿರುವ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಅವರ ನಡೆ ಕುತೂಹಲ ಮೂಡಿಸಿದೆ.

 ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಂದ ಬಂಡಾಯ ಸ್ಪರ್ಧೆ ಮಾಡುವಂತೆ ಒತ್ತಡ ಇದೆ ಎಂದು ಹೇಳಿದರು.

ನನ್ನ ವಿರುದ್ಧ ಭ್ರಷ್ಟ​ತೆ ಸಾಬೀ​ತಾದ್ರೆ 1 ಕೋಟಿ ರು. ಬಹು​ಮಾ​ನ: ಹರತಾಳು ಹಾಲಪ್ಪ ಸವಾಲು

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಬಂಡಾಯ ಸ್ಪರ್ಧೆ ಕುರಿತು ಕ್ಷೇತ್ರದ ಕಾರ್ಯಕರ್ತರ ಮತ್ತು ಬೆಂಬಲಿಗರ ಅಭಿಪ್ರಾಯ ಸಂಗ್ರಹ ಮಾಡುತ್ತೇನೆ ಹಾಗೆಯೇ ಶೃಂಗೇರಿ ಶ್ರೀಗಳು ಮತ್ತು ಮಂತ್ರಾಲಯ ಶ್ರೀಗಳ ಭೇಟಿ ಮಾಡಿ ಅವರಿಂದಲೂ ಅಭಿಪ್ರಾಯ ಕೇಳುತ್ತೇನೆ. ಕಾರ್ಯಕರ್ತರು, ಬೆಂಬಲಿಗರ ಮತ್ತು ಶ್ರೀಗಳ ಅಭಿಪ್ರಾಯದಂತೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಪಕ್ಷದ ವರಿಷ್ಠರು ಯಾವ ಮಾನದಂಡದ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಿದ್ದಾರೋ ಗೊತ್ತಿಲ್ಲ 11 ಜನ ಆಕಾಂಕ್ಷಿಗಳ ಪಕ್ಷದಿಂದ ಬೇರೆಯವರಿಗೆ ಟಿಕೆಟ್ ಕೊಡಬಾರದು ಎಂದು ಒಗ್ಗಟ್ಟು ಪ್ರದರ್ಶನ ಮಾಡಿದ್ದೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು. ಈ ಟಿಕೆಟ್ ಕೈತಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸದ್ಯಕ್ಕೆ ಕಾದು ನೋಡುತ್ತೇನೆ ಇನ್ನೆರಡು ದಿನಗಳಲ್ಲಿ ನನ್ನ ಸ್ಪರ್ಧೆ ಕುರಿತು ಸೂಕ್ತ ಮತ್ತು ಖಚಿತ ನಿರ್ಧಾರಕ್ಕೆ ಬರುತ್ತೇನೆ ಎಂದು ಹೇಳಿದರು.

ಕೈ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನ:

ಶಿವಮೊಗ್ಗ ನಗರದ ಕ್ಷೇತ್ರದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಅವರನ್ನು ಕೈ ಬಿಟ್ಟು ಎಚ್‌.ಸಿ.ಯೋಗೇಶ್‌ ಅವರಿಗೆ ಟಿಕೆಟ್‌ ನೀಡಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. 2013ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಕೆ.ಬಿ.ಪ್ರಸನ್ನಕುಮಾರ್‌ 2018ರಲ್ಲಿ ಸೋಲು ಕಂಡಿದ್ದರು. ಈ ಬಾರಿ ಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಅವರಿಗೆ ಟಿಕೆಟ್‌ ಕೈ ತಪ್ಪಿರುವುದರಿಂದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.

ಇಂದು ಬೆಂಬಲಿಗರೊಂದಿಗೆ ಸಭೆ: 

ಎಚ್‌.ಸಿ.ಯೋಗೇಶ್‌ಗೆ ಟಿಕೆಟ್‌ ಘೋಷಣೆ ಆಗುತ್ತಿದ್ದಂತೆ ಕೆ.ಬಿ.ಪ್ರಸನ್ನಕುಮಾರ್‌ ಅವರ ಬೆಂಬಲಿಗರು ಅವರ ಮನೆಗೆ ದೌಡಾಯಿಸಿದ್ದು, ಟಿಕೆಟ್‌ ವಿಚಾರದಲ್ಲಿ ಹೈಕಮಾಂಡ್‌ ನಿರ್ಧಾರವನ್ನು ವಿರೋಧಿಸಿದ್ದಾರೆ. ಕಾರ್ಯಕರ್ತರ ಒತ್ತಡಕ್ಕೆ ಮಣಿದಿರುವ ಕೆ.ಬಿ.ಪ್ರಸನ್ನಕುಮಾರ್‌ ಅವರ ಮುಂದಿನ ನಡೆ ಬಗ್ಗೆ ಭಾನುವಾರ ಬೆಂಬಲಿಗರೊಂದಿಗೆ ಸಭೆ ಕರೆದಿದ್ದಾರೆ. ಇವರು ಎಚ್‌.ಸಿ.ಯೊಗೀಶ್‌ ಅವ​ರಿಗೆ ಬೆಂಬಲ ನೀಡುತ್ತಾರೋ, ಇಲ್ಲ ಬಂಡಾಯವಾಗಿ ಸ್ಪರ್ಧೆ ಮಾಡುತ್ತಾರೋ ಎಂಬುದು ಸಭೆಯಲ್ಲಿ ತೀರ್ಮಾನವಾಗಲಿದೆ ಎನ್ನಲಾಗುತ್ತಿದೆ.

ಆಯನೂರು ಮಂಜುನಾಥ್‌ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ: ರಾಜ್ಯಾಧ್ಯಕ್ಷರಿಗೆ ಪತ್ರ

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿ ಇದ್ದೆ. ಆದರೆ, ಎಚ್‌.ಸಿ.ಯೋಗೇಶ್‌ ಅವರಿಗೆ ಸಿಕ್ಕಿದೆ. ಅಭಿಮಾನಿಗಳು, ಬೆಂಬಲಿಗರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನೆಲೆ ಭಾನುವಾರ ಬೆಂಬಲಿಗರು ಭಾನುವಾರ ಸಭೆ ಕರೆದಿದ್ದಾರೆ. ಸಭೆ ತೀರ್ಮಾನದ ನಂತರ ನನ್ನ ಮುಂದಿನ ನಡೆಯನ್ನು ತಿಳಿಸುತ್ತೇನೆ

ಕೆಬಿ ಪ್ರಸನ್ನ ಕುಮಾರ್ ಮಾಜಿ ಶಾಸಕ