Karnataka Politics: ಜಾತ್ಯತೀತ ಬದ್ಧತೆಯ ಪಕ್ಷ ಕಾಂಗ್ರೆಸ್: ಎಚ್.ವೈ.ಮೇಟಿ
* ಸಮಾನತೆಯಿಂದ ಕಾಣುವ ಕಾಂಗ್ರೆಸ್ ಪಕ್ಷ
* ನಮ್ಮಲ್ಲಿರುವ ವೈಮನಸ್ಸು ಬದಿಗಿರಿಸಿ ಪಕ್ಷ ಸಂಘಟನೆ ಮಾಡಬೇಕು
* ಪಕ್ಷ ಸಿದ್ಧಾಂತಕ್ಕೆ ಬದ್ಧರಾಗಿ ಎಲ್ಲರೂ ಕೆಲಸ ಮಾಡಬೇಕು
ಬಾಗಲಕೋಟೆ(ಡಿ.12): ಮುಂದಿನ ವಿಧಾನಸಭಾ ಚುನಾವಣೆ ನಮ್ಮ ಮೊದಲ ಗುರಿಯಾಗಿದ್ದು ಈ ನಿಟ್ಟಿನಲ್ಲಿ ಬಾಗಲಕೋಟೆ(Bagalkot) ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಲಕ್ಷ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದ್ದು ಎಲ್ಲರೂ ಸಹಕಾರ ನೀಡಬೇಕೆಂದು ಮಾಜಿ ಸಚಿವ ಎಚ್.ವೈ.ಮೇಟಿ(HY Meti) ಹೇಳಿದರು.
ಬಾಗಲಕೋಟೆ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಬೂತ್ ಮಟ್ಟದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾತ್ಯತೀತ ಬದ್ಧತೆ ಇರುವ ಪಕ್ಷ ನಮ್ಮದು. ಈ ನಿಟ್ಟಿನಲ್ಲಿ ಸ್ಥಳೀಯ ಕಾರ್ಯಕರ್ತರು ಈ ಅಭಿಯಾನಕ್ಕೆ ಬೆಂಬಲ ನೀಡುವ ಮೂಲಕ ಸದಸ್ಯತ್ವ ಪಡೆಯಬೇಕು. ಜಾತ್ಯತೀತತೆಯನ್ನು(Secular) ಸಂಪೂರ್ಣವಾಗಿ ನಿರ್ನಾಮ ಮಾಡುವ ನಿಟ್ಟಿನಲ್ಲಿ ಕೆಲವು ಪಕ್ಷಗಳು ನಡವಳಿಕೆಯನ್ನು ತೋರುತ್ತಿವೆ. ಇದಕ್ಕೆ ಯಾರೂ ಗಮನ ಕೊಡದೆ ಪಕ್ಷವನ್ನು ಬಲಪಡಿಸುವತ್ತ ಗಮನ ಹರಿಸಬೇಕು ಎಂದರು.
ಕಾಂಗ್ರೆಸ್(Congress) ಮುಖಂಡ ಉಮೇಶ ಮೇಟಿ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆ(Assembly Election) ಗಮನದಲ್ಲಿಕೊಂಡು ಪಕ್ಷದ ಬೆಳವಣಿಗೆಯಲ್ಲಿ ಪಾಲ್ಗೊಳ್ಳಿ, ಸಹಕಾರದ ಮೂಲಕ ಕಾರ್ಯನಿರ್ವಹಿಸಿ ಎಂದರು. ಈ ಸಂದರ್ಭದಲ್ಲಿ ಗ್ರಾಮೀಣ ಅಧ್ಯಕ್ಷ ಎಸ್.ಎನ್. ರಾಂಪೂರ, ಬೂತ್ ಅಧ್ಯಕ್ಷರಾದ ಸಿಕಂದರ್ ಮೇಟಗುಡ್, ಯಲ್ಲಪ್ಪ ಕಂಬಾರ್, ಗ್ರಾಪಂ ಸದಸ್ಯ ಸಂಗನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಣ್ಣೂರದಲ್ಲೂ ಅಭಿಯಾನ:
ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ(Karnataka) ಮತ್ತೇ ಅಧಿಕಾರಕ್ಕೆ ಬರುವವರೆಗೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಕರ್ತರು(Activists) ನಿರಂತರವಾಗಿ ದುಡಿಯಬೇಕಾಗಿದೆ ಎಂದು ಬಾಗಲಕೋಟೆ ತಾಲೂಕು ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಎಸ್.ಎನ್. ರಾಂಪೂರ ಹೇಳಿದರು.
ಸಮೀಪದ ಬೆಣ್ಣೂರ, ಹೊಸೂರ, ಇಂಗಳಗಿ, ಆಲೂರ್ ಎಲ್.ಟಿ. ಗ್ರಾಮಗಳಲ್ಲಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಸಿದ್ಧಾಂತವನ್ನು ಬುಡಮೇಲು ಮಾಡಿ ದೇಶವನ್ನು ನಾಶಮಾಡುವ ಹುನ್ನಾರ ಬಿಜೆಪಿಯಿಂದ ನಡೆದಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ(Central Government) ವಿರುದ್ಧ ಧ್ವನಿ ಎತ್ತುವವರ ದಮನ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದನ್ನು ನಿಯಂತ್ರಿಸುವ ಅಧಿಕಾರ ಮತದಾರ ಪ್ರಭುಗಳಿಗೆ ಇದ್ದು, ಮುಂಬರುವ ಯಾವುದೇ ಚುನಾವಣೆಯಲ್ಲಿ ವಿಚಾರ ಮಾಡಿ ಮತ ಹಾಕುವಂತೆ ಜನರಲ್ಲಿ ವಿನಂತಿಸಿದರು. ಬರಲಿರುವ ವಿಧಾನ ಪರಿಷತ್ ಚುನಾವಣಾ(Vidhan Parishat Election) ಫಲಿತಾಂಶ ನಮ್ಮ ಪಕ್ಷದ ಅಭ್ಯರ್ಥಿ ಸುನೀಲಗೌಡ ಪಾಟೀಲ(Sunilgouda Patil) ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಮೊದಲ ಪ್ರಾಶಸ್ತ್ಯದಲ್ಲೇ ಆಯ್ಕೆ ಆಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ಮುತ್ತಪ್ಪ ಚಿನಗಿರಿ, ಮಹಾದೇವ ಹುಂಡೇಕಾರ, ಮಹೇಶ ಶೆಲ್ಲರ್, ನೀಲಪ್ಪ ಕುರಿ, ಮಹಾಂತೇಶ ತೋಟಗೇರ, ಚಂದ್ರಪ್ಪ ಮಾಳಿ ಸೇರಿದಂತೆ ಹಲವರು ಇದ್ದರು.
ಸಮಾನತೆಯಿಂದ ಕಾಣುವ ಕಾಂಗ್ರೆಸ್ ಪಕ್ಷ
ಮಹಾಲಿಂಗಪುರ(Mahalingapur): ಕಾಂಗ್ರೆಸ್ ಎಲ್ಲರನ್ನೂ ಸಮಾನ ದೃಷ್ಟಿಮತ್ತು ಗೌರವದಿಂದ ಕಾಣುವ ಪಕ್ಷವೆಂದು ಕಾಂಗ್ರೆಸ್ ಹಿರಿಯ ಧುರೀಣ ಡಾ. ಎ.ಆರ್. ಬೆಳಗಲಿ ಹೇಳಿದರು.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವತಿಯಿಂದ ತೇರದಾಳ(Terdal) ಮತಕ್ಷೇತ್ರದ ರಬಕವಿ-ಬನಹಟ್ಟಿತಾಲೂಕು ಹಾಗೂ ಮಹಾಲಿಂಗಪುರ ಬ್ಲಾಕ್ ಕಾಂಗ್ರೆಸ್ ಸಹಯೋಗದಲ್ಲಿ ಶನಿವಾರ ಮಾದರ ಚೆನ್ನಯ್ಯ ಭವನದಲ್ಲಿ ಹಮ್ಮಿಕೊಂಡ ನೂತನ ಸದಸ್ಯತ್ವ ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನದ ಪ್ರತಿರೂಪದಂತೆ ದೇಶದಲ್ಲಿ ಇತರೆ ಪಕ್ಷಗಳಿಗಿಂತಲೂ ಕಾಂಗ್ರೆಸ್‌ಗೆ ಒಂದು ವಿಶಿಷ್ಟವಾದ ಸ್ಥಾನ ಪಡೆದಿದೆ. ಏಕೆಂದರೆ ದೇಶದ ಪ್ರತಿಯೊಬ್ಬರನ್ನೂ ಸಮಾನ ದೃಷ್ಟಿಯಿಂದ ನೋಡುವ, ಎಲ್ಲ ಸಮುದಾಯಗಳ ಅಭಿವೃದ್ಧಿ ಬಯಸುವ ಪಕ್ಷವಾಗಿದೆ. ಆದ್ದರಿಂದ ಪಕ್ಷ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡುವಂತಹರನ್ನು ಸದಸ್ಯರನ್ನಾಗಿ ಮಾಡಿಕೊಳ್ಳೋಣ ಎಂದರು.
Karnataka Politics: ಜನತೆಯ ಆಶೋತ್ತರಗಳಿಗೆ ಕಾಂಗ್ರೆಸ್ ಸ್ಪಂದನೆ: ತಿಮ್ಮಾಪೂರ
ಕಾಂಗ್ರೆಸ್ ಹಿರಿಯ ನಾಯಕ ಶ್ರೀಪಾದ ಗುಂಡಾ ಹಾಗೂ ಪುರಸಭಾ ಸದಸ್ಯ ಜಾವೇದ್ ಭಾಗವಾನ ಮಾತನಾಡಿ, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ನಂತರ ಖಾಲಿ ಇದ್ದ ದೇಶವನ್ನು ನೂರಾರು ಡ್ಯಾಮ್‌ಗಳನ್ನು ಕಟ್ಟಿ, ಹಸಿರು ಕ್ರಾಂತಿ ಮೂಲಕ
ರೈತರ ಹಾಗೂ ದೇಶದ ಸಮೃದ್ಧಿ ಜೊತೆಗೆ ಜನತೆಯ ನೆಮ್ಮದಿಯ ಬಾಳಿಗೆ ಕಾರಣೀಭೂತವಾಗಿದೆ ಎಂದರು.
ರಾಜ್ಯ ಕಿಸಾನ್ ಕಾಂಗ್ರೆಸ್ ಸಂಚಾಲಕ ಸಿದ್ದು ಕೊಣ್ಣೂರ ಮಾತನಾಡಿ, ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಕ್ಷೇತ್ರಾದ್ಯಂತ ಬೂತ್ ಮಟ್ಟದಲ್ಲಿ ಉತ್ತಮ ಕಾರ್ಯಕರ್ತರನ್ನು ಸೇರಿಸಿಕೊಳ್ಳುವ ಮತ್ತು ನಮ್ಮ ನಮ್ಮಲ್ಲಿರುವ ವೈಮನಸ್ಸುಗಳನ್ನು ಬದಿಗಿರಿಸಿ ಪಕ್ಷ ಸಂಘಟನೆ ಮಾಡಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಜಗದೀಶ್ ಘಟ್ನಟ್ಟಿ, ಯಲ್ಲನಗೌಡ ಪಾಟೀಲ್, ಬಸವರಾಜ ರಾಯರ, ಮಹಾಲಿಂಗಪ್ಪ ತಟ್ಟಿಮನಿ, ಮುಸ್ತಾಕ ಚಿಕ್ಕೋಡಿ, ಬಲವಂತಗೌಡ ಪಾಟೀಲ, ಬಸವರಾಜ್ ಬುರುಡ, ರಾಜು ಗೌಡಪ್ಪಗೋಳ, ಮಹಾಲಿಂಗಪ್ಪ ಲಾತೂರ, ಸಯ್ಯದ ಯಾದವಾಡ, ಲಕ್ಷ್ಮಣ ಮಾಂಗ, ಅರ್ಜುನ ದೊಡಮನಿ, ಮಹಾಲಿಂಗ ಮಾಳಿ, ಸಿದ್ದು ಬೂಸನ್ನವರ್, ಸುರೇಶ ಜಾಧವ, ನಜೀರ ಅತ್ತಾರ, ಶಶಿಕಾಂತ್ ಮುಖ್ಯೇನವರ್ ಇದ್ದರು. ಶಂಕರ ಸೊನ್ನದ ನಿರೂಪಿಸಿದರು.